Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Friday, July 10
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಆಧುನಿಕತೆಯ ಅಲೆಗಳಲ್ಲಿ ಮುಳುಗುತ್ತಿರುವ ಹರಿಕಥೆ ಪರಂಪರೆ: ಮಾಜಿ ನಗರಸಭಾ ಸದಸ್ಯ ಸಿ.ಎನ್ ಕುಮಾರ್ 
Uncategorized

ಆಧುನಿಕತೆಯ ಅಲೆಗಳಲ್ಲಿ ಮುಳುಗುತ್ತಿರುವ ಹರಿಕಥೆ ಪರಂಪರೆ: ಮಾಜಿ ನಗರಸಭಾ ಸದಸ್ಯ ಸಿ.ಎನ್ ಕುಮಾರ್ 

KumarBy KumarFebruary 15, 2026No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಮರೆಯಾಗುತ್ತಿರುವ ಹರಿಕಥೆ: ಭಕ್ತಿಯ ಹೆಸರಿನಲ್ಲಿ ಮರೆತುಹೋಗುತ್ತಿರುವ ಸಾಂಸ್ಕೃತಿಕ ಪರಂಪರೆ

ಆಧುನಿಕತೆಯ ಅಲೆಗಳಲ್ಲಿ ಮುಳುಗುತ್ತಿರುವ ಹರಿಕಥೆ ಪರಂಪರೆ: ಮಾಜಿ ನಗರಸಭಾ ಸದಸ್ಯ ಸಿ.ಎನ್ ಕುಮಾರ್

ಮಡಿಲು ಸಂಸ್ಥೆ ವತಿಯಿಂದ ಹರಿಕಥೆ ಆಯೋಜನೆ

ಚಿತ್ರದುರ್ಗ ಹೊಯ್ಸಳ:

ಹೊಳಲ್ಕೆರೆ:

ಹರಿಕಥೆ ಕಥೆ ಹೇಳುವಿಕೆ, ಸಂಗೀತ, ನೃತ್ಯ ಮತ್ತು ನಾಟಕೀಯ ಅಭಿನಯಗಳ ಸಮನ್ವಯದಿಂದ ರೂಪುಗೊಂಡಿರುವ ವಿಶಿಷ್ಟ ಹಿಂದೂ ಸಾಂಪ್ರದಾಯಿಕ ಕಲೆ. ಹರಿಯ ಕಥೆ ಎಂಬ ಅರ್ಥವನ್ನು ಹೊಂದಿರುವ ಈ ಕಲೆಯ ಪ್ರಧಾನ ಉದ್ದೇಶ ಜನರಲ್ಲಿ ಭಕ್ತಿ, ನೀತಿ ಮತ್ತು ಧರ್ಮಬೋಧನೆಯನ್ನು ಬೆಳೆಸುವುದಾಗಿದೆ. ಸರಳ ಭಾಷೆ, ಸಂಗೀತಾತ್ಮಕ ವಾಚನ ಹಾಗೂ ಹಾಸ್ಯ–ವ್ಯಂಗ್ಯದ ಸ್ಪರ್ಶದಿಂದ ಕಥೆಯನ್ನು ಜೀವಂತಗೊಳಿಸುವ ಹರಿಕಥೆ, ಗ್ರಾಮೀಣ ಜನಜೀವನದೊಂದಿಗೆ ಬೆಸೆದುಕೊಂಡು ಜನಮನ ಗೆದ್ದಿದೆ ಎಂದು ಮಾಜಿ ನಗರಸಭಾ ಸದಸ್ಯ ಹಿರಿಯ ಪತ್ರಕರ್ತ ಸಿ. ಎನ್ ಕುಮಾರ್ ಹೇಳಿದರು.

ತಾಲೂಕಿನ ಮಲ್ಲಾಡಿಹಳ್ಳಿ ಸೇವಾಶ್ರಮದ ಸಭಾಂಗಣದಲ್ಲಿ ಶನಿವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಿದ ಹರಿಕಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾನ್ಯವಾಗಿ ಏಕವ್ಯಕ್ತಿ ಪ್ರದರ್ಶನವಾಗುವ ಹರಿಕಥೆಯಲ್ಲಿ ಕಥನಕಾರರನ್ನು ‘ದಾಸ’ ಅಥವಾ ಕೀರ್ತನಕಾರ ಎಂದು ಕರೆಯಲಾಗುತ್ತದೆ. ಕೈಯಲ್ಲಿ ತಾಳ ಅಥವಾ ಚಿಟಿಕೆ ಹಿಡಿದು ಲಯಬದ್ಧವಾಗಿ ಕಥನ ಮಾಡುವ ಕಲಾವಿದರಿಗೆ ಮೃದಂಗ, ತಬಲ, ಹಾರ್ಮೋನಿಯಂ ಅಥವಾ ಪಿಟೀಲು ವಾದಕರು ಸಂಗೀತ ಸಾಥ್ ನೀಡುವುದು ಈ ಕಲೆಯ ವಿಶೇಷತೆ. ಹಾಡು–ಮಾತಿನ ಸಮನ್ವಯ ಪ್ರೇಕ್ಷಕರನ್ನು ಕಥೆಯೊಳಗೆ ಸೆಳೆಯುವ ಅಪಾರ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.

ವಿಷಯವಸ್ತುವಿನಲ್ಲಿ ಹರಿಕಥೆ ಅಪಾರ ಸಮೃದ್ಧಿಯಿದೆ. ಪುರಾಣಗಳು, ರಾಮಾಯಣ, ಮಹಾಭಾರತದ ಪ್ರಸಂಗಗಳು ಹಾಗೂ ಮಹಾನ್ ಸಂತರ ಜೀವನಚರಿತ್ರೆಗಳು ಇದರ ಆಧಾರ. ಧಾರ್ಮಿಕ ಕಥೆಗಳ ಮೂಲಕ ನೀತಿಬೋಧನೆ ಹಾಗೂ ಮಾನವೀಯ ಮೌಲ್ಯಗಳ ಸಾರವನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. ಹೀಗಾಗಿ ಹರಿಕಥೆ ಕೇವಲ ಮನರಂಜನೆಯ ಕಲೆ ಅಲ್ಲ ಸಮಾಜಬೋಧನೆಯ ಪರಿಣಾಮಕಾರಿ ಸಾಧನವೂ ಆಗಿದೆ ಎಂದು ಹೇಳಿದರು.

ಜಾನುಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಸ್ವಾಮಿ ಮಾತನಾಡಿ ಸಾಮಾಜಿಕ ದೃಷ್ಟಿಯಿಂದಲೂ ಹರಿಕಥೆಗೆ ಮಹತ್ವವಿದೆ. ಹಿಂದಿನ ಕಾಲದಲ್ಲಿ ಇದು ಧಾರ್ಮಿಕ ಪ್ರಚಾರಕ್ಕೆ ಮಾತ್ರ ಸೀಮಿತವಾಗಿರದೆ, ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ದೇಶಭಕ್ತಿ ಮೂಡಿಸಲು ಹಾಗೂ ಸಾಮಾಜಿಕ ಜಾಗೃತಿ ಹೆಚ್ಚಿಸಲು ಬಳಸಲ್ಪಟ್ಟಿತು. ಅಕ್ಷರಜ್ಞಾನ ಕಡಿಮೆ ಇದ್ದ ಕಾಲದಲ್ಲೂ ಕಥೆ ಮತ್ತು ಸಂಗೀತದ ಮೂಲಕ ಸಂದೇಶ ತಲುಪಿಸಿದ ಹರಿಕಥೆ, ಇಂದಿಗೂ ಭಾರತೀಯ ಸಂಸ್ಕೃತಿಯ ಜೀವಂತ ಪ್ರತೀಕವಾಗಿ ಉಳಿದಿದೆ ಎಂದರು.

ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್ .ಡಿ ಆಲಘಟ್ಟ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುವುದು ಮಡಿಲು ಸಂಸ್ಥೆಯ ಗುರಿಯಾಗಿದೆ. ಹರಿಕಥೆಯಂತಹ ಕಲೆಗಳನ್ನು ಉಳಿಸಲು ವಿದ್ಯಾರ್ಥಿಗಳ ಸಹಭಾಗಿತ್ವ ಅಗತ್ಯ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಂಪರ ಕಲೆಗಳನ್ನು ಉಳಿಸುವ ಹೊಣೆ ಸಮಾಜದ ಮೇಲಿದೆ. ನಮ್ಮ ಮಡಿಲು ಸಂಸ್ಥೆಯು ಭವಿಷ್ಯದಲ್ಲಿ ಸಂಸ್ಕೃತಿ ಉಳಿವಿಗೆ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ‌ ಎಂದರು.

ನಮ್ಮ ಉದ್ದೇಶ ಕೇವಲ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲ, ಜನರಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವುದು. ಯುವಕರು ಮುಂದೆ ಬಂದು ಕಲೆ, ಸಾಹಿತ್ಯ ಹಾಗೂ ಸಮಾಜ ಸೇವೆಯತ್ತ ಆಸಕ್ತಿ ತೋರಬೇಕು ಎಂದು ಹೇಳಿದರು. ಗ್ರಾಮೀಣ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ಮಕ್ಕಳಿಗೆ ಪಾಠ್ಯೇತರ ಚಟುವಟಿಕೆಗಳ ಮೂಲಕ ಕಲೆಯನ್ನು ಪರಿಚಯಿಸುವುದು, ಹಿರಿಯರ ಅನುಭವಗಳನ್ನು ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನಗಳು ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿವೆ ಎಂದರು.

ವಿದ್ವಾನ್ ಡಾ.ಶಂಕರ ಭಟ್ ಉಂಚಳ್ಳಿ ಅವರ ತಂಡದವರಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಹರಿಕಥೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ವ್ಯವಸ್ಥಾಪಕ ಚಂದ್ರಪ್ಪ, ಮಡಿಲು ಸಂಸ್ಥೆ ಸದಸ್ಯರಾದ ಪ್ರದೀಪ್ ಮಹಾಂತೇಶ್ ದ್ಯಾಮ್ ಕುಮಾರ್, ಪ್ರವೀಣ್ ದರ್ಶನ್ ಹಾಗೂಶಿಕ್ಷಕರಾದ ಶಂಕರ್ ಮೂರ್ತಿ,ಸೋಮಶೇಖರ್, ಎಸ್.ಎಂ ಗೌಡ, ಮೋಹನ್ ಕುಮಾರ್, ಹರೀಶ್ ಸ್ವಾಮಿ ದೈಹಿಕ ಶಿಕ್ಷಕ ತಾರಾನಂದ, ಮಡಿಲು ಸಂಸ್ಥೆ ಖಜಾಂಚಿ ಪ್ರದೀಪ್, ನಿರ್ದೇಶಕರಾದ ಮಹಾಂತೇಶ್ ಇತರರು ಇದ್ದರು.

Share. Facebook Twitter Pinterest LinkedIn Tumblr Email
Previous ArticleHow To Play Online Slots For Free: No Deposit Games
Next Article Roulette New Mexico: Navigating the Digital Spin
Kumar
  • Website

Related Posts

Top casinos online en España: ranking práctico y fiable

July 10, 2026

The Ultimate Guide to Playing Live Roulette Canada for Tablet

July 9, 2026

The Ultimate Guide to Play Roulette Canada Top Sites

July 8, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Top casinos online en España: ranking práctico y fiable

The Ultimate Guide to Playing Live Roulette Canada for Tablet

The Ultimate Guide to Play Roulette Canada Top Sites

Revisión de Mis-consoladores: mejores casinos online en España

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Top casinos online en España: ranking práctico y fiable

July 10, 2026

The Ultimate Guide to Playing Live Roulette Canada for Tablet

July 9, 2026

The Ultimate Guide to Play Roulette Canada Top Sites

July 8, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.