April 30, 2024

Chitradurga hoysala

Kannada news portal

ಜಾತಿ ಜಾತಿಗಳ ಮಧ್ಯೆ ಧರ್ಮ ಧರ್ಮಗಳ ಮಧ್ಯೆ ಸಂಘರ್ಷಗಳು ಉಂಟಾಗುತ್ತಿವೆ: ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ. ಡಾ:ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ ಈ ದೇಶದ ಶಕ್ತಿ: ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ.

1 min read


ಜಾತಿ ಜಾತಿಗಳ ಮಧ್ಯೆ ಧರ್ಮ ಧರ್ಮಗಳ ಮಧ್ಯೆ ಸಂಘರ್ಷಗಳು ಉಂಟಾಗುತ್ತಿವೆ:

ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ

ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ ಈ ದೇಶದ ಶಕ್ತಿ:
ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ.

ವಕೀಲರ ಸಂಘದಿಂದ ಅದ್ದೂರಿಯಾಗಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ

ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲಾ ವಕೀಲರ ಭವನದಲ್ಲಿ ಸೋಮವಾರ ಅದ್ದೂರಿಯಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರೇಮಾವತಿ ಮನಗೂಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶೋಷಿತರ ಧ್ವನಿಯಾದ ಬಾಬಾ ಸಾಹೇಬರು ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ ಅವರು ಒಬ್ಬ ವ್ಯಕ್ತಿಯಲ್ಲ ಈ ದೇಶದ ಶಕ್ತಿ ನಮ್ಮ ದೇಶದ ಭವಿಷ್ಯಕ್ಕಾಗಿ ಈ ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಹೊಣೆ ವಕೀಲರು ಸಮಾಜದ ಧ್ವನಿಯಾಗಿ ಸಂವಿಧಾನದ ಆಶೋತ್ತರಗಳನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ಕರ್ನಾಟಕ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳಾದ ಎಚ್. ಬಿಲ್ಲಪ್ಪ ನವರು ಮಾತನಾಡಿ ಬಾಬಾ ಸಾಹೇಬ್ ಅವರ ಆಶಯ ನಮ್ಮ ಸಂವಿಧಾನದ ಆಶಯ ಎರಡು ಕೂಡ ಕಲ್ಯಾಣ ರಾಜ್ಯದ ಕನಸಾಗಿದೆ ಬಾಬಾ ಸಾಹೇಬರು ಅವರೊಬ್ಬ ಪ್ರಪಂಚದ ಆರ್ಥಿಕ ತಜ್ಞರು ಭಾರತವು ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರೆ ಕೊಲಂಬಿಯಾ ವಿಶ್ವವಿದ್ಯಾನಿಲಯವು ವಿಶ್ವ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರಿಗೆ ಈ ದೇಶದಲ್ಲಿ ಅವರೊಬ್ಬರೇ ಸರಿಸಮಾನರು ಜ್ಞಾನ ಪಾಂಡಿತ್ಯ ವಿದ್ಯಾರ್ಜನೆಯಲ್ಲಿ ಅವರಿಗೆ ಸರಿಸಮನಾದ ವ್ಯಕ್ತಿ ಮತ್ತೊಬ್ಬರಿಲ್ಲ ಅವರ ಬಾಲ್ಯದ ದಿನಗಳು ಬಹಳ ಕಷ್ಟದಿಂದ ಕೂಡಿದ್ದವು ಅವರು ಪುಸ್ತಕ ಪ್ರೇಮಿಯಾಗಿದ್ದರು ಪ್ರಸ್ತುತ ಸಂದರ್ಭದಲ್ಲಿ ಜನಸಾಮಾನ್ಯರು ಸತ್ಯ ಹೇಳುವುದಕ್ಕೆ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ ಪ್ರತಿಕ್ಷಣವು ಭಯದ ನೆರಳಲ್ಲಿ ಬುದುಕುವಂತಹಾ ಸ್ಥಿತಿ ನಿರ್ಮಾಣವಾಗಿದೆ ನೆರೆ ರಾಷ್ಟ್ರಗಳ ಜೊತೆ ನಮ್ಮ ಸಂಬಂಧ ಸರಿ ಇರುವುದಿಲ್ಲ ಯಾವ ಕ್ಷಣದಲ್ಲಿ ದೇಶ ದೇಶಗಳ ಮಧ್ಯೆ ಯುದ್ಧ ಸಂಭವಿಸುತ್ತದೆ ಎಂದು ಭಯದ ನೆರಳಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದರು.

ಸಹಜೀವನ ಸಹ ಚಿಂತನೆ ಸಹಭೋಜನ ಬಾಬಾಸಾಹೇಬರ ಕಲ್ಪನೆಯಾಗಿತ್ತು ಅವರು ಧ್ವನಿಯಿಲ್ಲದವರ ಪರ ದ್ವನಿಯಾಗಿದ್ದರು ಶಕ್ತಿ ಇಲ್ಲದವರ ಪರ ಶಕ್ತಿಯಾಗಿದ್ದರು ಅಂಬೇಡ್ಕರ್ ಈ ದೇಶದ ಪ್ರಪ್ರಥಮ ಸ್ವಾತಂತ್ರಾನಂತರದ ಕಾನೂನು ಮಂತ್ರಿಯಾಗಿದ್ದರು ಎಂದು ತಿಳಿಸಿದರು. ಅವರ ನಡೆನುಡಿಯನ್ನು ನಾವು ನೀವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಬಾಬಾಸಾಹೇಬರು ನೀಡಿದ ಈ ಬೃಹತ್ ಸಂವಿಧಾನವನ್ನು ಈ ದೇಶದಲ್ಲಿ ಉಳಿಸಿ ಬೆಳೆಸುವ ಮತ್ತು ರಕ್ಷಿಸುವ ಹೊಣೆ ನಮ್ಮ- ನಿಮ್ಮೆಲ್ಲರ ದಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಸಿ.ಶಿವು ಯಾದವ ರವರು ಸಮ ಸಮಾಜದ ಕಲ್ಪನೆ ಬಾಬಾಸಾಹೇಬ್ ಅಂಬೇಡ್ಕರ್ ಅದಾಗಿತ್ತು ಈ ದೇಶದಲ್ಲಿ ಬಹು ಸಂಖ್ಯಾತರಿಗೆ ಸಂವಿಧಾನದ ಅರಿವೇ ಇರುವುದಿಲ್ಲ ಸಂವಿಧಾನ ಮತ್ತು ಅದರ ಆಶೋತ್ತರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಅವಶ್ಯಕತೆ ಇದೆ ಸ್ವಾತಂತ್ರ್ಯ ಬಂದು ಸುಮಾರು ಏಳು ದಶಕಗಳು ಗತಿಸಿದರೂ ಅಸ್ಪಶ್ಯತೆ ನಿವಾರಣೆಯಾಗಿಲ್ಲ ಜಾತಿ ಜಾತಿಗಳ ಮಧ್ಯೆ ಧರ್ಮ ಧರ್ಮಗಳ ಮಧ್ಯೆ ಸಂಘರ್ಷಗಳು ಉಂಟಾಗುತ್ತಿವೆ ದೇಶದಲ್ಲಿ ಕೆಲವು ದುಷ್ಟಶಕ್ತಿಗಳು ಸಂವಿಧಾನದ ವಿರುದ್ಧ ಪಿತೂರಿ ನಡೆಸುತ್ತಿವೆ ಸಂವಿಧಾನದ ಬೇರುಗಳು ಅಲುಗಾಡುತ್ತಿವೆ ಸಂವಿಧಾನದ ದೇಶಗಳನ್ನು ಎತ್ತಿಹಿಡಿಯುವುದು ವಕೀಲರ ಕರ್ತವ್ಯವಾಗಿದೆ ಸಂವಿಧಾನದ ಪುಸ್ತಕಗಳನ್ನು ಹಳ್ಳಿಹಳ್ಳಿಗೂ ಎಲ್ಲಾ ಜನಸಾಮಾನ್ಯರಿಗೂ ಕೊಡಿಸಿ ಓದಿಸಿ ತಿಳಿಸುವ ಜವಾಬ್ದಾರಿ ವಿದ್ಯಾವಂತರ ಮೇಲಿದೆ ಎಂದರು.
ಶ್ರೇಷ್ಠ ಸಂವಿಧಾನವನ್ನು ರಕ್ಷಣೆ ಮಾಡುವ ಹೊಣೆ ನ್ಯಾಯಾಂಗ ಹೊರಬೇಕಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷರಾದ ಶಿವು ಯಾದವ್ ರವರ ನೇತೃತ್ವದಲ್ಲಿ ವಿಶ್ರಾಂತ ನ್ಯಾಯಮೂರ್ತಿಗಳಾದ ಹೆಚ್ ಬಿಲ್ಲಪ್ಪ ನವರ ಮುಂದಾಳತ್ವದಲ್ಲಿ ಡೊಳ್ಳು ಮತ್ತು ತಮಟೆ ಗಳಿಂದ ಜಿಲ್ಲಾ ವಕೀಲರ ಭವನದಿಂದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಯವರಿಗೆ ಮೆರವಣಿಗೆ ನಡೆಸಲಾಯಿತು ನಂತರ ನ್ಯಾಯಮೂರ್ತಿ ಬಿಲ್ಲಪ್ಪ ನವರು ವಕೀಲರ ಸಂಘದ ಪದಾಧಿಕಾರಿಗಳು ಎಲ್ಲರೂ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಲಾರ್ಪಣೆ ಮಾಡಿದರು ಸಭೆಯಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ವಕೀಲರ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *