May 2, 2024

Chitradurga hoysala

Kannada news portal

ಆತ್ಮನಿರ್ಭರ ರೀತಿ ವಂಚನೆ ಬಜೆಟ್: ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

1 min read




ಆತ್ಮನಿರ್ಭರ ರೀತಿ ವಂಚನೆ ಬಜೆಟ್:ಮಾಜಿ ಸಂಸದ ಬಿ.ಎನ್.ಚಂದ್ರಪ್ಪ.

ಚಿತ್ರದುರ್ಗಹೊಯ್ಸಳ ನ್ಯೂಸ್/ ಚಿತ್ರದುರ್ಗ,

ಚಿತ್ರದುರ್ಗ:

ಕೋವಿಡ್, ಲಾಕ್ ಡೌನ್ ಬಳಿಕ ದೇಶದ ಆರ್ಥಿಕ ಕ್ಷೇತ್ರದ ಚೇತರಿಕೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಆತ್ಮನಿರ್ಭರ ಹೆಸರಲ್ಲಿ ಘೋಷಿಸಿದ 20 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಗಳು ಶೂನ್ಯ ಫಲಿತಾಂಶ ನೀಡಿದವು. ಈ ಯೋಜನೆಗಳು ಯಾರಿಗೆ ತಲುಪಿದವು ಎಂಬುದೇ ನಿಗೂಢ ಆಗಿದೆ.

ಅದೇ ಮಾರ್ಗದಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ತೆರಿಗೆ ಸಂಗ್ರವನ್ನೇ ಹೆಗ್ಗಳಿಕೆ ರೀತಿ ಕೇಂದ್ರ ವರ್ತಿಸಿದೆ. ಇಷ್ಟೋಂದು ಹಣ ತೆರಿಗೆ ರೂಪದಲ್ಲಿ ಪಡೆದ ಕೇಂದ್ರ ಅ ಹಣವನ್ನು ಉಳ್ಳವರ ಅಭಿವೃದ್ಧಿಗೆ ಬಳಸಿದಂತೆ ಇದೆ ಬಜೆಟ್.
ವಜ್ರದ ಬೆಲೆ ಇಳಿಕೆ ಮಾಡಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಎಸ್.ಸಿ, ಎಸ್.ಟಿ. (SC/ST) ವರ್ಗದ ಕಲ್ಯಾಣವನ್ನೇ ಮರೆಯಲಾಗಿದೆ.

ಈ ಹಿಂದೆ ಹೇಳಿದ್ದ ಉದ್ಯೋಗವನ್ನೇ ಸೃಷ್ಟಿ ಮಾಡಲು ವಿಫಲವಾಗಿರುವ ಕೇಂದ್ರ ಸರ್ಕಾರ ಮತ್ತೇ 30 ಲಕ್ಷ ಉದ್ಯೋಗವನ್ನು ಆಂತರಿಕವಾಗಿ ಸೃಷ್ಟಿಸಲಾಗುವುದು ಎಂದು ಹೇಳುವ ಮೂಲಕ ಮತ್ತೊಮ್ಮೆ ಯುವ ಪೀಳಿಗೆಗೆ ವಂಚಿಸಲು ಮುಂದಾಗಿದೆ 25ಸಂಸದರನ್ನು ಗೆಲ್ಲಿಸಿದ ಕರ್ನಾಟಕ ಜನತೆಗೆ ನೋವು ಉಣ್ಣಿಸಿದ ಬಜೆಟ್ ಆಗಿದೆ. ಚಿತ್ರದುರ್ಗ ಜಿಲ್ಲೆಯ ಅನ್ನದಾತರ ಕನಸಾದ ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯಯೋಜನೆಯನ್ನಾಗಿ ಘೋಷಿಸಲಾಗುವುದು ಎಂಬ ತನ್ನ ಭರವಸೆಯನ್ನೇ ಬಿಜೆಪಿ ಈಡೇರಿಸಿಲ್ಲ. ಇನ್ನೂ ದಾವಣಗೆರೆ ಯಿಂದ ತುಮಕೂರು ನೇರ ರೈಲು ಮಾರ್ಗ ಯೋಜನೆ ಕುರಿತು ಪ್ರಸ್ತಾಪವೇ ಇಲ್ಲ.

ಚಿತ್ರದುರ್ಗ ಜಿಲ್ಲೆ ಹಾಗೂ ಜಗಳೂರನ್ನು 371 ಜೆ ವ್ಯಾಪ್ತಿಗೆ ಸೇರಿಸಬೇಕೆಂಬ ಈ ಪ್ರದೇಶದ ಜನರ ಕೂಗನ್ನು ಕೇಳಿಸಿಕೊಳ್ಳದ ಕಿವುಡು ಬಜೆಟ್ ಆಗಿದೆ.ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಯೋಜನೆ ರೂಪಿಸುವ ಪ್ರಯತ್ನವನ್ನೇ ಮಾಡಿಲ್ಲ.

ಸಾರ್ವಜನಿಕ ಸಂಸ್ಥೆಗಳನ್ನು ಸಂಪೂರ್ಣವಾಗಿ ಖಾಸಗಿಯವರ ಕೈಗೆ ಒಪ್ಪಿಸುವ ಸ್ಪಷ್ಟ ಸಂದೇಶವನ್ನು ಬಜೆಟ್ ನಲ್ಲಿ ನೀಡಲಾಗಿದೆ. ಇದೊಂದು ಜನವಿರೋಧಿ ಬಜೆಟ್ ಆಗಿದ್ದು, ಹಸಿದವರ ಮೂಗಿಗೆ ತುಪ್ಪ ಸವರುವ ಬಜೆಟ್ ಆಗಿದೆ ಎಂದು ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *