ದಾವಣಗೆರೆ ಜಿಲ್ಲಾಡಳಿತದಿಂದ ಹರಾಪ್ರ ಸನ್ಮಾನ
1 min read
ದಾವಣಗೆರೆ ಜಿಲ್ಲಾಡಳಿತದಿಂದ
ಹರಾಪ್ರ ಸನ್ಮಾನ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ದಾವಣಗೆರೆ ಅ 31:
ದಾವಣಗೆರೆಯ ಹಿರಿಯ ಪತ್ರಕರ್ತರೂ, ಕನ್ನಡ ಚಳುವಳಿ ಸಲಹೆಗಾರರೂ ಆದ ಹಳೇಬೀಡು ರಾಮಪ್ರಸಾದ್ ಅವರನ್ನು, ಸಮಾಜಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಇದೇ ನವೆಂಬರ್ ಒಂದರ ರಾಜ್ಯೋತ್ಸವದಂದು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುತ್ತಿದೆ.
” ಹರಾಪ್ರ” ಎಂದೇ ಹೆಸರಾಗಿರುವ ರಾಮಪ್ರಸಾದ್ ರವರು ಕಳೆದ ಸುಮಾರು ಐದು ದಶಕಗಳಿಂದ ಪತ್ರಿಕೆ ಹಾಗೂ ಸಾಮಾಜಿಕ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನವೆಂಬರ್ ಒಂದರ ಬೆಳಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ರು ಸಾಧಕರನ್ನು ಸನ್ಮಾನಿಸಲಿದ್ದಾರೆ.
ಸಾಧಕರಾದ ಹಳೇಬೀಡು ರಾಮಪ್ರಸಾದ್ ಸರ್ ಅವರಿಗೆ ಚಿತ್ರದುರ್ಗ ಹೊಯ್ಸಳ ಪತ್ರಿಕೆ ಬಳಗ ಅಭಿನಂದನೆ ಗಳನ್ನು ಸಲ್ಲಿಸುತ್ತದೆ.