April 27, 2024

Chitradurga hoysala

Kannada news portal

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿ.ಪಲ್ಲವಿ ನಿರ್ಧಾರ..!!.

<

ಅಲೆಮಾರಿ ಮಹಿಳಾ ಅಭ್ಯರ್ಥಿಗೆ ತಪ್ಪಿದ ಕಾಂಗ್ರೆಸ್ ಟಿಕೆಟ್‌:

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಕೆ

ಶಿವಮೊಗ್ಗ:

ಇಲ್ಲಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ನಾಯಕಿ ಪಲ್ಲವಿ ಜಿ. ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಶ್ರೀನಿವಾಸ್ ಕರಿಯಣ್ಣ ಅವರಿಗೆ ಈಗಾಗಲೇ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಲಾಢ್ಯ ಜಾತಿಗಳಿಗೆ ಮಣಿದಿದ್ದು, ಅಲೆಮಾರಿ ಸಮುದಾಯದವನ್ನು ನಿರ್ಲಕ್ಷಿಸಿದೆ. ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳಿಗೆ 36 ಮೀಸಲು ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಹಣಬಲ, ಜನಬಲವುಳ್ಳ 4 ಪ್ರಬಲ ಸಮುದಾಯಗಳಿಗೆ ಮಣಿಹಾಕಿ ಅಲೆಮಾರಿ ಹಾಗೂ ಇತರೆ ಸಮುದಾಯಗಳಿಗೆ ಆದ್ಯತೆ ನೀಡದೇ ವಂಚಿಸಿರುವುದು ಖಂಡನೀಯ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘ” ಕೊರಮ- ಕೊರಚ-ಕೊರವ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶಿವಾನಂದ ಎಂ ಭಜಂತ್ರಿ ಟೀಕಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು 36 ಮೀಸಲು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ಒಂದು ಟಿಕೆಟನ್ನು ನೀಡದೇ ಕೊರಮ-ಕೊರಚ ಸಮಾಜವನ್ನು ನಿರ್ಲಕ್ಷಿಸಿವೆ . ಕಾಂಗ್ರೆಸ್ ನ ಎರಡನೇ ಪಟ್ಟಿಯಲ್ಲಿ ಜಿ. ಪಲ್ಲವಿ ಹೆಸರು ಅಂತಿಮವಾಗುವ ಹಂತದಲ್ಲಿ ಇತ್ತು, ಆದರೆ ಟಿಕೆಟ್ ಪ್ರಕಟವಾದಾಗ ಆಘಾತವಾಯಿತು. ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಪಾಠ ಕಲಿಸುತ್ತೇವೆ ಎಂದಿದ್ದಾರೆ.

About The Author

Leave a Reply

Your email address will not be published. Required fields are marked *