ತಳಕು ಪೊಲೀಸರಿಂದ ಅಂತರ್ ರಾಜ್ಯ ಕಳ್ಳನ ಬಂಧನ, 4,20 ಲಕ್ಷದ ಬಂಗಾರ 2 ಸಾವಿರ ನಗದು ವಶ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಳ್ಳಕೆರೆ:
ತಳಕು ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಸಿ, ಬಂಧಿತನಿಂದ 4,20 ಲಕ್ಷ ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ 2 ಸಾವಿರ ರೂ ನಗದು ಹಣ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ, ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.01 ರ ಮಧ್ಯಾಹ್ನ 2 ಗಂಟೆಯಿಂದ ನ.02 ರ ಸಂಜೆ 4 ಗಂಟೆಯ ಮಧ್ಯಾಹ್ನದ ಯಾವುದೋ ಸಮಯದಲ್ಲಿ ಚಳ್ಳಕೆರೆ ತಾಲ್ಲೂಕಿನ ಹೊನ್ನೂರು ಗ್ರಾಮದ ವಾಸಿ ಧನಂಜಯ್ ರೆಡ್ಡಿ ರವರ ಮನೆಯ ಬಾಗಿಲಿನ ಇಂಟರ್ ಲಾಕ್ ಮುರಿದು ಮನೆಯೊಳಗೆ ನುಗ್ಗಿ ಬೀರುವಿನ ಲಾಕ್ ಮುರಿದು ಅದರಲ್ಲಿದ್ದ 5 ಸಾವಿರ ಹಣ ಮತ್ತು 40 ಸಾವಿರ ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಎಂದು ತಳಕು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧಿಕ್ಷಕರವರಾದ ರಂಜಿತ್ ಕುಮಾರ ಭಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಆರ್ ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಸತ್ಯನಾರಾಯಣ ರಾವ್ ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪವಿಭಾಗ ರವರ ನಿರ್ದೇಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಹನುಮಂತಪ್ಪ ಎಂ ಶಿರೀಹಳ್ಳಿ ರವರ ನೇತೃತ್ವದಲ್ಲಿ ಪಿ.ಎಸ್.ಐ ಶಿವಕುಮಾರ ಕೆ. ಪ್ರೋ.ಪಿ.ಎಸ್.ಐ ಚೇತನ್, ಎ.ಎಸ್.ಐ ಮಂಜಣ್ಣ ಹಾಗೂ ಸಿಬ್ಬಂದಿಗಳಾದ ನಿತಿನ್ ಕುಮಾರ್, ಜಾಕೀರ್ ಹುಸೇನ್, ಮಂಜುನಾಥ, ಧನಂಜಯ, ಜಗದೀಶ್, ವೀರೇಶ, ಮಾರೇಶ ಮತ್ತು ಪರಶುರಾಂಪುರ ಠಾಣೆಯ ಪಿ.ಎಸ್.ಐ ಮಾರುತಿ ಹಾಗೂ ಸಿಬ್ಬಂದಿಗಳಾದ ಏಕಾಂತರೆಡ್ಡಿ, ಮಂಜುನಾಥ ಮುಡಕೆ ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿ ಪತ್ತೆಗೆ ನೇಮಿಸಿದ್ದು, ಈ ತಂಡವು ಆರೋಪಿಯಾದ 32 ವರ್ಷದ ಶೇಖ್ ಖಾಜಾಪೀರ್, ಎಂಬ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆತನಿಂದ ತಳಕು ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 70 ಸಾವಿರ ಬೆಲೆ ಬಾಳುವ ಬಂಗಾರದ ಆಭರಣಗಳು & 2 ಸಾವಿರ ನಗದು ಹಣ ಹಾಗೂ ಪರಶುರಾಂಪುರ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ ಸುಮಾರು 3,50, ಲಕ್ಷ ರೂಪಾಯಿ ಬೆಲೆಬಾಳುವ 27 ಗ್ರಾಂ ಬಂಗಾರದ ನಕ್ಷೇಸನ್ನು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ ಭಂಡಾರು ಶ್ಲಾಘಿಸಿರುತ್ತಾರೆ

ತಳಕು ಪೊಲೀಸರಿಂದ ಅಂತರ್ ರಾಜ್ಯ ಕಳ್ಳನ ಬಂಧನ, 4,20 ಲಕ್ಷದ ಬಂಗಾರ 2 ಸಾವಿರ ನಗದು ವಶ