310 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ದಾವಣಗೆರೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
ಹಾಲು ಒಕ್ಕೂಟದ ಸಂಘದಿಂದ ರೈತರಿಗೆ ಸಾಕಷ್ಟು ಅನುಕೂಲ: ನಿರ್ದೇಶಕ ಬಿ ಸಿ ಸಂಜೀವ ಮೂರ್ತಿ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಳ್ಳಕೆರೆ:
ನಂದಿನಿ ಹಾಲು ಉತ್ಪಾದಕ ಒಕ್ಕೂಟದ ಸಂಘದಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸಂಘದಿಂದ ರೈತರು ಸಾಲವನ್ನು ಪಡೆದು ಹಸು ಸಾಕಾಣಿಕೆ ಮಾಡಿ ಹಾಲನ್ನು ಡೈರಿಗೆ ಹಾಕುತ್ತಿದ್ದು ಅವರಿಗೆ ಪ್ರತಿ 10 ದಿನಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತಿದ್ದೇವೆ. ಚಿತ್ರದುರ್ಗ ದಾವಣಗೆರೆಗೆ ಪ್ರತ್ಯೇಕ ಹಾಲು ಒಕ್ಕೂಟದ ಹೊಸ ಡೈರಿ ಸ್ಥಾಪಿಸಲು 310 ಕೋಟಿ ವೆಚ್ಚದಲ್ಲಿ ಕೆಲಸ ಆರಂಭಿಸಿದ್ದೇವೆ. ಇನ್ನು ಎರಡು ವರ್ಷದೊಳಗೆ ಕೆಲಸ ಪೂರ್ಣಗೊಳ್ಳಬಹುದು.ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಒಕ್ಕೂಟದ ನಿರ್ದೇಶಕ ಬಿ ಸಿ ಸಂಜೀವ ಮೂರ್ತಿ ತಿಳಿಸಿದರು.
ನಗರದ ಬಸವೇಶ್ವರ ವೃತ್ತ ಸಮೀಪ ಇರುವ ಶಿವಮೊಗ್ಗ ಹಾಲು ಒಕ್ಕೂಟದ ಕೊರಿಯನ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು
ಚಿತ್ರದುರ್ಗ ಜಿಲ್ಲೆಯ ರೈತರು ಹೈನುಗಾರಿಕೆಯಲ್ಲಿ ಉತ್ತಮ ಲಾಭಾಂಶ ಪಡೆಯುವುದಲ್ಲದೆ ಒಕ್ಕೂಟವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 7ಕೋಟಿ 39 ಲಕ್ಷ ಲಾಭಾಂಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ 380 ಹಾಲು ಒಕ್ಕೂಟದ ಸಂಘಗಳಿದ್ದು. ಜಿಲ್ಲೆಗೆ ಪ್ರತಿದಿನ 2.40 ಲಕ್ಷ ಹಾಲು ಸರಬರಾಜು ಮಾಡಲಾಗುತ್ತಿದೆ.ಮೂರು ಜಿಲ್ಲೆಗಳಲ್ಲಿ ದಿನನಿತ್ಯ 8.5 ಲಕ್ಷ ಲೀಟರ್ ಪ್ರತಿದಿನ ಖರೀದಿ ಮಾಡುತ್ತೇವೆ. 4 ಲಕ್ಷ ಲೀಟರ್ ಮೂರು ಜಿಲ್ಲೆಗಳಿಂದ ಮಾರಾಟವಾಗುತ್ತದೆ ಉಳಿದ 4.5 ಲಕ್ಷ ಹಾಲನ್ನು ಹಾಲಿನ ಪುಡಿ ಮಾಡಿ ಬೆಣ್ಣೆ ಮಾಡಿ ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ಮಾರಾಟ ಮಾಡುತ್ತೇವೆ. ಹಾಗೂ ಟೆಂಡರ್ ಕೂಗಿ ಅವರಿಗೆ ಮಾರಾಟ ಮಾಡುತ್ತೇವೆ. ವಿಶೇಷವಾಗಿ ಚಳಕೆರೆ ತಾಲೂಕಿನಲ್ಲಿ ಏಳು ಹೊಸ ಸಂಘಗಳು ಸ್ಥಾಪನೆ ಆಗಿವೆ ಜೊತೆಗೆ ಎರಡು ನಂದಿನಿ ಪಾರ್ಲರ್ಗಳು ಪವಾಡ ರಸ್ತೆಯ ಆದರ್ಶ ಶಾಲೆ ಮುಂಭಾಗ ಚಿತ್ರದುರ್ಗ ರಸ್ತೆಯ ಎಚ್ ಪಿ ಸಿ ಕಾಲೇಜ್ ಮುಂಭಾಗ ಮಳಿಗೆಗಳು ಸಿದ್ದವಾಗುತ್ತಿವೆ.
ಚಿತ್ರದುರ್ಗ ದಾವಣಗೆರೆ ಜಿಲ್ಲೆಯವರು ಪ್ರತ್ಯೇಕ ಹಾಲು ಒಕ್ಕೂಟ ಮಾಡಬೇಕೆಂದು 30ರಿಂದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವುದಕ್ಕೆ. ಯಡಿಯೂರಪ್ಪನವರ ಕಾಲದಲ್ಲಿ ಅನುಮೋದನೆ ಗೊಂಡಿದ್ದು ಕೆಲ ಲೋಪದೋಷಗಳಿಂದ ಸ್ಥಗಿತವಾಗಿತ್ತು. ಚಿತ್ರದುರ್ಗ 400 ಹಾಗೂ ಶಿವಮೊಗ್ಗ 450 ಒಟ್ಟು 800 ಒಕ್ಕೂಟಗಳಾಗುತ್ತವೆ. ಇದನ್ನು ಪ್ರತ್ಯೇಕ ಮಾಡಲು ದಾವಣಗೆರೆಯಲ್ಲಿ 14 ಎಕರೆ ಜಮೀನು ಹೊಂದಿದ್ದು ಅಲ್ಲಿ ಒಕ್ಕೂಟ ಸ್ಥಾಪನೆಗೆ ಸುಮಾರು 310 ಕೋಟಿ. ವೆಚ್ಚದಲ್ಲಿ ಮೆಗಾ ಟೈಪ್ ಪ್ರತಿದಿನ 5 ಲಕ್ಷ ಲೀಟರ್ ಶುದ್ದೀಕರಿಸಿ 17 ರೀತಿಯ ಪ್ರಾಡಕ್ಟ್ ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
ಕರ್ನಾಟಕದಲ್ಲಿ 15 ಒಕ್ಕೂಟಗಳಿದ್ದರೂ ಸಹ ನಂದಿನಿ ಒಕ್ಕೂಟ ಮೊದಲು ಪೇಮೆಂಟ್ ಮಾಡುತ್ತಿದೆ. ಜೊತೆಗೆ ರೈತರಿಗೆ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸಿಕೊಡುತ್ತೇವೆ. ಹಸುಗಳಿಗೆ ಏನಾದರೂ ಸಾವನಪ್ಪಿದ್ದರೆ. ಅದರ ವ್ಯಾಲ್ಯೂಯೇಷನ್ ಹಣವನ್ನು ನಾವೇ ಕಟ್ಟುತ್ತೇವೆ ಹಾಲು ಕರೆಯುವ ಮಿಷನ್ ಗಳಿಗೆ 20ಸಾವಿರ ಸಬ್ಸಿಡಿ ನೀಡುತ್ತಿದ್ದೇವೆ. ಹಾಲು ಹಾಕುವ ರೈತರಿಗೆ ಒಕ್ಕೂಟದಿಂದ 750 ಹಣ ಹಾಕಿ ಇನ್ಸೂರೆನ್ಸ್ ಮಾಡಿಸಿ ಕೊಡುತ್ತೇವೆ. ಚಳ್ಳಕೆರೆ ತಾಲೂಕಿನಲ್ಲಿ 56 ಲಕ್ಷಕ್ಕೂ ಅಧಿಕ ಇನ್ಸೂರೆನ್ಸ್ ಹಣವನ್ನು ರೈತರು ಪಡೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಮುಲ್ ಮಾರ್ಕೆಟಿಂಗ್ ವಿಭಾಗದ ಹಾಗೂ ಕಚೇರಿ ಇರ್ಫಾನ್ ಸಿಬ್ಬಂದಿ ಅಭಿಷೇಕ. ಸುರೇಶ್ ಬಾಬು, ಅಭಿ, ಜಗದೀಶ್ ಹಾಜರಿದ್ದರು.

