May 20, 2024

Chitradurga hoysala

Kannada news portal

ಮದ್ಯದ ಅಂಗಡಿಗಳಿಗೆ ಹೊಸದಾಗಿ ಪರವಾನಿಗೆ ನೀಡಬೇಡಿ: ಜಿಲ್ಲಾ ಜನಜಾಗೃತಿ ವೇದಿಕೆ ಒತ್ತಾಯ

1 min read

ಮದ್ಯದ ಅಂಗಡಿಗಳಿಗೆ ಹೊಸದಾಗಿ ಪರವಾನಿಗೆ ನೀಡಬೇಡಿ:

ಜಿಲ್ಲಾ ಜನಜಾಗೃತಿ ವೇದಿಕೆ ಒತ್ತಾಯ

ವರದಿ:ಕಾವೇರಿ ಮಂಜಮ್ಮನವರ್,

ಚಿತ್ರದುರ್ಗಹೊಯ್ಸಳ ನ್ಯೂಸ್/

ಹೊಸದುರ್ಗ :

ನಾಡಿನ ಪ್ರಜೆಗಳು ಹೆಚ್ಚಿನದಾಗಿ ಕೂಲಿ ಕಾರ್ಮಿಕರಾಗಿದ್ದು, ಮದ್ಯ ಮುಕ್ತ ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುವಂತೆ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು. ಅದನ್ನು ಬಿಟ್ಟು ಮಾರಕವಾಗುವಂತಹ ಯೋಜನೆಗಳನ್ನು ಜಾರಿಗೆ ತರಬಾರದು. ಸರ್ಕಾರ ಮಧ್ಯದ ಅಂಗಡಿಗಳಿಗೆ ಹೊಸದಾಗಿ ಪರವಾನಿಗೆ ನೀಡಲು ನಿರ್ಧರಿಸುವುದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಜಿಲ್ಲಾ ಜನ ಜಾಗೃತಿ ವೇದಿಕೆ ವತಿಯಿಂದ ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಪಿ. ಓಂಕಾರಪ್ಪ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇದುವರೆಗೂ 1735 ಮಧ್ಯವರ್ಜನ ಶಿಬಿರಗಳನ್ನು ಮಾಡುವುದರ ಮುಖಾಂತರ ಕನಿಷ್ಠ ಎರಡು ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಿದ್ದಾರೆ. ದುಶ್ಚಟ ಮುಕ್ತ ಮತ್ತು ದ್ವೇಷ ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವ ಸಂಕಲ್ಪದಲ್ಲಿ ಸತತ 40 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಸರ್ಕಾರ ಕುಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು. ಗ್ರಾಮೀಣ ಭಾಗದಲ್ಲಿ ಬದುಕನ್ನು ಕಟ್ಟಿಕೊಂಡಿರುವ ಅನೇಕ ರೈತ ಕುಟುಂಬದ ಮಕ್ಕಳು ಇಂದು ಮಧ್ಯಪಾನದಂತಹ ದುಷ್ಟಕ್ಕೆ ಬಲಿಯಾಗಿದ್ದು, ಆ ಕುಟುಂಬಗಳು ಬಹಳಷ್ಟು ನೋವು ಅನುಭವಿಸುತ್ತಿವೆ. ಅಂತಹ ನೂರಾರು ಕುಟುಂಬಗಳನ್ನು ಮಧ್ಯರ್ಜನ ಶಿಬಿರಗಳ ಮೂಲಕ ಜಿಲ್ಲಾ ಜನಜಾಗೃತಿ ವೇದಿಕೆ ಮಧ್ಯ ಮುಕ್ತ ಬದುಕು ಕಟ್ಟಿಕೊಟ್ಟು ನವಜೀವನ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿದೆ ಎಂದರು.

ಯಾವುದೇ ಕಾರಣಕ್ಕೂ ಸರ್ಕಾರ ಹೊಸ ಮಧ್ಯದ ಅಂಗಡಿಗಳನ್ನ ತೆರೆಯಬಾರದು. ನಗರ ಪ್ರದೇಶಗಳಲ್ಲಿ ಇರುವ ಬಾರ್ ಹಾಗೂ ವೈನ್ ಶಾಪ್‌ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಸ್ಥಳಾಂತರಿಸಬಾರದು. ರಾಜ್ಯ ಸರ್ಕಾರ ಅಬಕಾರಿ ಇಲಾಖೆ ಟಾರ್ಗೆಟ್ ಪದ್ಧತಿಯನ್ನು ರದ್ದುಗೊಳಿಸಿ, ಅಬಕಾರಿ ಕಾಯ್ದೆಯನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.

ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮತ್ತು ಸಮಾಜ ಸೇವಕ ಆಗ್ರೋ ಶಿವಣ್ಣ ಮಾತನಾಡಿ, ಸ್ಥಳೀಯ ಜನಪರ ಸಂಘಟನೆಗಳು ಒಕ್ಕೂಟಗಳು, ಧಾರ್ಮಿಕ ಕೇಂದ್ರಗಳು ಮತ್ತು ದಲಿತ ಸಂಘಟನೆ ಅವರು ಆಕ್ಷೇಪಿಸುವ ಕಡೆಗಳಲ್ಲಿ ಯಾವುದೇ ಮಧ್ಯದ ಅಂಗಡಿಗೆ ಅವಕಾಶ ನೀಡಬಾರದು. ಮಧ್ಯಪಾನ ಶಿಬಿರಗಳಲ್ಲಿ ಪಾನಮುಕ್ತ ಬದುಕು ಕಟ್ಟಿಕೊಂಡವರಿಗೆ ಸರ್ಕಾರ ವಿಶೇಷ ಸೌಲಭ್ಯ ಅಥವಾ ಪ್ಯಾಕೇಜ್ ನೀಡುವ ಬಗ್ಗೆ ಚಿಂತಿಸಬೇಕು, ಸರ್ಕಾರ ಕುಡಿತದಿಂದ ಆಗುವ ಕೆಡಕಿನ ಬಗ್ಗೆ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು. ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ ಮತ್ತು ಇತರ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಜನಜಾಗೃತಿ ವೇದಿಕೆ ವರ್ಷವಿಡೀ ಕಾರ್ಯಕ್ರಮ ರೂಪಿಸುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯ ಮುಖಾಂತರವೇ ಆಯೋಜಿಸಲು ಸರ್ಕಾರ ಆದೇಶಿಸಬೇಕು, ಶಾಲಾ ಪಠ್ಯ ಪುಸ್ತಕಗಳಲ್ಲಿ ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಮೂಡಿಸುವ ಪಠ್ಯವನ್ನು ಅಳವಡಿಸಬೇಕೆಂದು ವೇದಿಕೆ ಒತ್ತಾಯಿಸುತ್ತದೆ ಎಂದರು.

ಮನವಿ ಪತ್ರ ಕೊಡುವ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಬಸವರಾಜ್ ತುಂಬಿನಕೆರೆ, ರಂಗಸ್ವಾಮಿ ಮಧ್ಯವಾರ್ಜನ ಶಿಬಿರ ಅಧ್ಯಕ್ಷ ಇ.ವಿ.ಅಜ್ಜಪ್ಪ, ವೇಣುಗೋಪಾಲ್, ಬನಸಿಹಳ್ಳಿ ಕಿರಣ್, ಹಾಲು ರಾಮೇಶ್ವರ ಯೋಜನಾಧಿಕಾರಿ ಚಂದ್ರಶೇಖರ್, ಹೊಸದುರ್ಗ ಯೋಜನಾಧಿಕಾರಿ ಶಿವಣ್ಣ ವಾಣಿ, ಶಿಲ್ಪಶ್ರೀ, ಜ್ಯೋತಿ, ಪಾರ್ವತಮ್ಮ ಮತ್ತು ಲತಾ ಅರುಣಾ ಸೇರಿದಂತೆ ಒಕ್ಕೂಟದ ಸದಸ್ಯರಿದ್ದರು.

About The Author

Leave a Reply

Your email address will not be published. Required fields are marked *