₹5.6 ಕೋಟಿ ರಸ್ತೆ
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಗೋವಿಂದಪ್ಪ
ವರದಿ: ಕಾವೇರಿ
ಚಿತ್ರದುರ್ಗ ಹೊಯ್ಸಳ ಸುದ್ದಿ
ಹೊಸದುರ್ಗ:
ಸರ್ಕಾರದಿಂದ ದೊರೆಯುವ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ₹ 5.6 ಕೋಟಿ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಿ.ಸಿ.ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
₹ 1 ಕೋಟಿ ವೆಚ್ಚದಲ್ಲಿ ಬೆಲಗೂರು ಹೊಸದುರ್ಗ ಮುಖ್ಯ ರಸ್ತೆಯಿಂದ ಬೆನಕನಹಳ್ಳಿ ವರೆಗೆ ಸಿ.ಸಿ. ರಸ್ತೆ ನಿರ್ಮಾಣ.₹ 60 ಲಕ್ಷ ವೆಚ್ಚದಲ್ಲಿ ಬೆಲಗೂರು, ಹೊಸದುರ್ಗ ಮುಖ್ಯ ರಸ್ತೆಯಿಂದ ಕಬ್ಬಳ ಹೊಸಹಟ್ಟಿವರೆಗೆ, ₹ 1 ಕೋಟಿ ವೆಚ್ಚದಲ್ಲಿ ಅರಲಹಳ್ಳಿ ಹೊಸೂರು ಗ್ರಾಮದಿಂದ ಅರಲಹಳ್ಳಿ ಗ್ರಾಮದವರೆಗೆ, ₹ 70 ಲಕ್ಷ ವೆಚ್ಚದಲ್ಲಿ ಹೊಸದುರ್ಗ
ಶ್ರೀರಾಂಪುರ ಮುಖ್ಯ ರಸ್ತೆಯಿಂದ ಅರಲಹಳ್ಳಿ ಗ್ರಾಮದವರೆಗೆ, ₹ 80 ಲಕ್ಷ ವೆಚ್ಚದಲ್ಲಿ ಓಬಳಾಪುರ ಮತ್ತು ವೆಂಗಳಾಪುರ ಮುಖ್ಯ ರಸ್ತೆಯಿಂದ ಓಬಳಾಪುರ ಲಂಬಾಣಿಹಟ್ಟಿ ವರೆಗೆ,
₹ 1 ಕೋಟಿ ವೆಚ್ಚದಲ್ಲಿ ಹಿರಿಯೂರು ಮುಖ್ಯ ರಸ್ತೆಯಿಂದ ಇಂಚರ ಶಾಲೆ ಮುಖಾಂತರ ಜೋಡಿಶ್ರೀರಂಗಾಪುರ ಗೊಲ್ಲರಹಟ್ಟಿವರೆಗೆ, ₹ 50 ಲಕ್ಷ ವೆಚ್ಚದಲ್ಲಿ ಮಲ್ಲಪ್ಪನಹಳ್ಳಿ ಮುಖ್ಯ ರಸ್ತೆಯ ಜಂತಿಕೊಳಲು ಗೇಟ್‌ನಿಂದ ಮಂಟೇನಹಳ್ಳಿ ಗ್ರಾಮದವರೆಗೆ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರಿದ್ದರು ಭಾಗಿಯಾಗಿದ್ದರು.
