(ಮಕ್ಕಳಂದರೆ ಹೆತ್ತವರ ಪಾಲಿಗೆ ಶಾಶ್ವತವಾಗಿ ಅರಳುವ ಹೂವುಗಳು )
ಒಂದು ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡುವುದು
ಚಿತ್ರದುರ್ಗ ಹೊಯ್ಸಳ:
ವರದಿ: ಎನ್.ಕುಮಾರ ಸ್ವಾಮಿ
ಮೊಳಕಾಲ್ಮುರು :
ತಾಲ್ಲೂಕು ಚಿಕ್ಕುಂತಿ ಗ್ರಾಮದಲ್ಲಿ ಉನ್ನತೀ ಕರಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪೋಷಕರು ಮತ್ತು ಶಿಕ್ಷಕರ ಮಹಾಸಭೆ ಕಾರ್ಯಕ್ರಮ ನೆಡಿಯಿತು ಇನ್ನು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮುಖ್ಯ ಶಿಕ್ಷಕರಾದ ಮಂಜು ಪ್ರಸಾದ್ ಮಾತನಾಡಿ ಮಕ್ಕಳ ದಿನಾಚರಣೆಯು ಪ್ರತಿಯೊಂದು ಮಗುವೂ ಸಮಾನ ಅವಕಾಶ, ಶಿಕ್ಷಣ, ಪ್ರೀತಿ ಮತ್ತು ರಕ್ಷಣೆಗೆ ಅರ್ಹವಾಗಿದೆ ಎಂದು ನಮಗೆ ಕಲಿಸುತ್ತದೆ.
ಈ ದಿನ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವವನ್ನು ಸಾರಲಾಗುತ್ತದೆ.ಉಜ್ವಲ ನಾಳೆಗಾಗಿ ಮಕ್ಕಳಿಕೆ ಶಕ್ತಿ ತುಂಬಿ ಮಗು ಎಂದರೆ ಜೀವನದ ನಿಜವಾದ ಉಡುಗೊರೆ. ಅವರು ಇಲ್ಲದೇ ನಾಳೆ ಇಲ್ಲದ
ಮಕ್ಕಳೆಂದರೆ ಹೆತ್ತವರ ಪಾಲಿಗೆ ಶಾಶ್ವತವಾಗಿ ಅರಳುವ ಹೂವುಗಳು. ಮಗುವು ಮನೆಗೆ ಸಂತೋಷ ತರುತ್ತದೆ ಎಂದು ಶಿಕ್ಷಕಿಯರಾದ ಶ್ರೀಮತಿ ಅನ್ನಪೂರ್ಣ ತಿಳಿಸಿದರು ಇದರೊಂದಿಗೆ,
ನಾವು ದೇಶದ ಎಲ್ಲಾ ಮಕ್ಕಳನ್ನು ಗೌರವದಿಂದ ಕಾರಣಬೇಕು, ಅವರಿಗೆ ರಕ್ಷಣೆ ನೀಡಬೇಕು. ಮಕ್ಕಳ ದಿನವು ನಮ್ಮ ಈ ಜವಾಬ್ದಾರಿಯನ್ನು ನಮಗೆ ಜ್ಞಾಪಿಸುತ್ತದೆ ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ನಾವು ಸದಾ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡೋಣ ಎಂದು ಶಿಕ್ಷಕರಾದ ರಂಗನಾಥ್ ತಿಳಿಸಿದರು.
ಒಂದು ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡುವುದು. ಮಗುವನ್ನು ಎಂದಿಗೂ ತಾತ್ಸಾರದಿಂದ ಕಾಣಬೇಡಿ ಪ್ರತಿಯೊಂದು ಮಗುವೂ ವಿಭಿನ್ನ ರೀತಿಯ ಹೂವುಗಳು ಮತ್ತು ಈ ಹೂವುಗಳೆಲ್ಲಾ ಒಟ್ಟಾಗಿ ಈ ಜಗತ್ತನ್ನು ಸುಂದರವಾದ ಉದ್ಯಾನವನ್ನಾಗಿ ಮಾಡುತ್ತಾರೆ ನಿಮ್ಮ ಮುಗ್ಧತೆ ನಮಗೆ ಹೀಗೆಯೇ ಸ್ಫೂರ್ತಿದಾಯಕವಾಗಿ ಮುಂದುವರಿಯಲಿ ಎಂದು ಸ್ಡಿಎಂಸಿ ಅಧ್ಯಕ್ಷ ಪಾಪಣ್ಣ ವ್ಯಕ್ತಪಡಿಸಿದರು. ಕಳೆದ ಸೆಮಿಸ್ಟರ್ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಕಾರ್ಯಕ್ರಮ ಸಂಧರ್ಭದಲ್ಲಿ ಮೆಂಬರ್ ಬೋರಯ್ಯ ದಾಸರ ಓಬಯ್ಯ ಪಾಲಯ್ಯ ಸಣ್ಣ ಮಲ್ಲಯ್ಯ ಮಲ್ಲಣ್ಣ ಚಂದ್ರಣ್ಣ ದೊಡ್ಡ ಮಲ್ಲಯ್ಯ ಗ್ರಾಮಪಂ ಸದಸ್ಯರಾದ ಜಂಗಮ ಕಾಮಯ್ಯ ಹಾಗೂ ಶಾಲಾ ಶಿಕ್ಷಕರು ಅತಿಥಿ ಶಿಕ್ಷಕರು ಶಿಕ್ಷಕಿಯರು ಶಾಲಾ ಮಕ್ಕಳು ಹಾಗೂ ಊರಿನ ಉಪಸ್ಥಿತರಿದ್ದರು
