ಕ್ರೀಡೆ ಆಡುವವರು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ:ಬಸವರಾಜ ಬೊಮ್ಮಾಯಿ
ಕ್ರೀಡೆಯಿಂದ ಶಿಸ್ತು, ಚಾರಿತ್ರ್ಯ ಬರುತ್ತದೆ:ಬಸವರಾಜ ಬೊಮ್ಮಾಯಿ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹಾವೇರಿ(ಹಾನಗಲ್):
ಶುಕ್ರವಾರ ಹಾವೇರಿ ಜಿಲ್ಲೆಯ ಹಾನಗಲ್ಲ ನಗರದ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ ಸಂಸದ ಕ್ರೀಡಾ ಮಹೋತ್ಸವ 2025-26 ರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಸಣ್ಣವರಿದ್ದಾಗ ಎಲ್ಲರೂ ಒಂದಿಲ್ಲಾ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುತ್ತೇವೆ. ಆದರೆ, ಅದನ್ನು ಮುಂದುವರೆಸಿಕೊಂಡು ಹೋಗುವುದಿಲ್ಲ. ಕ್ರೀಡೆಯೊಂದಿಗಿನ ನಂಟು ಜೀವನದ ಅರ್ಧದಲ್ಲಿಯೇ ನಿಂತು ಹೋಗುತ್ತದೆ. ಯಾರು ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಅವರು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಕರವಾಗಿರುತ್ತಾರೆ. ಅಷ್ಟೇ ಅಲ್ಲ ಎಂಥ ಸಂದರ್ಭದಲ್ಲಿಯೂ ಸುಖ ದುಖವನ್ನು ಸಮನಾಗಿ ತೆಗೆದುಕೊಂಡು ಹೋಗುವ ಚೈತನ್ಯ ಕ್ರೀಡಾ ಮನೋಭಾವದಿಂದ ಬರುತ್ತದೆ ಎಂದು ಹೇಳಿದರು.
ಕ್ರೀಡೆಗೆ ವಯಸ್ಸಿನ ಸಂಬಂಧ ಇಲ್ಲ ಅಂತ ಇಲ್ಲಿಗೆ ಬಂದಾಗ ಗೊತ್ತಾಯಿತು. ವೈಭವಿ ಮಹಿಳಾ ಮಂಡಳದವರು ಸ್ಫೂರ್ತಿಯಿಂದ, ಬಹಳ ಉತ್ಸಾಹದಿಂದ ಆಡಿದರು. ಮನಸಿದ್ದರೆ ಕ್ರೀಡೆಯನ್ನು ಯಾವ ವಯಸ್ಸಿನಲ್ಲಿಯಾದರೂ ಆಡಬಹದು ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ, ಇಡೀ ದಿನ ಎಲ್ಲರೂ ಸಕ್ರೀಯರಾಗಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ. ನಿಜವಾಗಲೂ ಬಹಳ ಸಂತೋಷವಾಗಿದೆ ಎಂದು ಹೇಳಿದರು.
ಕ್ರೀಡೆ ಜೀವನಕ್ಕೆ ಬಹಳ ಹತ್ತಿರ. ಸೋಲಬಾರದು ಎಂದು ಆಡುವುದು ಅಂದರೆ, ಒಂದು ರಕ್ಷಣಾತ್ಮಕ ಆಟ, ಇನ್ನೊಂದು ಗೆಲ್ಲಲೇಬೇಕೆಂದು ಆಡುವುದು ಆಕ್ರಮಣಕಾರಿ ಆಟ, ಬದುಕಿನಲ್ಲಿ ಗೆಲ್ಲಲೇಬೇಕೆಂದು ಆಟ ಆಡಬೇಕು ಅಂದಾಗ ಮಾತ್ರ ಯಶಸ್ಸು ಸಿಗುತ್ತದೆ. ಸಕಾರಾತ್ಮಕ ಮನಸ್ಸು, ಕಠಿಣ ಪರಿಶ್ರಮ, ಗುರಿ ಇದ್ದರೆ ಯಶಸ್ಸು ಸಾಧ್ಯ. ಕ್ರೀಡೆಯಿಂದ ಶಿಸ್ತು, ಚಾರಿತ್ರ್ಯ ಬರುತ್ತದೆ. ಅದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೂ ಅಷ್ಟೇ ಮಹತ್ವ ಕೊಟ್ಟಿದ್ದಾರೆ. ಮೊದಲು ಫಿಟ್ ಇಂಡಿಯಾ ಅಂತ ಹೇಳಿದರು. ನಂತರ ಖೇಲೋ ಇಂಡಿಯಾ ಅಂದರು, ಓಲಿಂಪಿಕ್ಸ್ ಬಂದಾಗ ಜೀತೋ ಇಂಡಿಯಾ ಅಂತ ಹೇಳಿದರು. ಅದರ ಪರಿಣಾಮ ಟೊಕಿಯೋ ಓಲಿಂಪಿಕ್ಸ್‌ನಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು. ಪ್ಯಾರಾ ಓಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅತಿ ಹೆಚ್ಚು ಪದಕ ಗೆದಿದ್ದಾರೆ. ಸಂಸದರ ಕ್ರೀಡಾ ಮಹೋತ್ಸವ ಬಹಳ ಯಶಸ್ವಿಯಾಗಿ ಜಿಲ್ಲೆಯಾದ್ಯಂತ ಕ್ರೀಡಾ ಸ್ಫೂರ್ತಿಯನ್ನು ಹುಟ್ಟು ಹಾಕಿದೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಟ್ಟು ಒಳ್ಳೆಯ ರೀತಿಯಲ್ಲಿ ಕ್ರೀಡೆ ಆಡೋಣ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನ, ಭಾರತೀಯ ಜನತಾ ಪಕ್ಷದ ಮಂಡಳದ ಅಧ್ಯಕ್ಷರಾದ ಮಹೇಶಕುಮಾರ ಕಮಡೊಳ್ಳಿ, ಮುಖಂಡರುಗಳಾದ ಪದ್ಮನಾಭ ಕುಂದಾಪೂರ, ಬಿ.ಎಸ್ ಅಕ್ಕಿವಳ್ಳಿ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ರಾಘವೇಂದ್ರ ತಹಶಿಲ್ದಾರ, ಮಾಲತೇಶ ಸೊಪ್ಪಿನ, ಕೃಷ್ಣಾ ಇಳಿಗೇರ, ರಾಜಶೇಖರಗೌಡ ಕಟ್ಟೆಗೌಡ್ರ, ಚಂದ್ರಪ್ಪ ಹರಿಜನ, ಸಿದ್ದಲಿಂಗಪ್ಪ ಕಮಡೊಳ್ಳಿ, ಶಿವಲಿಂಗಪ್ಪ ತಲ್ಲೂರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
