April 29, 2024

Chitradurga hoysala

Kannada news portal

ಕುರಿಗಾಯಿಯ ಮಗ ಮುದ್ದುರಾಜ್ ಗೆ ಪಿ.ಯು.ಸಿ ಯಲ್ಲಿ ಶೇ.93.6 ಫಲಿತಾಂಶ

1 min read

 

ಕುರಿಗಾಯಿಯ ಮಗ ಮುದ್ದುರಾಜ್ ಗೆ ಪಿ.ಯು.ಸಿ ಯಲ್ಲಿ ಶೇ.93.6 ಫಲಿತಾಂಶ

 

ವರದಿ: ಕಾವೇರಿ ಮಂಜಮ್ಮನವರ್,

ಚಿತ್ರದುರ್ಗ ಹೊಯ್ಸಳ:

ಹೊಸದುರ್ಗ:

2023-24 ನೇ ಸಾಲಿನ ಪಿ.ಯು.ಸಿ ಪರೀಕ್ಷೆಯಲ್ಲಿ ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ ಗ್ರಾಮದ ಕುರಿಗಾಯಿ ರಾಜಪ್ಪ ಎಂಬುವರ ಮಗ ಮುದ್ದುರಾಜ್.ಆರ್ 600 ಕ್ಕೆ 562 ಅಂಕಗಳನ್ನ (ಶೇ.93.6) ಪಡೆದಿದ್ದಾನೆ.

ಪಟ್ಟಣದ ಆರ್.ಪಿ. ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಮುದ್ದುರಾಜ್ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜು ಆಡಳಿತ ಮಂಡಳಿ, ಪೋಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಉತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಮತ್ತು ಕುಟುಂಬಕ್ಕೆ ಕೀರ್ತಿ ತಂದ ಮುದ್ದುರಾಜ್ ನನ್ನು ಕಾಲೇಜಿನ ಆಡಳಿತ ಮಂಡಳಿಯವರು ಮತ್ತು ಪೋಷಕರು ಅಭಿನಂದಿಸಿದ್ದಾರೆ.

ಲಕ್ಕಿಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿರುವ ದ್ರಾಕ್ಷಾಯಣಮ್ಮ ಮತ್ತು ರಾಜಪ್ಪ ಎಂಬ ದಂಪತಿಗಳಿಗೆ 3 ಗಂಡು ಮಕ್ಕಳಿದ್ದು, ವಿದ್ಯಾರ್ಥಿ ಮುದ್ದುರಾಜು 2ನೇ ಮಗನಾಗಿದ್ದಾನೆ. ಇವರದು ಬಡ ಕುಟುಂಬವಾಗಿದ್ದು, ಕುರಿ ಕಾಯುವ ಕೆಲಸವೇ ಪ್ರಧಾನವಾಗಿದೆ. ಪೋಷಕರು ಕುರಿ ಕಾಯುವ ಕೆಲಸಮಾಡಿಕೊಂಡೆ ತಮ್ಮ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

About The Author

Leave a Reply

Your email address will not be published. Required fields are marked *