May 5, 2024

Chitradurga hoysala

Kannada news portal

ನಾಳೆ ಲಿಂಗೈಕ್ಯ ಮಾರ್ಕಂಡಮುನಿ ಸ್ವಾಮೀಜಿಯರ ಶ್ರದ್ಧಾಂಜಲಿ ಕಾರ್ಯಕ್ರಮದ ಪೂರ್ವಭಾವಿ ಸಭೆ: ಆದಿಜಾಂಬವ ಬೖಹನ್ಮಠದ ಷಡಕ್ಷರಮುನಿ ಸ್ವಾಮೀಜಿ

1 min read



ನಾಳೆ ಲಿಂಗೈಕ್ಯ ಮಾರ್ಕಂಡಮುನಿ ಸ್ವಾಮೀಜಿಯರ ಶ್ರದ್ಧಾಂಜಲಿ ಕಾರ್ಯಕ್ರಮದ ಪೂರ್ವಭಾವಿ ಸಭೆ:

ಆದಿಜಾಂಬವ ಬೖಹನ್ಮಠದ ಷಡಕ್ಷರಮುನಿ ಸ್ವಾಮೀಜಿ

ಹಿರಿಯೂರು:

ಕೋಡಿಹಳ್ಳಿ ಆದಿಜಾಂಬವ ಬೖಹನ್ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರು ಮಾರ್ಕ೦ಡಮುನಿ ಸ್ವಾಮೀಜಿಯವರು ಕಳೆದ ತಿಂಗಳು ನವೆಂಬರ್ 4 ರಂದು ಲಿಂಗೈಕ್ಯರಾದ ಪ್ರಯುಕ್ತ ಶ್ರದ್ದಾಂಜಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಮಾದಿಗ ಜನಾಂಗದ ಹಿರಿಯ ರಾಜಕೀಯ ಮುತ್ಸದ್ದಿಗಳೂ,ಧುರೀಣರುಗಳಾದ ಕೇಂದ್ರದ ಸಾಮಾಜಿಕ ನ್ಯಾಯ,ಸಬಲೀಕರಣ ಸಚಿವರಾದ ಶ್ರೀಎ.ನಾರಾಯಸ್ವಾಮಿಯವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವರಾದ
ಶ್ರೀ ಎಚ್.ಆಂಜನೇಯರವರ ನೇತೖತ್ವದಲ್ಲಿ ಸಭೆ ಆಯೋಜಿಸಲಾಗಿದ್ದು
,
ಆದಿಜಾಂಬವ ಬೖಹನ್ಮಠದ ಬ್ರಹ್ಮಾನಂದಮುನಿ ಸ್ವಾಮೀಜಿ,
ಗುರುಪ್ರಕಾಶ್ ಮುನಿ ಸ್ವಾಮೀಜಿ ಹಾಗೂ
ಶಿವಮುನಿ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆಯ ಮೂಲಕ ಮಾದಿಗ ಸಮುದಾಯದ ಬಂಧುಗಳು,ಆದಿಜಾಂಬವ ಬೖಹನ್ಮಠದ ಅಭಿಮಾನಿಗಳು,ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿನ ಗಣ್ಯರು, ಸಂಘಟಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸಭೆಗೆ ಆಗಮಿಸಿ
ಶ್ರದ್ಧಾಂಜಲಿ ಸಮಾರಂಭದ ರೂಪುರೇಷೆಗಳ ಕುರಿತು ಸೂಕ್ತ ಸಲಹೆ,ಸಹಕಾರ,ಮಾರ್ಗದರ್ಶನ ನೀಡಲು ಕೋರಲಾಗುತ್ತಿದೆಯೆಂದು ಶ್ರೀ.ಷಡಕ್ಷರಮುನಿ ಸ್ವಾಮೀಜಿ ಹೇಳಿದ್ದಾರೆ.

ಲಿಂಗೈಕ್ಯ ಮಾರ್ಕಂಡಮುನಿ ಸ್ವಾಮೀಜಿಯವರು ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸೇವಾ ಹಾಗೂ ಅರ್ಪಣಾ ಮನೋಭಾವದ ಮೂಲಕ ಆದಿಜಾಂಬವ ಬೖಹನ್ಮಠದ ವಿಶಿಷ್ಟ “ಅವಧೂತ ಮತ್ತು ಮುನಿ” ಪರಂಪರೆಯನ್ನು ಕಾಪಾಡಿಕೊಂಡು,
ಬೃಹನ್ಮಠ ಹಾಗೂ ಸಮುದಾಯದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಾ ಬಂದಿದ್ದರು.

ಆದರೆ ಅವರ ಧಿಡೀರ್ ಅಗಲಿಕೆಯಿಂದ ಉಂಟಾಗಿರುವ ಶೂನ್ಯಭಾವ ಸಮುದಾಯವನ್ನ ಈಗ ಕಾಡುತ್ತಿದ್ದು,
ಈ ಸಲುವಾಗಿ ರಾಜ್ಯದ ವಿವಿಧ ಕಡೆಗಳಿಂದ ಮಠದ ಅಭಿಮಾನಿಗಳು,ಹಿರಿಯರು,
ಜನಾಂಗದ ಜನಪ್ರತಿಧಿಗಳಿಂದ ಕೇಳಿಬಂದ ಸಲಹೆ,ಸೂಚನೆ,ಒತ್ತಾಸೆಗಳಿಂದಾಗಿ ಬೖಹನ್ಮಠದ ವತಿಯಿಂದ ರಾಜ್ಯಮಟ್ಟದ
ಬೃಹತ್ ಶ್ರದ್ಧಾಂಜಲಿ ಸಮಾರಂಭವನ್ನು ಆಯೋಜಿಸಲು ನಿರ್ಣಯಿಸಲಾಗಿದೆ.

ಈ ಮೂಲಕ ಅವರ ಸೇವೆ,ಸಾಧನೆಗಳನ್ನು ಸ್ಮರಿಸುವ ಹಾಗೂ ಅವರ ಆಶಯ,ಕನಸುಗಳಿಗೆ ಜೀವ ತುಂಬುವ ಕೆಲಸವನ್ನು ನಾವೆಲ್ಲರೂ ಒಗ್ಗೂಡಿ ಮಾಡಬೇಕಾಗಿದ್ದು,
ಈ ನಿಟ್ಟಿನಲ್ಲಿ ಡಿಸೆಂಬರ್ 18 ರ ಶನಿವಾರ ಬೆಳಗ್ಗೆ 11 ಗಂಟೆಗೆ ಆದಿಜಾಂಬವ ಬೖಹನ್ಮಠದ ಹಿರಿಯೂರು ಶಾಖಾ ಮಠದ ಆವರಣದಲ್ಲಿ ಆಯೋಜಿಸಲಾಗಿರುವ ಪೂರ್ವಭಾವಿ ಸಭೆಗೆ ಸಕಾಲಕ್ಕೆ ಆಗಮಿಸಬೇಕೆಂದು ಶ್ರೀ.ಷಡಕ್ಷರಮುನಿ ಸ್ವಾಮೀಜಿಯವರು ಸಮುದಾಯಕ್ಕೆ ಮನವಿ ಮಾಡಿದ್ದಾರೆ.
———

About The Author

Leave a Reply

Your email address will not be published. Required fields are marked *