ಅವೈಜ್ಞಾನಿಕ ಸ್ಪೀಡ್ ಹಂಪ್ಸ್ ನಿಂದ ಒಂದೇ ದಿನಕ್ಕೆ ಆರು ಅಪಘಾತ
ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ:
ರಸ್ತೆಯ ಮೇಲೆ ವಾಹನಗಳ ವೇಗವನ್ನು ಕಡಿಮೆ ಮಾಡಲು ಸ್ಪೀಡ್ ಹಂಪ್ಸ್ ನಿರ್ಮಾಣ ಮಾಡಿ ಅಪಘಾತಗಳನ್ನು ನಿಯಂತ್ರಿಸಿ ಪಾದಚಾರಿಗಳ ಸುರಕ್ಷತೆಗಾಗಿ ನಿರ್ಮಿಸುತ್ತಾರೆ. ಅದರೆ ಇಲ್ಲೊಂದು ಸೂಚನಾ ಫಲಕ ವಿಲ್ಲದೆ ಅವೈಜ್ಞಾನಿಕ ಸ್ಪೀಡ್ ಹಂಪ್ಸ್ ದಾಟಲು ಹೋಗಿ ಆರು ಅಪಘಾತಗಳು ಆಗಿರುವುದು ಬೆಳಕಿಗೆ ಬಂದಿದೆ.
ಹೌದು ಚಳ್ಳಕೆರೆ ನಗರದ ಕೃಷಿ ಮಾರುಕಟ್ಟೆ ಮುಂಭಾಗದ ರಸ್ತೆಗೆ ಶುಕ್ರವಾರ ಬೆಳಗ್ಗೆ 11ಗಂಟೆ ಸಮಯದಲ್ಲಿ ಸೂಚನಾ ನಾಮ ಫಲಕ ,ಕಪ್ಪು, ಬಿಳಿ ಮತ್ತು ಕತ್ತಲಿನಲ್ಲಿ ಸ್ವಯಂ-ಪ್ರತಿಫಲಿಸುವ ರೇಡಿಯಂ ಸ್ಟಿಕ್ಕರ್ ಬಣ್ಣಗಳನ್ನು ಪಟ್ಟೆಗಳ ರೂಪದಲ್ಲಿ ಹಂಪ್‌ಗಳ ಮೇಲೆ ಹಚ್ಚದೆ,ಅವೈಜ್ಞಾನಿಕ ಸ್ಪೀಡ್ ಹಂಪ್ಸ್ ನಿರ್ಮಾಣ ಮಾಡಿರುವುದಕ್ಕೆ ಸಂಜೆ 7 ಗಂಟೆಯಿಂದ 9ಗಂಟೆಯ ಒಳಗಡೆ ಆರು ದ್ವಿ ಚಕ್ರ ವಾಹನ ಸವಾರರು ವೇಗವಾಗಿ ಬಂದು ಹಂಪ್ಸ್ ದಾಟಿಸಲು ಹೋಗಿ ಅಪಘಾತಕಿಡಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆಯ ಅತಿವೇಗದ ಚಾಲನೆಯನ್ನು ನಿಯಂತ್ರಿಸುವ ಮೂಲಕ ಅಪಘಾತಗಳನ್ನು ತಡೆಯಲು ಸಹಾಯ ಮಾಡಲು ಸ್ಪೀಡ್ ಹಂಪ್‌ಗಳು ನೇಮಿಸಿದ್ದಾರೆ. ಆದರೆ ಕೃಷಿ ಮಾರುಕಟ್ಟೆ ರಸ್ತೆಗೆ ಶುಕ್ರವಾರ ಹಾಕಿರುವ ಸ್ಪೀಡ್ ಹಂಪ್ಸ್ ನಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದೆ ಎಂದು ಶಾಮಿಯಾನದ ಕೆಂಪು ನೀಲಿ ಬಣ್ಣದ ಪಟ್ಟಿಯನ್ನು ವಾಹನ ಸವಾರರಿಗೆ ತೋರಿಸಿ, ಸ್ಪೀಡ್ ಹಂಪ್ಸ್ ಇದೆ ನಿಧಾನವಾಗಿ ಚಲಿಸಲು ಸೂಚನೆ ನೀಡುತ್ತಿದ್ದೇವೆ. ಅದರೆ ರಾತ್ರಿ ಸಮಯದಲ್ಲಿ ಅಪಘಾತ ತಪ್ಪಿಸಲು ಪೊಲೀಸ್ ಇಲಾಖೆಯ ಸಹಕಾರ ಅಗತ್ಯವಾಗಿದೆ ಅವರಿಂದ ಬ್ಯಾರಕೇಟ್ ತಂದರೆ ಅನುಕೂಲವಾಗುತ್ತದೆ ಎಂದು ಮೊಹಮದ್ ಅಲಿ ತಿಳಿಸಿದ್ದಾರೆ
ಈ ಸಂದರ್ಭಲ್ಲಿ ಶ್ರೀನಿವಾಸ ಲೋಕೇಶ್ ಅಲಿ ಪ್ರಕಾಶ್ , ಮಧು ಇತರರು ಸ್ಪೀಡ್ ಹಂಪ್ಸ್ ಹಾಕಿಸಿರುವ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಇತ್ತ ಕಡೆ ಗಮನ ಹರಿಸಿ ಅವೈಜ್ಞಾನಿಕ ಸ್ಪೀಡ್ ಹಂಪ್ಸ್ ಗೆ ಸೂಚನಾ ನಾಮ ಫಲಕದ ಬೋರ್ಡ್, ಬಿಳಿ ಬಣ್ಣದ ಪಟ್ಟಿ, ರೇಡಿಯಂ ಸ್ಟಿಕ್ಕರ್ ಹಾಕಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಲು ಮುಂದಾಗುತ್ತರ ಎಂದು ಕಾದು ನೋಡಬೇಕಿದೆ .
