
ಕೆ.ಮಹಾದೇವನ್ ನಿಧನ
ನೇತ್ರತಜ್ಞ, ಮಾಜಿ ಶಾಸಕ ಡಾ. ಬಿ.ಎಂ. ತಿಪ್ಪೇಸ್ವಾಮಿ ಅವರ ಪತ್ನಿಯ ಸಹೋದರ.ಕೆ.ಮಹಾದೇವನ್ ಇವರು, ದಿನಾಂಕ 19.12.2025ರ ಶುಕ್ರವಾರ ರಾತ್ರಿ 7.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಪುತ್ರಿ, ಅಳಿಯ ಹಾಗೂ ಮೊಮ್ಮಕ್ಕಳು ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ದಿನಾಂಕ 20.12.2025ರ ಶನಿವಾರ ಬೆಳಿಗ್ಗೆ 9ರ ತನಕ ದಾವಣಗೆರೆ ಸ್ವಗೃಹದಲ್ಲಿ ದರ್ಶನಕ್ಕೆ ಇರಿಸಲಾಗುವುದು. ನಂತರ ಮಧ್ಯಾಹ್ನ 2ರವರೆಗೆ ಮೃತರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಚಿತ್ರದುರ್ಗದ ಕೆಳಗೋಟೆಯ ಡಾ:ಅಂಬೇಡ್ಕರ್ ನಗರ 3 ನೇ ಕ್ರಾಸ್ ನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು.
ತದನಂತರ ಮಧ್ಯಾಹ್ನ 2.30 ಗಂಟೆಗೆ ಚಿತ್ರದುರ್ಗ ನಗರದ ಸೈನ್ಸ್ ಕಾಲೇಜ್ ಹಿಂಭಾಗದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು.
7619214291,9591767105
