ದೇವರು ನಿರಾಕಾರ ಎಂಬುದು ಸತ್ಯ. ಹಾಗಾದರೆ ದೇವರ ಸಾಕ್ಷತ್ಕಾರ ಹೇಗೆ ಸಾಧ್ಯ…. ಇಮ್ಮಡಿ ಶ್ರೀ
1 min readಅಗ್ನಿಪರೀಕ್ಷೆ,
ದೈವ ಸಾಕ್ಷತ್ಕಾರ
ದೇವರು ನಿರಾಕಾರ ಎಂಬುದು ಸತ್ಯ. ಹಾಗಾದರೆ ದೇವರ ಸಾಕ್ಷತ್ಕಾರ ಹೇಗೆ ಸಾಧ್ಯ.
ಹಸಿದವರಿಗೆ ಅನ್ನ ನೀಡಿದವರ ರೂಪದಲ್ಲಿ,
ಕಷ್ಟಗಳಿಗೆ ಆಸರೆಯಾದವರ ರೂಪದಲ್ಲಿ,
ಸಂಕಷ್ಟದಲ್ಲಿ ಸಂತೈಸಿದವರ ರೂಪದಲ್ಲಿ
ಅಪಘಾತ ಸಂಧರ್ಭದಲ್ಲಿ ಆತ್ಮಸ್ಥೈರ್ಯ ತುಂಬುವವರ ರೂಪದಲ್ಲಿ
ನಿರಾಕಾರ ಭಗವಂತ ಸಾಕಾರ ಮಾನವ ರೂಪದಲ್ಲಿ ಸಾಕ್ಷತ್ಕಾರ ನೀಡುತ್ತಾನೆ.
ಅಗ್ನಿ ಅವಘಡಕ್ಕೀಡಾದ ವಿಷಯ ತಿಳಿದಾಕ್ಷಣ ಆಸ್ಪತ್ರೆಯ ದಿಕ್ಕನ್ನು ತೋರಿಸಿ ಚಿಕಿತ್ಸೆ ವೆಚ್ಚಭರಿಸಿದ ಮಹಾದಾನಿಗಳಿಗೆ,
ನಿತ್ಯ ಅನ್ನದಾನ ಮಾಡಿದ ಅನ್ನದಾನಿ ಪ್ರಭುಗಳಿಗೆ,
ಅನಾರೋಗ್ಯದಲ್ಲಿ ಆರೈಕೆ ಮಾಡಿದ ಪೂಜ್ಯ ಸ್ನೇಹಿತರಿಗೆ, ವೈದ್ಯಕೀಯ ಚಿಕಿತ್ಸೆಯಲ್ಲಿದ್ದಾಗ ಮಿಡಿದ ಹೃದಯಗಳಿಗೆ, ಕಂಬನಿ ತುಂಬಿದ ಮಾತೃ ಮನಸ್ಸುಗಳಿಗೆ, ಸಂತೈಸಿದ ಸಂತರಿಗೆ, ಪ್ರಾರ್ಥಿಸಿದ ಪ್ರಾಂಜಲ ಮನಸ್ಸುಗಳಿಗೆ,
ರಾಜ್ಯದ ನಾನಾ ಸಂಘಟನೆಯ ಮುಂದಾಳುದಾರರಿಗೆ, ಹೊರ ರಾಜ್ಯ, ವಿದೇಶದಿಂದ ಸುಖಿಸಮಾಜ ಬಯಸುವ ಮಹನೀಯರಿಗೆ,
ಕಾರ್ಯ ಬಾಹುಳ್ಯದಲ್ಲೂ,
ಬಹುದೂರದಿಂದ ಆಸ್ಪತ್ರೆಗೆ ಧಾವಿಸಿ ಧೈರ್ಯತುಂಬಿದ ದಯಾವಂತರಿಗೆ, ರಾಜಕಾರಣಿಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಸಾತ್ವಿಕ ಮನೋಶಕ್ತಿ ತುಂಬಿದ ಜಾಣಜಾಣೆಯರಿಗೆ, ತುಂಬು ಹೃದಯದ ಧನ್ಯವಾದಗಳು.
ನಿಮ್ಮೆಲ್ಲರ ಭಕ್ತಿ -ಪ್ರೀತಿ -ಮಮತೆ -ವಾತ್ಸಲ್ಯದಿಂದ ಆರೋಗ್ಯಪೂರ್ಣಾರಾಗಿ ಸಮಾಜಸೇವೆ ಸಿದ್ದತೆಯಲ್ಲಿ ಇಮ್ಮಡಿಗೊಳ್ಳುತ್ತೇವೆ……ಇಮ್ಮಡಿಗೊಳ್ಳುತ್ತೇವೆ.
ಶರಣಾರ್ಥಿಗಳೊಂದಿಗೆ,
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ