Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Wednesday, July 8
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಸಂವಿಧಾನದ ಆಶಯಗಳ ಪಾಲನೆಯಿಂದ ಮಾತ್ರ ಸಮಾನತೆ ಸಾಧ್ಯ: ಹರಳಯ್ಯ ಸ್ವಾಮೀಜಿ
Uncategorized

ಸಂವಿಧಾನದ ಆಶಯಗಳ ಪಾಲನೆಯಿಂದ ಮಾತ್ರ ಸಮಾನತೆ ಸಾಧ್ಯ: ಹರಳಯ್ಯ ಸ್ವಾಮೀಜಿ

KumarBy KumarMay 10, 2026No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಸಂವಿಧಾನದ ಆಶಯಗಳ ಪಾಲನೆಯಿಂದ ಮಾತ್ರ ಸಮಾನತೆ ಸಾಧ್ಯ: ಹರಳಯ್ಯ ಸ್ವಾಮೀಜಿ

ಚಿತ್ರದುರ್ಗ ಹೂಯ್ಸಳ:
ಮೊಳಕಾಲ್ಮೂರು:
“ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು, ಆ ಬದಲಾವಣೆಯ ಸಶಕ್ತ ರೂಪವೇ ಭಾರತದ ಸಂವಿಧಾನ. ಇತರ ಸಮುದಾಯಗಳಂತೆ ದಲಿತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು,” ಎಂದು ಬಸವ ಶಿವಶರಣ ಹರಳಯ್ಯ ಸ್ವಾಮೀಜಿ ತಿಳಿಸಿದರು.
ಅವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ
ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜೈ ಭೀಮ್ ಮಾದಿಗ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನವಿದ್ದರೂ ಶಿಸ್ತಿನ ಬದುಕು ಮುಖ್ಯ:
“ಬಡತನವಿರಬಹುದು, ಆದರೆ ನಮ್ಮ ಶಿಸ್ತು, ನಡೆ ಹಾಗೂ ನುಡಿ ಶ್ರೀಮಂತವಾಗಿರಲಿ. ಇದು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಅಂಬೇಡ್ಕರ್ ಅವರ ಜಯಂತಿ ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅದು ಇಡೀ ಸಮಾಜಕ್ಕೆ ಬೇಕಾದ ನೀತಿಯಾಗಿದೆ. ಬಸವಣ್ಣನವರು ಕಂಡ ಸಮಾನತೆಯ ಸಮಾಜದ ಕನಸಿಗೆ ಸಂವಿಧಾನದ ಮೂಲಕ ಬಾಬಾ ಸಾಹೇಬರು ಜೀವ ತುಂಬಿದ್ದಾರೆ. ದಲಿತರನ್ನು ಮೌಢ್ಯದಲ್ಲಿ ಮುಳುಗಿಸಲು ಕೆಲವರು ದೇವರ ಹೆಸರಿನಲ್ಲಿ ಹುನ್ನಾರ ನಡೆಸಿದ್ದಾರೆ. ಮಾರಿ-ದುರುಗಿಯರ ಜಾತ್ರೆಗಿಂತ ಬಾಬಾ ಸಾಹೇಬರ ವಿಚಾರಗಳನ್ನು ಹಬ್ಬದಂತೆ ಆಚರಿಸಿ,” ಎಂದು ಅವರು ಕರೆ ನೀಡಿದರು.
ಡಿಜೆ ವ್ಯಾಮೋಹದಿಂದ ದೂರವಿರಿ:
ನಿವೃತ್ತ ತಹಸೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ, “ಇಂದಿನ ಯುವಜನತೆ ಡಿಜೆ ಮತ್ತು ಅಬ್ಬರದ ಸಂಸ್ಕೃತಿಗೆ ಮಾರುಹೋಗಿ ಅಂಬೇಡ್ಕರ್ ಅವರ ತತ್ವಗಳಿಗೆ ಅಪಚಾರ ಎಸಗುತ್ತಿದ್ದಾರೆ. ಕುಡಿತದಂತಹ ಚಟಗಳಿಗೆ ಬಲಿಯಾಗದೆ, ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸನಾತನಿಗಳ ಗುಡಿ ಪ್ರವೇಶಕ್ಕಾಗಿ ಹೋರಾಡುವ ಬದಲು ಈ ನೆಲದ ಮೂಲ ಧರ್ಮವಾದ ಬೌದ್ಧ ಧರ್ಮದ ಆಶಯಗಳನ್ನು ಮೈಗೂಡಿಸಿಕೊಳ್ಳಿ,” ಎಂದರು.
ಶಿಕ್ಷಣವೇ ಗುಲಾಮಿತನಕ್ಕೆ ಮದ್ದು:
ವಕೀಲ ಮರ್ಲಹಳ್ಳಿ ಪರಮೇಶ್ ಮಾತನಾಡಿ, “ಗುಲಾಮಿತನವನ್ನು ಆನಂದಿಸುವ ಮನೋವ್ಯಾಧಿಗೆ ಶಿಕ್ಷಣವೇ ಏಕೈಕ ಮದ್ದು. ಅಂಬೇಡ್ಕರರನ್ನು ಕೇವಲ ಉತ್ಸವ ಮೂರ್ತಿಯನ್ನಾಗಿ ಮಾಡಬೇಡಿ, ಅವರ ವಿಚಾರಗಳನ್ನು ಸಮಾಜದಲ್ಲಿ ಬಿತ್ತಿ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ .ಲಿಡ್ಕರ್ ಶಂಕರ್.ಮೋಹನ್ ಕುಮಾರ್, ಚನ್ನಗಾನಹಳ್ಳಿ ಮಲ್ಲೇಶ್, ಹಿರೇಹಳ್ಳಿ ಮಲ್ಲೇಶ್, ಓ. ಕರಿಬಸಪ್ಪ, ಹೊನ್ನೂರು ಮಾರಣ್ಣ, ಲಿಂಗರಾಜ್ ಭೀಮನಕೆರೆ, ಶಿವದತ್ತ, ಆರ್. ಬಸಪ್ಪ, ಯಲ್ಲಪ್ಪ, ಅಶೋಕ್, ಮಹಂತೇಶ್, ಕುಮಾರ್, ಪೆನ್ನೇಶ್ ಹಾಗೂ ಕಾಲೋನಿಯ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು
Share. Facebook Twitter Pinterest LinkedIn Tumblr Email
Previous ArticleFinest Slots Gambling Establishment Online: A Comprehensive Guide
Next Article ಇ-ಸ್ವತ್ತು ನೀಡುವ ವಿಚಾರದಲ್ಲಿ ಅಧಿಕಾರಿಗಳ ತಾತ್ಸಾರ – ಶಾಸಕ ಗೋವಿಂದಪ್ಪ ಗರಂ
Kumar
  • Website

Related Posts

The Ultimate Guide to Play Roulette Canada Top Sites

July 8, 2026

Revisión de Mis-consoladores: mejores casinos online en España

July 7, 2026

Hexa Bet Casino im Test: Schwerpunkt auf Zahlungen

July 6, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

The Ultimate Guide to Play Roulette Canada Top Sites

Revisión de Mis-consoladores: mejores casinos online en España

Hexa Bet Casino im Test: Schwerpunkt auf Zahlungen

Boho Casino Test: Spiele, Boni & Auszahlungen

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

The Ultimate Guide to Play Roulette Canada Top Sites

July 8, 2026

Revisión de Mis-consoladores: mejores casinos online en España

July 7, 2026

Hexa Bet Casino im Test: Schwerpunkt auf Zahlungen

July 6, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.