ಮಹಿಳೆ ಅಬಲೆಯಲ್ಲ ಸಬಲೆ: ಪತ್ರಕರ್ತೆ ಕಾವೇರಿ ಮಂಜಮ್ಮನವರು
1 min read
ನಾರಿ ಶಕ್ತಿ ಫಿಟ್ನೆಸ್ ರನ್ ಕಾರ್ಯಕ್ರಮಕ್ಕೆ ಚಾಲನೆ
ಮಹಿಳೆ ಅಬಲೆಯಲ್ಲ ಸಬಲೆ: ಪತ್ರಕರ್ತೆ ಕಾವೇರಿ ಮಂಜಮ್ಮನವರು
ಚಿತ್ರದುರ್ಗ ಹೊಯ್ಸಳ ನ್ಯೂಸ್ :
ಹೊಸದುರ್ಗ:
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜದಲ್ಲಿ ತನ್ನದೇ ಆದಂತಹ ಚಾಪು ಮೂಡಿಸಿಕೊಂಡು ಬರುತ್ತಿದ್ದಾಳೆ ಮಹಿಳೆಯು ಅಬಲೆಯಲ್ಲ ಸಬಲೆ ಎಂದು ಪತ್ರಕರ್ತೆ ಕಾವೇರಿ ಮಂಜಮ್ಮನವರು ತಿಳಿಸಿದರು.
ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ನೆಹರು ಯುವ ಕೇಂದ್ರ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸೌಹರ್ದನ ಸಂಸ್ಥೆ, ಜಿಲ್ಲಾ ಪಂಚಾಯತಿ,ತಾಲೂಕು ಪಂಚಾಯತಿ ಸಹಯೋಗದೊಂದಿಗೆ ಆಯೋಜಿಸಿದ್ದ ಮಹಿಳೆಯರಿಗಾಗಿ ಓಟ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದು ಕಾಲಘಟ್ಟದಲ್ಲಿ ಮಹಿಳೆಯರಿಗೆ ಯಾವುದೇ ತರಹದ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಬಹಳ ಅಮಾನುಷವಾಗಿ ಅವರ ಮೇಲೆ ವರ್ತಿಸುತ್ತಿದ್ದರು ನಮಗೆ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆ ನಮ್ಮ ದೇಶದಲ್ಲಿ ಸತಿ ಪದ್ಧತಿಯನ್ನು ಆಚರಿಸುತ್ತಿದ್ದರು ಅಂದರೆ ಗಂಡ ಸತ್ತ ನಂತರ ಮಹಿಳೆಯನ್ನ ಬದುಕಿರುವಾಗಲೇ ಬೆಂಕಿಗೆ ತಳ್ಳುತ್ತಿದ್ದರು ಇದು ಮಹಿಳೆ ಮೇಲೆ ನಡೆಯುತ್ತಿದ್ದ ಒಂದು ಅಮಾನುಷ ವರ್ತನೆ ಎಂದರು.
ಡಾ. ಬಿಆರ್ ಅಂಬೇಡ್ಕರ್ ಸಂವಿಧಾನದಿಂದ ದೇಶದ ಪ್ರತಿಯೊಬ್ಬ ಮಹಿಳೆಯರಿಗೂ ಪುರುಷನಿಗೆ ಸಿಗುವ ಎಲ್ಲಾ ಸ್ವಾತಂತ್ರ್ಯವನ್ನು ನೀಡಿದ್ದಾರೆ, ಆದರೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಇದು ನಿಲ್ಲಬೇಕು ಎಂದು ಮನವಿ ಮಾಡಿದರು.
ಮಹಿಳೆಯರ ಮೇಲೆ ಒಂದಲ್ಲ ಒಂದು ರೀತಿಯ ಶೋಷಣೆಗಳು ನಡೆಯುತ್ತಲೇ ಇರುತ್ತವೆ ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕಾದರೆ ಅದು ಜ್ಞಾನದಿಂದ ಮಾತ್ರ ಸಾಧ್ಯ ಪ್ರತಿಯೊಬ್ಬ ಹೆಣ್ಣು ಉನ್ನತ ಮಟ್ಟಗಳಲ್ಲಿ ವ್ಯಾಸಂಗ ನಡೆಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಮಡಿಲು ಸಂಸ್ಥೆಯ ನಿರ್ದೇಶಕ ಮಹಂತೇಶ ಎಸ್ ಆರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣ, ಕ್ರೀಡೆ, ಐಟಿಬಿಟಿ ಕಂಪನಿಗಳಲ್ಲಿ ಸೇವೆಯನ್ನು ಸಲ್ಲಿಸುವುದರ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಪ್ರತಿಯೊಬ್ಬ ಪುರುಷನು ಮಹಿಳೆಯರನ್ನು ಗೌರವದಿಂದ ನೋಡಿಕೊಳ್ಳಲೇಬೇಕು ಯಾಕೆಂದರೆ ಅವರ ತಾಯಿ ಕೂಡ ಒಂದು ಹೆಣ್ಣು ಎಂದು ತಿಳಿಸಿದರು.
ಮಹಿಳಾ ದಿನಾಚರಣೆಯ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮಹಿಳೆಯರೇ ಮೊದಲು ಮಹಿಳೆಯರನ್ನ ಗುರುತಿಸುವ ಕಾರ್ಯವಾಗಬೇಕು ಆಗ ಸಮಾಜದಲ್ಲಿ ಎಲ್ಲಾ ಸ್ತ್ರೀಗೆ ತುಂಬಾ ಗೌರವ ಸಿಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿದೆ ಇದು ಸಂಪೂರ್ಣವಾಗಿ ನಿಲ್ಲಬೇಕು ಆಗ ಸಮಾಜದಲ್ಲಿ ಸಮಾನತೆಯನ್ನು ನೋಡಬಹುದು ಎಂದು ಭಾರತಾಂಬೆ ಸಂಜೀವಿನಿ ಗ್ರಾಮ ಪಂಚಾಯತಿ ಒಕ್ಕೂಟ ಪದಾಧಿಕಾರಿ ಮಂಜುಳಾ ತಿಳಿಸಿದರು.
ಮಹಿಳೆಯರಿಗಾಗಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಲಕ್ಷ್ಮೀದೇವಿ, ಸುನೀತಾ, ಕರಿಬಸಮ್ಮ, ಲತಾ, ನಯನ, ಹೇಮಾವತಿ, ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಸಂಘದ ಬ್ಲಾಕ್ ಮ್ಯಾನೇಜರ್ ರಂಗನಾಥ್, ಅಧ್ಯಕ್ಷ ಸುಧಾ, ಖಜಾಂಚಿ ರುದ್ರಮ್ಮ, ಕಾರ್ಯದರ್ಶಿ ಶಶಿಕಲಾ, ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕುಮಾರಸ್ವಾಮಿ, ಸದಸ್ಯರಾದ ಪ್ರದೀಪ್, ಆನಂದ್, ಹಾಗೂ ಗ್ರಾಮಸ್ಥರಾದ ನಾಗರತ್ನಮ್ಮ, ಸುನಿತಾ, ನೇತ್ರಾವತಿ, ಕಾವ್ಯ, ಕರಿಯಮ್ಮ, ಮಂಜುಳಾ, ಪ್ರೇಮ, ವನಜಾಕ್ಷಿ, ತಿಪ್ಪಕ್ಕ, ವೇದಾವತಿ, ಇತರರು ಭಾಗವಹಿಸಿದ್ದರು.