ಹೊಳಲ್ಕೆರೆ ಪುರಸಭೆಯ 2022-23ನೇ ಸಾಲಿಗೆ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಕೆ ಸಾರ್ವಜನಿಕ ಸಮಾಲೋಚನಾ ಸಭೆ : ಮುಖ್ಯಾಧಿಕಾರಿ ಎ ವಾಸಿಂ ಸಾರ್ವಜನಿಕರಲ್ಲಿ ಮನವಿ
1 min readಹೊಳಲ್ಕೆರೆ ಪುರಸಭೆಯ 2022-2023ನೇ ಸಾಲಿಗೆ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಕೆ ಸಾರ್ವಜನಿಕ ಸಮಾಲೋಚನಾ ಸಭೆ: ಮುಖ್ಯಾಧಿಕಾರಿ ಎ.ವಾಸಿಂ.
ಹೊಳಲ್ಕೆರೆ:
2022-23ನೇ ಸಾಲಿಗೆ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಸುವ ಸಂಬಂಧ ಹೊಳಲ್ಕೆರೆ ಪುರಸಭೆಯಲ್ಲಿ ದಿನಾಂಕ: 31.12.2021ರಂದು ಸಾರ್ವಜನಿಕ ಸಮಾಲೋಚನಾ ಸಭೆ
2022-23ನೇ ಸಾಲಿಗೆ ಹೊಳಲ್ಕೆರೆ ಪುರಸಭೆಯ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಸುವ ಸಂಬಂಧ ಹೊಳಲ್ಕೆರೆ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ದಿನಾಂಕ: 31.12.2021 ರಂದು ಬೆಳಿಗ್ಗೆ 11-00 ಗಂಟೆಗೆ ಹೊಳಲ್ಕೆರೆ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಸಮಕ್ಷಮದಲ್ಲಿ ಪ್ರಥಮ ಸಾರ್ವಜನಿಕ ಸಮಾಲೋಚನಾ ಸಭೆ ಏರ್ಪಡಿಸಲಾಗಿರುತ್ತದೆ. ಸದರಿ ಸಭೆಯಲ್ಲಿ ಎಲ್ಲಾ ನಾಗರಿಕರು, ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು ಮುಕ್ತವಾಗಿ ಭಾಗವಹಿಸಬಹುದಾಗಿದ್ದು ಹೊಳಲ್ಕೆರೆ ಪುರಸಭಾ ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ, ಸೂಚನೆ ಹಾಗೂ ತಮ್ಮ ಅಗತ್ಯತೆಗಳನ್ನು ಈ ಸಭೆಯಲ್ಲಿ ತಿಳಿಸಬಹುದಾಗಿರುತ್ತದೆ. ತಾವು ನೀಡುವ ಅತ್ಯಮೂಲ್ಯ ಸಲಹೆ, ಸೂಚನೆಗಳು ಹಾಗೂ ತಮ್ಮಗಳ ಅವಶ್ಯಕತೆಗಳನ್ನು ಪರಿಗಣಿಸಿ 2022-23ನೇ ಸಾಲಿನ ಆಯ-ವ್ಯಯದಲ್ಲಿ ನಿಯಮಾನುಸಾರ ಅನುದಾನ ಮೀಸಲಿರಿಸಿ ಅಗತ್ಯ ಕಾಮಗಾರಿ / ಕಾರ್ಯಕ್ರಮಗಳನ್ನು ಕೈಗೊಳ್ಳಲು ಕ್ರಮವಹಿಸಲಾಗುತ್ತದೆ. ಪ್ರಯುಕ್ತ ಹೊಳಲ್ಕೆರೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಹಿತದೃಷ್ಟಿಯಿಂದ ಎಲ್ಲರೂ ಮುಕ್ತವಾಗಿ ಪಾಲ್ಗೊಂಡು ತಮ್ಮ ಅತ್ಯಮೂಲ್ಯ ಸಲಹೆ, ಸೂಚನೆ ಹಾಗೂ ಅವಶ್ಯಕತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅದರೊಟ್ಟಿಗೆ ತಮ್ಮ ಲಿಖಿತ ಮನವಿಗಳನ್ನು ಸಹ ನೀಡುವಂತೆ ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.