May 17, 2024

Chitradurga hoysala

Kannada news portal

ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿದ ವ್ಯಕ್ತಿ ಇಂದು ಪ್ರಾಚಾರ್ಯರು ಆಗಿ ಅದೇ ಕಾಲೇಜು ನಿಂದ ನಿವೃತಿ

1 min read

ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿದ ವ್ಯಕ್ತಿ ಇಂದು ಪ್ರಾಚಾರ್ಯರು ಆಗಿ ಅದೇ ಕಾಲೇಜು ನಿಂದ ನಿವೃತಿ.


ವರದಿ:ಕಾವೇರಿ ಗೂಳಿಹಟ್ಟಿ.

ಚಿತ್ರದುರ್ಗ ಹೊಯ್ಸಳ ಸುದ್ದಿ/

ಹೊಸದುರ್ಗ:

ಮಾನವ ತನ್ನ ಯಾಂತ್ರಿಕ ಬದುಕಿನಲ್ಲಿ ಸರ್ಕಾರಿ ಸೇವೆಯ ಜೊತೆಗೆ ತಮ್ಮ ಜೀವನದಲ್ಲಿ ಹೆಂಡತಿ ಮಕ್ಕಳ ಜೊತೆಗೆ ಸರ್ಕಾರಿ ಸೇವೆಗಳನ್ನ ವಿಶ್ವಾಸಾರ್ಹನಿಯವಾಗಿ ನಿರ್ವಹಿಸಿದಾಗ.ಸರ್ಕಾರಿ ಸೇವೆ ಜೊತೆಗೆ ಸಂಬಂಧಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗ್ತದೆ ಎಂದು ಪ್ರಾಚಾರ್ಯ ಜಯಪ್ಪ ಅಭಿಮತ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಿವೃತ್ತಿ, ಪ್ರಾಂಶುಪಾಲರಿಗೆ ಪ್ರಾಧ್ಯಾಪಕರು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಏರ್ಪಡಿಸಿದ್ದ ಕೃತಜ್ಞತಾ ಸಮಾರಾಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು

ಪ್ರತಿಯೊಬ್ಬ ಸರ್ಕಾರಿ ನೌಕರನ ಜೀವನದಲ್ಲಿ ನಿವೃತ್ತಿ ಅನಿವಾರ್ಯ ಆಗಿದ್ದು ನನ್ನ ಜೀವನದ ಪ್ರಗತಿಗಾಗಿ ಕಾರಣಿಕರ್ತರಾದ ತಂದೆ ತಾಯಿಗಳು,ಗುರುಗಳು, ಮತ್ತು ಸ್ನೇಹಿತರಿಗೆ ಕೃತಜ್ಞನಾಗಿರುತ್ತೇನೆ.ನಾನು ಹೀಗೆ ಇರಬೇಕೆಂದು ನನ್ನ ಕನಸಿತ್ತು.ನನ್ನ ಕನಸಿಗೆ ತಂದೆ ತಾಯಿಗಳು ಸಹೋದರಿಯರು ಬಹಳಷ್ಟು ಶ್ರಮಿಸಿದ್ದಾರೆ.ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ನನಗೆ ಇದೇ ಕಾಲೇಜಿಗೆ ಬರುವಾಗ ಹಾಕಿಕೊಳ್ಳಲು ಚಪ್ಪಲಿಯೂ ಇರಲಿಲ್ಲ. ನಾನು ಇದೇ ಕಾಲೇಜಿಗೆ ಪ್ರವೇಶ ಪಡೆಯಲು ಅಂದಿನ ಕಾಲೇಜಿನ ಅಧಿಕ್ಷಕರಾಗಿದ್ದ ರಾಮಸ್ವಾಮಿ ಅವರು ಸಹಕರಿಸಿದ್ದು ಅವ್ರನ್ನ ಯಾವತ್ತು ಮರೆಯುವುದುದಿಲ್ಲ ಎಂದು ತಿಳಿಸಿದರು.

ಯಾವ ಕಾಲೇಜಿ ವಿದ್ಯಾರ್ಥಿಯೋ ನಾನು ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ, ಮುಂದೆ ಕಾಯಂ ಶಿಕ್ಷಕನಾಗಿ ಉಪನ್ಯಾಸಕನಾಗಿ ಇಂದು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ಸಂಗತಿ ಎಂದು ವ್ಯಕ್ತಪಡಿಸಿದರು. ಈ ವೇಳೆ ಕಾಲೇಜಿನ ಸಹೋದ್ಯೋಗಿಗಳು, ಹಳೆಯ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *