ಇಂದು ಹೊಸಪೇಟೆಯಲ್ಲಿ ‘ಸುವರ್ಣ ಕರುನಾಡು’ ದಿನಪತ್ರಿಕೆ ಬಿಡುಗಡೆ: ಮಾಜಿ ಸಚಿವ ಹೆಚ್. ಆಂಜನೇಯ ಭಾಗಿ
ಚಿತ್ರದುರ್ಗ ಹೊಯ್ಸಳ:
ಚಿತ್ರದುರ್ಗ:
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು (ಸೋಮವಾರ) ಹಮ್ಮಿಕೊಂಡಿರುವ ವಿಶೇಷ ಸಮಾರಂಭದಲ್ಲಿ ‘ಸುವರ್ಣ ಕರುನಾಡು’ ದಿನಪತ್ರಿಕೆಯು ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಹೆಚ್. ಆಂಜನೇಯ ಅವರು ತಿಳಿಸಿದ್ದಾರೆ.
ಹೊಸಪೇಟೆಯ ನಗರದ ಪ್ರಮುಖ ಕೇಂದ್ರವಾದ ಅಂಬೇಡ್ಕರ್ ಸಂಘದ ಗೌತಮ ಬುದ್ಧ ಸಭಾಂಗಣದಲ್ಲಿ ಇಂದು ಬೆಳಗ್ಗೆ 10:30 ಗಂಟೆಗೆ ಈ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿದೆ.
ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಹೆಚ್. ಆಂಜನೇಯ ಅವರು, “ಸುವರ್ಣ ಕರುನಾಡು ದಿನಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾನು ಚಿತ್ರದುರ್ಗದಿಂದ ಹೊಸಪೇಟೆಗೆ ತೆರಳುತ್ತಿದ್ದೇನೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಗಣ್ಯರು, ಪತ್ರಿಕಾರಂಗದ ಹಿರಿಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
