Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Monday, July 6
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ.ರಘು ಪೌರ ಕಾರ್ಮಿಕರಿಗೂ ನಿವೇಶನ ಮಂಜೂರಾತಿ ಭರವಸೆ
Uncategorized

ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ.ರಘು ಪೌರ ಕಾರ್ಮಿಕರಿಗೂ ನಿವೇಶನ ಮಂಜೂರಾತಿ ಭರವಸೆ

KumarBy KumarOctober 31, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಪೌರ ಹಾಗೂ ಸ್ವಚ್ಛತಾ ಕಾರ್ಮಿಕರ ಸಂಕಷ್ಟಗಳ ಅನಾವರಣ

ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ.ರಘು ಸಂವಾದ

ಪೌರ ಕಾರ್ಮಿಕರಿಗೂ ನಿವೇಶನ ಮಂಜೂರಾತಿ ಭರವಸೆ

ಚಿತ್ರದುರ್ಗ ಹೊಯ್ಸಳ :

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು.ಪಿ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪೌರ ಹಾಗೂ ಸ್ವಚ್ಛತಾ ಕಾರ್ಮಿಕ ಸಂಕಷ್ಟಗಳ ಅನಾವರಣಗೊಂಡಿತು.
ನೌಕರಿ ಖಾಯಂಗೊಳಿಸುವಿಕೆ, ಕನಿಷ್ಠ ವೇತನ, ಇ.ಎಸ್.ಐ, ಪಿ.ಎಫ್. ಕಟಾವಣೆ, ವಾರ್ಷಿಕ ವೇತನ ಬಡ್ತಿ, ವಿಶೇಷ ಭತ್ಯೆ, ಸಮವಸ್ತ, ಸುರಕ್ಷಾ ಸಾಧನಗಳು, ಉಪಹಾರ, ವೈದ್ಯಕೀಯ ತಪಾಸಣೆ, ನಿವೇಶನ ಮಂಜೂರಾತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಆಯೋಗದ ಅಧ್ಯಕ್ಷ ಪಿ.ರಘು ಅವರಲ್ಲಿ ಪೌರ ಕಾರ್ಮಿಕರು ತಮ್ಮ ಅಳಲು ತೊಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧ್ಯಕ್ಷ ಪಿ. ರಘು ಅವರು, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ಅವರಿಂದಲೇ ಮಾಹಿತಿ ಪಡೆಯುವ ಸಲುವಾಗಿ ಸಂವಾದ ಏರ್ಪಡಿಸಲಾಗಿದ್ದು, ಇಲ್ಲಿ ಮಂಡಿಸಲಾಗುವ ಸಮಸ್ಯೆಗಳು, ಅಹವಾಲುಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಹೇಳಿದರು.ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ.ರಘು ಸಂವಾದ

ಪೌರ ಕಾರ್ಮಿಕರಿಗೂ ನಿವೇಶನ ಮಂಜೂರಾತಿ ಭರವಸೆ
*ನಿವೇಶನ ಮಂಜೂರಾತಿಗೆ ಕೋರಿಕೆ:*

ಪೌರ ಕಾರ್ಮಿಕರಿಗೆ ನಿವೇಶನಗಳನ್ನು ಮಂಜೂರು ಮಾಡಿಲ್ಲ, 700 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು ಎಂಬ ನಿಯಮವಿದೆ, ಹೀಗಾಗಿ ಚಿತ್ರದುರ್ಗ ನಗರಸಭೆಗೆ 350 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ ಕೇವಲ 162 ಪೌರ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕಾತಿ ಮಾಡಬೇಕು. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ 4 ಪ್ರಕರಣಗಳು ದಾಖಲು ಆಗಿವೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ದುರಗೇಶಪ್ಪ ಅಧ್ಯಕ್ಷರಲ್ಲಿ ಕೋರಿದರು.

*ಗೋಣಿ ಚೀಲದಲ್ಲಿ ತುಂಬಿ ಉಪಹಾರ ವಿತರಣೆ ಆರೋಪ:*

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಸ್ವಚ್ಛವಿರದ ಗೋಣಿ ಚೀಲದಲ್ಲಿ ತುಂಬಿ ತಂದು ನೀಡುತ್ತಾರೆ. ಈ ಕುರಿತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಆದರೂ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಿಲ್ಲ. ಚಿತ್ರದುರ್ಗ ನಗರದಲ್ಲಿ ಮುಂಜಾನೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕ ಮಹಿಳೆಯ ಮೇಲೆ ಆಟೋಚಾಲಕ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ. ಇಂತಹ ಘಟನೆಗಳು ಮರುಕಳಿಸದಂತೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮ್ಯಾನ್ಯುಯಲ್ ಸ್ಕಾö್ಯವೆಂಜಿಂಗ್ ಪುರ್ನವಸತಿ ಸಮಿತಿ ಸದಸ್ಯ ಮಂಜಣ್ಣ ಆಗ್ರಹಿಸಿದರು.
ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಕಾರ್ಮಿಕರು ಇಲ್ಲಾ ಎಂದು ವರದಿ ನೀಡಲಾಗಿದೆ. ಆದರೆ ನಗರಸಭೆ ಹೊರತು ಪಡಿಸಿ, ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಸಕ್ಕಿಂಗ್ ಮಿಷನ್‌ಗಳು ಇಲ್ಲ. ಜಿಲ್ಲೆಯಲ್ಲಿ ಕೈಯಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವವರು ಇದ್ದಾರೆ. ಈ ಬಗ್ಗೆ ಅಧಿಕಾರಿಗಳು ನಿಖರ ಮಾಹಿತಿ ನೀಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ಪೌರ ಕಾರ್ಮಿಕರಿಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅಧ್ಯಕ್ಷರಲ್ಲಿ ಮಂಜಣ್ಣ ಕೋರಿದರು.
5 ವರ್ಷಗಳಿಂದ ಸಮವಸ್ತ ನೀಡಿಲ್ಲ:
*********
ಚಿತ್ರದುರ್ಗ ನಗರಸಭೆಯಲ್ಲಿ 5 ವರ್ಷಗಳಿಂದ ಪೌರಕಾರ್ಮಿರಿಗೆ ಸಮವಸ್ತçಗಳನ್ನು ನೀಡಿಲ್ಲ. ಸುರಕ್ಷಾ ಪರಿಕರಗಳನ್ನು ಸಹ ಸಮರ್ಪಕವಾಗಿ ಕೊಡುವುದಿಲ್ಲ. ಸಭೆಗೆ ನಮ್ಮ ಹಣದಿಂದ ಕೊಂಡ ಸಮವಸ್ತç ಧರಿಸಿ ಬಂದಿದ್ದೇವೆ. ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ವರದಿಗಳನ್ನು ನೀಡುತ್ತಿಲ್ಲ. ಅಗತ್ಯ ಇರುವಷ್ಟು ಔಷಧಿಗಳನ್ನು ಕೊಡುವುದಿಲ್ಲ, ಎಂದು ಆರೋಪಿಸಿದ ಪೌರಕಾರ್ಮಿಕರು, ಸದ್ಯ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತಿದೆ. ಆದರೆ ಜನಜಂಗುಳಿಯ ನಡುವೆ ಪೌರ ಕಾರ್ಮಿಕರು ಅಗತ್ಯ ಇರುವ ಎಲ್ಲಾ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತದೆ, ಹೀಗಾಗಿ ವರ್ಷದ 365 ದಿನವೂ ಆಸ್ಪತ್ರೆಗೆ ತೆರಳಿ ಉಚಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಅನುವಾಗುವಂತೆ ಆರೋಗ್ಯ ಕಾರ್ಡು ನೀಡಬೇಕು ಎಂದು ಪೌರಕಾರ್ಮಿಕರಾದ ರಾಜಪ್ಪ, ತನ್ವೀರ್ ಪಾಷ, ಕಾಮಾಕ್ಷೀ ಮನವಿ ಮಾಡಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.
ಪರಿಹಾರ ಧನ ಪಾವತಿಸಲು *ಬೇಡಿಕೆ:*

ಚಿತ್ರದುರ್ಗ ನಗರಸಭೆಯಲ್ಲಿ ನೇರ ಪಾವತಿಯಡಿ ಕೆಲಸ ಮಾಡುತ್ತಿದ್ದ 3 ಸಫಾಯಿ ಕರ್ಮಚಾರಿಗಳು ಮರಣ ಹೊಂದಿದ್ದಾರೆ. ಅವರಿಗೆ ಪರಿಹಾರ ಧನ ನೀಡುವುದು ಬಾಕಿಯಿದೆ. ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕ ನವೀನ್ ಕುಮಾರ್ ಅಧ್ಯಕ್ಷರಲ್ಲಿ ಕೋರಿಕೊಂಡರು.
*ನೇಮಕಾತಿ ಆದೇಶ ನೀಡಿ:*

1994-95 ರಿಂದ ಚಳ್ಳಕೆರೆ ನಗರಸಭೆಯಲ್ಲಿ ನೇರಪಾವತಿಯಡಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ ಖಾಯಂಗೊಳಿಸಿಲ್ಲ. ನಿವೇಶನ ಕೂಡ ನೀಡಿಲ್ಲ. ಕೇವಲ ಮರ‍್ನಾಲ್ಕು ವರ್ಷ ಸೇವೆ ಇದೆ. ಖಾಯಂ ಆಗದಿದ್ದರೆ ಹೆಂಡತಿ ಮಕ್ಕಳು ಬೀದಿಗೆ ಬೀಳುತ್ತಾರೆ. ದಯಮಾಡಿ ಖಾಯಂಗೊಳಿಸಿ ನೇಮಕಾತಿ ಆದೇಶ ನೀಡುವಂತೆ ಚಳ್ಳಕೆರೆ ಜಯಣ್ಣ ಕೇಳಿಕೊಂಡರು. ಅದೇ ರೀತಿ ಪೌರಕಾರ್ಮಿಕ ಜಗನ್ನಾಥ್ ಕೂಡ, ತಮ್ಮ ವೇತನದಲ್ಲಿ ಪಿ.ಎಫ್. ಐ.ಎಸ್.ಐ ಕಟಾವಣೆ ಮಾಡಿದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. ತಿಂಗಳ ವೇತನ ಪ್ರಮಾಣ ಪತ್ರ ಕೇಳಿದರೂ ನೀಡುತ್ತಿಲ್ಲ. ತಿಂಗಳ 5 ತಾರೀಖಿನ ಒಳಗೆ ವೇತನ ಪಾವತಿಯಾಗುತ್ತಿಲ್ಲ ಎಂದು ಅವಹಾಲು ಹೇಳಿಕೊಂಡರು.
ನಿವೇಶನದ ಮಂಜೂರಾತಿ *ಭರವಸೆ:*

ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೆ ನಿವೇಶನ ಮಂಜೂರಾತಿ ಮಾಡುವುದು ನನ್ನ ಪ್ರಥಮ ಆಧ್ಯತೆಯಾಗಿದೆ. ಈಗಾಗಲೇ ಖಾಯಂಗೊAಡ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪೌರ ಕಾರ್ಮಿಕರು ಸಂವಾದಲ್ಲಿ ಹೇಳಿಕೊಂಡ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಮುಕ್ತಿ ಹಾಡುವುದಾಗಿ ರಾಜ್ಯ ಸಫಾಯಿ ಕರ್ಮಚಾರಿ ಆಯೊಗದ ಅಧ್ಯಕ್ಷ ರಘು.ಪಿ ಭರವಸೆ ನೀಡಿದರು.
ಈ ವೇಳೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಮಹಾದೇವ ಸ್ವಾಮಿ, ಸಿಇಓ ಡಾ. ಆಕಾಶ್.ಸಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಸೇರಿದಂತೆ ಮತ್ತಿತರರು ಇದ್ದರು.
Share. Facebook Twitter Pinterest LinkedIn Tumblr Email
Previous Articleಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ನ್ಯೂಸ್ 18 ವರದಿಗಾರ ಬಿ.ಎಸ್.ವಿನಾಯಕ್  ಅವಿರೋಧ ಆಯ್ಕೆ
Next Article ಅವೈಜ್ಞಾನಿಕ ಸ್ಪೀಡ್ ಹಂಪ್ಸ್ ನಿಂದ ಒಂದೇ ದಿನಕ್ಕೆ ಆರು ಅಪಘಾತ
Kumar
  • Website

Related Posts

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026

Boho Casino im Test: Spiele, Boni und Auszahlung

June 30, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Boho Casino Test: Spiele, Boni & Auszahlungen

Ivibet Casino im Test: Spiele, Boni & Auszahlungen

Boho Casino im Test: Spiele, Boni und Auszahlung

Hexabet Casino Test: Spiele, Boni und Auszahlungen

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Boho Casino Test: Spiele, Boni & Auszahlungen

July 5, 2026

Ivibet Casino im Test: Spiele, Boni & Auszahlungen

July 2, 2026

Boho Casino im Test: Spiele, Boni und Auszahlung

June 30, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.