ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಷ್ಠಾವಂತ ಅಧಿಕಾರಿಗಳನ್ನು ನೇಮಕ ಮಾಡಿ: ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಹುಲ್ಲೂರು ಗ್ರಾಮಸ್ಥರು.
1 min readಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಷ್ಠಾವಂತ ಅಧಿಕಾರಿಗಳನ್ನು ನೇಮಕ ಮಾಡಿ: ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಹುಲ್ಲೂರು ಗ್ರಾಮಸ್ಥರು
CHITRADURGAHOYSALA NEWS:
ಚಿತ್ರದುರ್ಗ:ಭೀಮಸಮುದ್ರ:
ಭೀಮಸಮುದ್ರ ಸಮೀಪದ ಹುಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಮಸ್ಯೆ ಕಾಡುತ್ತಿದೆ ಸುಮಾರು ಒಂದು ವರ್ಷಗಳಿಂದ ಪಿಡಿಒ ಯಾರಿದ್ದಾರೆ ಎಂಬುದೇ ಜನಗಳಿಗೆ ಗೊತ್ತಿಲ್ಲದಂತಾಗಿದೆ ಅಲ್ಲಿನ ಸಿಬ್ಬಂದಿಗಳನ್ನು ಕೇಳಿದರೆ ಡೆಪ್ಯುಟೇಷನ್ ಹಾಕಿದ್ದಾರೆ ಆದ ಕಾರಣ ಈ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ ಈ ಗ್ರಾಮ ಪಂಚಾಯಿತಿಗೆ ಸುಮಾರು 8 ಹಳ್ಳಿಗಳು ಬರುತ್ತದೆ ಈ ಗ್ರಾಮ ಪಂಚಾಯಿತಿಯಲ್ಲಿ 23 ಜನ ಗ್ರಾಮ ಪಂಚಾಯಿತಿ ಸದಸ್ಯರುಗಳಿದ್ದಾರೆ ಹುಲ್ಲೂರು ನಾಯಕ್ ಹಟ್ಟಿ ಹುಲ್ಲೂರು ಲಂಬಾಣಿಹಟ್ಟಿ ಸಿಂಗಾಪುರ ಬೆನಕನಹಳ್ಳಿ ಕುರುಬರಹಳ್ಳಿ ಈ ಹಳ್ಳಿಗಳ ಈ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಬರುತ್ತದೆ ಈ ಹಳ್ಳಿಗಳ ಸುಮಾರು ಗ್ರಾಮ ಪಂಚಾಯಿತಿಗೆ ಐದರಿಂದ 10 ಕಿಲೋ ಮೀಟರ್ ದೂರವಿದ್ದು ಇಲ್ಲಿಗೆ ಬಂದಂತಹ ಜನರಿಗೆ ಬೆಳಗಿನ ಸಂಜೆಯವರೆಗೆ ಇಲ್ಲಿಯೇ ಕಾಯುವ ಪರಿಸ್ಥಿತಿ ಬಂದಿದೆ
ವೃದ್ಧರು ಹಾಗೂ ಅಂಗವಿಕಲರು ಬಂದು ಕಾಯುತ್ತಾರೆ ಈ ಸ್ವತ್ತು ಸುತ್ತಿನ ಸಮಸ್ಯೆ ತುಂಬಾ ಇದೆ ಹಾಗೂ ಶೌಚಾಲಯ ಹೊಸ ಮನೆ ನಿರ್ಮಾಣ ಹಳ್ಳಿಗಳಿಗೆ ಚರಂಡಿ ವ್ಯವಸ್ಥೆ ಹಾಗೆಯೇ ಮತ್ತಿತರ ಕೆಲಸಗಳನ್ನು ಮಾಡಿಕೊಡಲು ಇಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ
H K ವಿಜಯ್ ಕುಮಾರ್ ಹುಲ್ಲೂರು ಗ್ರಾಮಸ್ಥರು ಮಾತನಾಡಿ
ಸುಮಾರು ಎಂಟು ತಿಂಗಳಿಂದ ಪಿಡಿಒ ಹಾಗೂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ 2021 22 ಸಾಲಿನಲ್ಲಿ ನನ್ನ ಮನೆಯ ಈ ಸ್ವತ್ತನ್ನು ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದ್ದೆ ಇದುವರೆಗೂ ಆ ಕೆಲಸ ನಡೆದಿಲ್ಲ ಚಿತ್ರದುರ್ಗದಲ್ಲಿ ಸಿಎಸ್ಆರ್ ಅಧಿಕಾರಿಯನ್ನು ಭೇಟಿ ಮಾಡಿ ಅವರಿಗೂ ಕೂಡ ಮನವಿ ಮಾಡಿದ್ದು ಗ್ರಾಮದಲ್ಲಿ ಶೌಚಾಲಯ N R E G ಸರ್ಕಾರದಿಂದ ಬರುವ ಮನೆ ಕೆಲಸಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ
ರಾಮಚಂದ್ರ ರೆಡ್ಡಿ ಹುಲ್ಲೂರು ಗ್ರಾಮಸ್ಥರು ಮಾತನಾಡಿ ಸುಮಾರು 2021 ರಲ್ಲಿ ಈ ಸ್ವತ್ತು ಮಾಡಲು ಕೊಟ್ಟಿದ್ದೆವು ಆರು ತಿಂಗಳಾದ ಮೇಲೆ ಗ್ರಾಮ ಪಂಚಾಯಿತಿಯ ಅಂಜಿನಪ್ಪ ಎಂಬ ವ್ಯಕ್ತಿಗೆ 5,000 .00 ಹಣ ಪಡೆದು ಈ ಸ್ವತ್ತನ್ನು ಪಡೆದುಕೊಂಡಿದ್ದೇವೆ ಅಧಿಕಾರಿಗಳನ್ನು ಕೇಳಿದರೆ ಬೆಂಗಳೂರು ಕಳಿಸಿ ಇದನ್ನು ಸರಿಪಡಿಸಬೇಕೆಂದು ತಿಳಿಸಿದರು 2021 22ರಲ್ಲಿ ಮನೆಯ ಗ್ರಾಂಡ್ ಬಂದಿತ್ತು G P R S ಮಾಡಿ ಅಲ್ಲಿಗೆ ನಿಲ್ಲಿಸಿದರು ಕೇಳಿದರೆ ಸರಿಯಾದ ಉತ್ತರ ನೀಡುತ್ತಿಲ್ಲ ದಯಮಾಡಿ ಶಾಸಕರು ಇದನ್ನು ಗಮನಹರಿಸಿ ಅಧಿಕಾರಿಗಳನ್ನು ನೇಮಿಸಬೇಕೆಂದು ತಿಳಿಸಿದರು
ಕಲ್ಲೇಶ್ ರೈತರು ಹಾಗೂ ಗ್ರಾಮಸ್ಥರು ಮಾತನಾಡಿ ನಮ್ಮ ದೇಶದ ಪ್ರಧಾನಿಗಳು ಸ್ವಚ್ಛತೆ ಹಾಗೂ ಶೌಚಾಲಯ ನಿರ್ಮಾಣದಲ್ಲಿ ಒತ್ತು ನೀಡಿದ್ದಾರೆ ಆದರೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಇಲ್ಲಿ ಸರಿಯಾದ ಕೆಲಸ ಮಾಡದೆ ಬಿಡುಗಡೆಯಾದ ಶೌಚಾಲಯ ನಿರ್ಮಾಣಕ್ಕೆ ಮಾಡುತ್ತಿಲ್ಲ ಹಾಗೆಯೇ ನನಗೆ ಬಂದ ಒಂದು ಮಾಹಿತಿ ಪ್ರಕಾರ ಸುಮಾರು ಒಂದು ತಿಂಗಳ ಹಿಂದೆ ನೇತ್ರಾವತಿ ಎಂಬ ಮಹಿಳೆ ನಾಲ್ಕು ತಿಂಗಳ ಹಸುಗುಸ್ ಅನ್ನು ಬಿಟ್ಟು ಗ್ರಾಮ ಪಂಚಾಯಿತಿಗೆ ಬಂದು ಈ ಸ್ವತ್ತು ಮಾಡಿಕೊಡಿ ಎಂದು ಅಧಿಕಾರಿಗಳನ್ನು ಕೇಳಿದ್ದರು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಅಲ್ಲಿಯೇ ಕುಳಿತರು ಯಾವ ಕೆಲಸ ಮಾಡಿಕೊಡಲಿಲ್ಲ ದಯಮಾಡಿ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದನ್ನು P D O ನೇಮಿಸಿ ಬಗೆಹರಿಸಬೇಕೆಂದು ತಿಳಿಸಿದರು