ಸಂಚಾರಿ ನಿಯಮ ಪಾಲಿಸಿ ಆಟೋ ಚಲಾಯಿಸಿ: ಇನ್ಸ್ಪೆಕ್ಟರ್, ತಿಮ್ಮಣ್ಣ ಸೂಚನೆ.
1 min readಸಂಚಾರಿ ನಿಯಮ ಪಾಲಿಸಿ ಆಟೋ ಚಲಾಯಿಸಿ: ಇನ್ಸ್ಪೆಕ್ಟರ್ ತಿಮ್ಮಣ್ಣ ಸೂಚನೆ.
ಚಿತ್ರದುರ್ಗಹೊಯ್ಸಳ ಸುದ್ದಿ/
ಹೊಸದುರ್ಗ:
ಪಟ್ಟಣದಲ್ಲಿ ಆಟೋ ಚಲಾಯಿಸುವ ಚಾಲಕರು ತಮ್ಮ ವಾಹನಕ್ಕೆ ಸಂಬಂಧಿಸಿದಂತಹ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಡಿಎಲ್, ಸಮವಸ್ತ್ರವಿಲ್ಲದೇ ಆಟೋ ಚಲಾಯಿಸುವಂತಿಲ್ಲ. ಸಂಚಾರಿ ನಿಯಮ ಪಾಲಿಸದೆ, ಆಟೋ ಚಲಾಯಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ ಆಟೋ ಚಾಲಕರಿಗೆ ಸೂಚನೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಟೋ ಚಾಲಕರ ಸಭೆ ಕರೆದು ಮಾತನಾಡಿದ ಅವರು, ಕೆಲವು ಚಾಲಕರು ಆಟೋ ಮುಂಭಾಗ ಹಿಂಭಾಗ ಕೊಡು ಮತ್ತು ಜನರಿಗೆ ಅಸಭ್ಯವಾಗುವ ರೀತಿ ಡಿಸೈನ್ ಸ್ಟಿಕರ್ಗಳನ್ನು ಹಾಕಿಕೊಂಡಿದ್ದೀರಿ ಇದು ಸರಿಯಲ್ಲ. ಆಟೋ ಮುಂಭಾಗ ಮತ್ತು ಹಿಂಭಾಗ ಈ ರೀತಿಯಲ್ಲ ಹಾಕುವಂತಿಲ್ಲ. ಪಟ್ಟಣದಲ್ಲಿ ನಿಗದಿತ ಜಾಗಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳಬೇಕು. ಎಲ್ಲಿ ಬೇಕೊ ಅಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿಕೊಂಡು ಪ್ರಯಾಣಿಕರಿಗೆ ತೊಂದರೆ ಕೊಡುವಂತಿಲ್ಲ ಎಂದು ತಿಳಿಸಿದರು.
ಪಟ್ಟಣದಲ್ಲಿ ರಾತ್ರಿ ಸಮಯದಲ್ಲಿ ಆಟೋ ಓಡಿಸುವ ಚಾಲಕರು ನಮ್ಮ ಬಳಿ ನಿಮ್ಮ ಹೆಸರುಗಳನ್ನು ನೀಡಿ, ಅಂತವರಿಗೆ ರಾತ್ರಿ ಸಮಯದಲ್ಲಿ ಆಟೋ ಚಲಾಯಿಸಲು ಅವಕಾಶ ಕಲ್ಪಿಸಿಕೊಡುತ್ತೇವೆ. ಪಟ್ಟಣ ಮತ್ತು ತಾಲೂಕಿನ ಹಲವೆಡೆ ಯಾವುದೇ ಅಹಿತಕರ ಘಟನೆಗಳು ಕಂಡು ಬಂದರೆ, ತಕ್ಷಣವೇ ನಮಗೆ ಮಾಹಿತಿ ನೀಡಿ. ಪೊಲೀಸ್ ಠಾಣೆಗೆ ಬಂದು ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ. ಪೊಲೀಸ್ ಇಲಾಖೆ ಇರುವುದು ಸಾರ್ವಜನಿಕರ ಸಮಸ್ಯೆ ಬಗೆಹರಿಸಲು. ನಿಮ್ಮ ಆಟೋ ಚಾಲಕರ ಸಹಕಾರ ನಮ್ಮ ಇಲಾಖೆಗೆ ಬಹಳ ಅಗತ್ಯವಾಗಿದ್ದು, ತಾಲೂಕು ಶಾಂತಿಯುತವಾಗಿರಲು ನಮಗೆ ಸಹಕರಿಸಿ ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಬು ಮಾತನಾಡಿ, ನಮ್ಮ ಕೆಲವು ಆಟೋ ಚಾಲಕರ ಬಳಿ ತಮ್ಮ ವಾಹನಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳಿಲ್ಲ. 20 ದಿನದ ಒಳಗಾಗಿ ಎಲ್ಲಾ ದಾಖಲೆಗಳನ್ನು ಒದಗಿಸಿಕೊಳ್ಳುತ್ತೇವೆ. ಹಿಂದಿನಿಂದಲೂ ನಮ್ಮ ಆಟೋ ಚಾಲಕರು ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಮುಂದೆಯೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಮತ್ತು ನೂರಾರು ಜನ ಆಟೋ ಚಾಲಕರು ಇದ್ದರು.