Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Friday, July 10
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಬಿಜೆಪಿ ಸರ್ಕಾರದ ನಡೆ ಜನವಿರೋಧಿ : ಮಾಜಿ ಸಚಿವ ಹೆಚ್.ಆಂಜನೇಯ ಆರೋಪ
Uncategorized

ಬಿಜೆಪಿ ಸರ್ಕಾರದ ನಡೆ ಜನವಿರೋಧಿ : ಮಾಜಿ ಸಚಿವ ಹೆಚ್.ಆಂಜನೇಯ ಆರೋಪ

KumarBy KumarFebruary 24, 2026Updated:February 24, 2026No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

(ಹೊಳಲ್ಕೆರೆ ತಾಲ್ಲೂಕಿನಲ್ಲಿ ಮಂಗಳವಾರ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮ, ನಿಖಿತ್ ರಾಜದ ಮೌರ್ಯ ಇತರರು)

ಹಳ್ಳಿ ಜನರ ಬದುಕಿಗೆ ಬಿಜೆಪಿ ಕೊಳ್ಳಿ

ಬಡವರಿಗೆ ವರವಾಗಿದ್ದ ಉದ್ಯೋಗ ಖಾತ್ರಿ ರದ್ದು ಸಲ್ಲದು

ಬಿಜೆಪಿ ಸರ್ಕಾರದ ನಡೆ ಜನವಿರೋಧಿ

ಮಾಜಿ ಸಚಿವ ಹೆಚ್.ಆಂಜನೇಯ ಆರೋಪ

ಚಿಕ್ಕಜಾಜೂರು ಗ್ರಾಮದಿಂದ ಹೊಳಲ್ಕೆರೆಗೆ ಕಾಂಗ್ರೆಸ್ ಪಾದಯಾತ್ರೆ

ಚಿತ್ರದುರ್ಗ ಹೊಯ್ಸಳ ನ್ಯೂಸ್/   

ಹೊಳಲ್ಕೆರೆ, ಫೆ.24:

ಗ್ರಾಮೀಣ ಪ್ರದೇಶದ ಜನರು ಬದುಕು ಉತ್ತಮಗೊಳಿಸಲು, ವಲಸೆ ತಪ್ಪಿಸಲು, ದುಡಿಯುವ ಕೈಗೆ ಕೆಲಸ ನೀಡಲು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್
ಸರ್ಕಾರ ಜಾರಿಗೊಳಿಸಿದ್ದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಉದ್ಯೋಗ ಖಾತ್ರಿ ಯೋಜನೆ
ರದ್ದುಗೊಳಿಸಿರುವುದು ಬಿಜೆಪಿಯ ಜನವಿರೋಧಿ ನಡೆಗೆ ಸಾಕ್ಷಿ ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದರು.
ಉದ್ಯೋಗ ಖಾತ್ರಿ ಮರು ಜಾರಿಗೆ ಆಗ್ರಹಿಸಿ ಭರಮಸಾಗರ, ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಮಂಗಳವಾರ ಆರಂಭಿಸಿದ ಪಾದಯಾತ್ರೆ ವಿವಿಧ ಹಳ್ಳಿಗಳ ಮೂಲಕ ಹೊಳಲ್ಕೆರೆ ವೃತ್ತಕ್ಕೆ ಆಗಮಿಸಿದ ಬಳಿಕ ಆಯೋಜಿಸಿದ್ದ ಬಹಿರಂಗ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಆಶಯದಂತೆ ದುಡಿಯುವ ಜನರ ಕೈಗೆ ಕೆಲಸ ನೀಡಲು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಉದ್ಯೋಗ ಖಾತ್ರಿ ಯೋಜನೆ ದೇಶದಲ್ಲಿ 50 ಕೋಟಿ ಕುಟುಂಬಗಳ ಬದುಕಿಗೆ ಭದ್ರತೆ ಒದಗಿಸಿತ್ತು. ಇಂತಹ ಜನಪರ ಯೋಜನೆಯನ್ನ ರದ್ದುಗೊಳಿಸಿ ಗ್ರಾಮ ಪಂಚಾಯಿತಿಗಳ
ಅಧಿಕಾರವನ್ನು ಕಿತ್ತುಕೊಂಡು ವಿಬಿ ರಾಮ್ ಜೀ ಯೋಜನೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಬಡವರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಪ್ರತಿ ಕುಟುಂಬಕ್ಕೂ, ಕೆಲಸ ಮಾಡಿದ ಪ್ರತಿದಿನಕ್ಕೂ ಕೂಲಿ ಸಿಗಬೇಕು. ಹಳ್ಳಿಗಳ ಪ್ರಗತಿಗೆ, ರಸ್ತೆ-ಕಾಲುವೆ ನಿರ್ಮಾಣ, ಕೆರೆಗಳ ಪುನಶ್ಚೇತನ, ಪರಿಸರ ಸಂರಕ್ಷಣೆಗೆ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಮಹತ್ವದ್ದಾಗರ‍್ತು. ಈ ಯೋಜನೆಯಿಂದ ಕೆಲಸ ಮಾತ್ರವಲ್ಲ, ಊರಿಗೆ ಆಸ್ತಿಯೂ ಸೃಷ್ಟಿಯಾಗುತ್ತಿತ್ತು. ಮಹಿಳೆಯರಿಗೆ ಸ್ವಾವಲಂಬನೆ ಸಿಗುತ್ತದೆ. ವಲಸೆ ಹೋಗುವ ಪರಿಸ್ಥಿತಿ ಕಡಿಮೆಯಾಗಿತ್ತು. ಉದ್ಯೋಗ ಖಾತ್ರಿ ಯೋಜನೆ ದಾನವಲ್ಲ, ಸರ್ಕಾರದ ಭಿಕ್ಷೆಯಲ್ಲ. ಬಡಜನರ ಸಂವಿಧಾನತ್ಮಾಕ ಹಕ್ಕು. ಪ್ರತಿಯೊಬ್ಬರು ಬದುಕು ಕಟ್ಟಿಕೊಳ್ಳುವ ಹಕ್ಕನ್ನು ಕಾಂಗ್ರೆಸ್ ನೀಡಿತ್ತು.
ಹಳ್ಳಿ ಜನರಿಗೆ ಕೆಲಸ, ಮಹಿಳೆಯರಿಗೆ ಸ್ವಾಭಿಮಾನ, ಯುವಕರಿಗೆ ನಿರೀಕ್ಷೆ ನೀಡಬೇಕು ಅನ್ನುವ ದೂರದೃಷ್ಠಿ ಹೊಂದಿತ್ತು. ಆದರೆ, ಈ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿವೆ. ಕೆಲಸದ ದಿನಗಳನ್ನು ಕಡಿಮೆ ಮಾಡಲಾಗಿದೆ, ಕೂಲಿಯನ್ನು ತಡವಾಗಿ
ಕೊಡಲಾಗುತಿದೆ. ರಾಜ್ಯದ ಮೇಲೆ ಆರ್ಥಿಕ ಹೊರೆ ಹೊರಿಸಲಾಗಿದೆ. ಇದರಿಂದ ಬಡ ಕುಟುಂಬಗಳು
ಮತ್ತೆ ಸಂಕಷ್ಟಕ್ಕೆ ಸಿಲುಕಿವೆ ಎಂದರು.
ಗಾAಧೀಜಿ ಅವರನ್ನು ಆರಂಭದಿಂದಲೂ ದ್ವೇಷಿಸುತ್ತಲೇ ಬಂದಿರುವ ಬಿಜೆಪಿ ಈಗ ಅವರ ಹೆಸರನ್ನು ಉದ್ಯೋಗ ಖಾತ್ರಿ ಯೋಜನೆಯಿಂದ ಕೈಬಿಡಲಾಗಿದೆ. ಮುಖ್ಯವಾಗಿ ಬಡವರ ಪರವಾಗಿದ್ದ ಅಂಶಗಳನ್ನು ತೆಗೆದು, ಕೂಲಿಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನವನ್ನು ವಿಬಿ ರಾಮ್ ಜಿ ಯೋಜನೆ ಜಾರಿಗೊಳಿಸುವ ಮೂಲಕ ಮಾಡಿದೆ ಎಂದು ದೂರಿದರು.
ದೇಶದಲ್ಲಿ ಅನೇಕ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದ ಬಿಜೆಪಿ ಕೇಂದ್ರ ಸರ್ಕಾರ, ರೈತರು, ಕಾರ್ಮಿಕರು ಬೀದಿಗೆ ಇಳಿದ ಹಿನ್ನೆಲೆಯಲ್ಲಿ ಕೆಲ ಕಾಯ್ದೆಯನ್ನು
ಹಿಂಪಡೆದಿದೆ. ಅದೇ ರೀತಿ ವಿಬಿ ರಾಮ್ ಜೀ ಯೋಜನೆ ರದ್ದುಗೊಳಿಸಿ, ಉದ್ಯೋಗ ಖಾತ್ರಿ ಮರು ಜಾರಿಗೊಳಿಸಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲದು ಎಂದು ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ದೇಶದ 12 ಕೋಟಿ ಜನರಿಗೆ ಉದ್ಯೋಗ ನೀಡುತ್ತಿದ್ದ ಖಾತ್ರಿ ಯೋಜನೆ ರದ್ದುಗೊಳಿಸುವ ಮೂಲಕ ಬಡ ಜನರನ್ನು ಬೀದಿಗೆ ತಳ್ಳುವ
ಹುನ್ನಾರು ನಡೆಸಿದೆ ಎಂದು ದೂರಿದರು.
ಮುಖಂಡ ನಿಖಿತ್ ರಾಜ್ ಮೌರ್ಯ ಮಾತನಾಡಿ, ನಿಮ್ಮ ಅಧಿಕಾರ ನಿಮ್ಮ ಕೈಗೆ ಎಂಬ ಕಾಂಗ್ರೆಸ್ ಪಕ್ಷದ ಜನಪರ ನೀತಿ ತೆಗೆದು ಗ್ರಾಮ ಪಂಚಾಯಿತಿಯ ಅಧಿಕಾರವನ್ನು ಕಿತ್ತುಕೊಂಡಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ದೇಶದೆಲ್ಲೆಡೆ ಜನಾಂದೋಲನ ರೂಪಿಸಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಕೆ.ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಆರ್.ಶಿವಣ್ಣ, ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ನಗರ ಬ್ಲಾಕ್ ಅಧ್ಯಕ್ಷ ಮಜರ್ ಉಲ್ಲಾ ಖಾನ್, ಜಿಪಂ ಮಾಜಿ
ಅಧ್ಯಕ್ಷ ಪಿ.ಆರ್.ಶಿವಕುಮಾರ್, ಮಾಜಿ ಸದಸ್ಯರಾದ ಆರ್.ಕೃಷ್ಣಮೂರ್ತಿ, ಡಿ.ಕೆ.ಶಿವಮೂರ್ತಿ, ಲೋಹಿತ್ ಕುಮಾರ್, ಕಿರಣ್ ಕುಮಾರ್, ಮುಖಂಡರಾದ ಸುರೇಶ್
ಪಾಡಿಗಟ್ಟೆ, ದುರ್ಗೇಶ್ ಪೂಜಾರ್, ಮಲ್ಲಿಕಾರ್ಜುನ ಶಿವಪುರ, ಕೆ.ಸಿ.ಪುರುಷೋತ್ತಮ್, ಮಧು ಪಾಲೇಗೌಡ, ಸೋಷಿಯಲ್ ಮೀಡಿಯಾದ ಕಿರಣ್ ಶಿವಪುರ, ಅಧ್ಯಕ್ಷರಾದ ಹೇಮಂತ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪವನ್, ಚೇತನ್ ಬೋರೇನಹಳ್ಳಿ ಇತರರಿದ್ದರು.

Share. Facebook Twitter Pinterest LinkedIn Tumblr Email
Previous ArticleOnline Blackjack in Ohio: A Beginner’s Guide
Next Article Next Post
Kumar
  • Website

Related Posts

Top casinos online en España: ranking práctico y fiable

July 10, 2026

The Ultimate Guide to Playing Live Roulette Canada for Tablet

July 9, 2026

The Ultimate Guide to Play Roulette Canada Top Sites

July 8, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Top casinos online en España: ranking práctico y fiable

The Ultimate Guide to Playing Live Roulette Canada for Tablet

The Ultimate Guide to Play Roulette Canada Top Sites

Revisión de Mis-consoladores: mejores casinos online en España

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Top casinos online en España: ranking práctico y fiable

July 10, 2026

The Ultimate Guide to Playing Live Roulette Canada for Tablet

July 9, 2026

The Ultimate Guide to Play Roulette Canada Top Sites

July 8, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.