April 29, 2024

Chitradurga hoysala

Kannada news portal

ಖ್ಯಾತ ವೈದ್ಯ ಡಾ. ರಾಮಚಂದ್ರ ನಾಯಕ. ನಿಧನ ಕೆ.ಹೆಚ್.ಸೀತಾರಾಂ ರೆಡ್ಡಿ ನಿವೃತ್ತ ಕೃಷಿ ಆಧಿಕಾರಿ ಮತ್ತು ಮಕ್ಕಳು ಬೆಳಗಟ್ಟ. ಕೆಳಗೋಟೆ ನಿವೃತ್ತ ಅಬಕಾರಿ ಜಿಲ್ಲಾಧಿಕಾರಿ ಜಯಣ್ಣ.ನಿವೃತ್ತ ಕೆಇಬಿ ಅಧಿಕಾರಿ ನಿಂಗಪ್ಪ, ತೀವ್ರ ಸಂತಾಪ

1 min read

ಖ್ಯಾತ ವೈದ್ಯ  ಡಾ. ರಾಮಚಂದ್ರ ನಾಯಕ ನಿಧನ

ಕೆ.ಹೆಚ್.ಸೀತಾರಾಂ ರೆಡ್ಡಿ ನಿವೃತ್ತ ಕೃಷಿ ಆಧಿಕಾರಿ ಮತ್ತು ಮಕ್ಕಳು ಬೆಳಗಟ್ಟ.            ಕೆಳಗೋಟೆ ನಿವೃತ್ತ ಅಬಕಾರಿ ಜಿಲ್ಲಾಧಿಕಾರಿ ಜಯಣ್ಣ.                                           ನಿವೃತ್ತ ಕೆಇಬಿ ಅಧಿಕಾರಿ ನಿಂಗಪ್ಪ,  ಸಂತಾಪ

 

ಖ್ಯಾತ ವೈದ್ಯ ಡಾ. ರಾಮಚಂದ್ರ ನಾಯಕ (80) ಭಾನುವಾರ ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾದರು.

ಮೃತ ರಾಮಚಂದ್ರ ನಾಯಕರಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಹೊರವಲಯದ ನಾಮಕಲ್ ಗ್ಯಾರೇಜ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಸಮೀಪದ ಸ್ವಂತ ಜಮೀನಿನಲ್ಲಿ ಸೋಮವಾರ ಅಂತ್ಯ ಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿರಿಯ ರಾಜಕಾರಣಿಗಳಾದ ಭೀಮಪ್ಪ ನಾಯಕ, ಹೋ.ಚಿ.ಬೋರಯ್ಯ, ಮಸಿಯಪ್ಪ, ಬಿ.ಎಲ್.ಗೌಡ ಮತ್ತು ಇತರ ಪ್ರಮುಖ ರಾಜಕಾರಣಿಗಳ ಇತಿಹಾಸವನ್ನು ತಿಳಿದುಕೊಂಡಿದ್ದರಲ್ಲದೆ ಕೆಲ ಸಜ್ಜನ ರಾಜಕಾರಣಿಗಳ ಒಡನಾಡಿಯಾಗಿದ್ದ ಇವರು, ರಂಗಭೂಮಿ ಕಲಾವಿದರಾಗಿ ಉತ್ತಮ ಸೇವೆ ಸಲ್ಲಿಸಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. 1980 ರ ದಶಕದಲ್ಲಿ ಪ್ರಥಮವಾಗಿ ಖಾಸಗಿ ನರ್ಸಿಂಗ್ ಹೋಂ ಆರಂಭಿಸಿ ಜಿಲ್ಲೆಯ ಜನರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಇಚ್ಚಾ ಶಕ್ತಿ ಯನ್ನು ತೋರಿದ್ದರು.
ಇಷ್ಟೇ ಅಲ್ಲದೇ ಬಣ್ಣ ಹಚ್ಚಿ ಮದಕರಿ ನಾಯಕ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿ ತಾನೊಬ್ಬ ಕಲಾಪ್ರೇಮಿ ಎಂಬುದನ್ನು ಸಾಬೀತು ಪಡಿಸಿದ್ದರು. ಅವರ ಸಾವು ನನಗೆ ಅತೀವ ನೋವುಂಟುಮಾಡಿದೆ ಎಂದು ಅವರ ಸಮಕಾಲೀನರಾದ ಕಣುಮಪ್ಪ ಲೇಔಟ್ ನಿವೃತ್ತ ಕೆಇಬಿ ಅಧಿಕಾರಿ ನಿಂಗಪ್ಪ, ಕೆಳಗೋಟೆ ನಿವೃತ್ತ ಅಬಕಾರಿ ಜಿಲ್ಲಾಧಿಕಾರಿ ಜಯಣ್ಣ. ಕೆ.ಹೆಚ್.ಸೀತಾರಾಂ ರೆಡ್ಡಿ ನಿವೃತ್ತ ಕೃಷಿ ಆಧಿಕಾರಿ ಮತ್ತು ಮಕ್ಕಳು ಬೆಳಗಟ್ಟ ಇವರು ಸೇರಿದಂತೆ ಅಪಾರ ಸ್ನೇಹಿತರು ತೀವ್ರ ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *