May 2, 2024

Chitradurga hoysala

Kannada news portal

ಇಂದು ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ: ಬಿ ಎಂ ಕೃಷ್ಣಪ್ಪ

1 min read


ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ:                 ಬಿ.ಎಂ.ಕೃಷ್ಣಪ್ಪ

ವರದಿ: ಭರತ್ ಭಾರ್ಗವ್

ಚಿತ್ರದುರ್ಗ ಹೊಯ್ಸಳ:

ಹೂವಿನ ಹಡಗಲಿ:

ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕೋತ್ಸವ ಸಂಜೆ 5:30 ಜರುಗಲಿದೆ. ಮಳೆ ಬೆಳೆಗಳ, ದೆಶದ ಆರ್ಥಿಕ, ರಾಜಕೀಯ ವಿದ್ಯಮಾನಗಳ ಕುರಿತು ಭವಿಷ್ಯವನ್ನು ನಿರ್ಧರಿಸುವ ದೈವವಾಣಿ ಎಂದೇ ಬಿಂಬಿಸಲಾಗಿದೆ. ಸಂಜೆ 4:00 ವೇಳೆ ಗಂಗಿ ಮಾಳಮ್ಮ ಹೆಗ್ಗಪ್ಪ ದೆವರ ಉತ್ಸವವನ್ನು ಮಾಡಿಕೊಂಡು ಡೆಂಕನ ಮರಡಿಗೆ ತೆರಳಿ ದೆವಸ್ಥಾ ನದ ವಂಶ ಪರಂಪರ್ಯ ಧರ್ಮದರ್ಶಿಗಳಾದ ಶ್ರೀ ವೆಂಕಪ್ಪಯ್ಯ ಒಡೆಯರ್ ಅವರು ಕುದುರೆಯನ್ನೇರಿ ಬಂದು ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ ಅವರಿಗೆ ದೀಕ್ಷೆ ನೀಡುವರು ತದನಂತರ ಬಿಲ್ಲಿಗೆ ನಮಸ್ಕರಿಸಿ ಬಿಲ್ಲನ್ನೇರಿ ರಾಮಣ್ಣ ಕಾರ್ಣಿಕ ನುಡಿ ನುಡಿಯುವರು.

ದೈವ ವಾಣಿ ಆಲಿಸಲು ಹೊರ ರಾಜ್ಯಗಳಿಂದ, ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈಗಾಗಲೇ ವಿವಿಧ ಜಿಲ್ಲೆ ತಾಲೂಕುಗಳಿಂದ ಭಕ್ತರು ಎತ್ತಿನಗಾಡಿ ವಾಹನಗಳನ್ನು ಮಾಡಿಕೊಂಡು ಮೈಲಾರಕ್ಕೆ ಬಂದು ವಾಸ್ತವ್ಯ ಹೂಡಿದ್ದಾರೆ.

ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೈಲಾರದ ಸುತ್ತ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್ಹಾಕಲಾಗಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ತೊಂದರೆ ಆಗದಂತೆ ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಛತೆ ಆರೋಗ್ಯ ಕಡೆ ಗಮನ ಹರಿಸುವ ಸಲುವಾಗಿ ಏಳೆಂಟು ಕಡೆ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿ ಅಗತ್ಯ ಸಿಬ್ಬಂದಿ ಗಳೊಂದಿಗೆ ವೈದ್ಯರನ್ನು ನೇಮಿಸಲಾಗಿದೆ.

ಕಾರ್ಣಿಕ ನುಡಿ ಆಲಿಸಲು ಬರುವ ಡೆಂಕನ ಮರಡಿ ಯಲ್ಲಿ ಜನಸಾಗರವೇ ಹರಿದು ಬರುವ ಹಿನ್ನೆಲೆ ಯಲ್ಲಿ ದೇವಸ್ಥಾನದ ಕಾರ್ಯನಿ ರ್ವಾಹಕ ಅಧಿಕಾರಿ ಬಿ.ಎಂ. ಕೃಷ್ಣಪ್ಪ , ಪಿ.ಡಿ.ಒ ಉಪಾಧ್ಯಕ್ಷರು, ಸರ್ವ ಸದಸ್ಯರು ಗಳು ಹಾಗೂ ಸಿಬ್ಬಂದಿ ವರ್ಗದವರು ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಹರಿಬಾಬು ಅವರು ಪಿಎಐ ಡಿವೈಎಸ್ಪಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಗಳನ್ನು ಭದ್ರತೆಗೆ ನೇಮಿಸಿ ಯಾವುದೇ ಅಹಿತಕರ ಘಟನೆ ಘಟನೆ ನಡೆದಂತೆ ಕಟ್ಟುನಿ ಟ್ಟಿನ ಕ್ರಮ ಕೈಗೊಂಡಿದ್ದಾರೆ.

ದಿನದ 24 ತಾಸುಗಳ ಕಾಲ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ. ಜನ ಜನಸಂದನೆ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ, ದೇವಸ್ಥಾನದ ಕಾರ್ಯನಿರ್ವಾಹಕ ಬಿ.ಎಂ.ಕೃಷ್ಣಪ್ಪ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *