ಶಾಸಕ ಬಿ.ಜಿ.ಗೋವಿಂದಪ್ಪ ಜನ ಸಂಪರ್ಕ ಕೇಂದ್ರವನ್ನ ಉದ್ಘಾಟಿಸಿದರು
1 min read
ಶಾಸಕ ಬಿ.ಜಿ.ಗೋವಿಂದಪ್ಪ ಜನ ಸಂಪರ್ಕ ಕೇಂದ್ರವನ್ನ ಉದ್ಘಾಟಿಸಿದರು
ಚಿತ್ರದುರ್ಗ ಹೊಯ್ಸಳ ಸುದ್ದಿ:
ಹೊಸದುರ್ಗ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಪರ-ವಿರೋಧ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ ಆದರೆ ಮಹಿಳೆಯರಿಗೆ ಗ್ಯಾರಂಟಿಯಾಗಿ ಯೋಜನೆ ಲಾಭ ತಲುಪಲಿದ್ದು ಗೊಂದಲ ಬೇಡ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಶುಷ್ಕ ಹೊಸದುರ್ಗ ಪಟ್ಟಣದ ಪುರಸಭೆ ಆವರಣದ ಸಭಾಂಗಣದಲ್ಲಿ ನೂತನ ಶಾಸಕರು ಜನಸಂಪರ್ಕ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಗಿದೆ.ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದು ಮಹಿಳೆಯರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ನಾವು ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ.
ಗೃಹ ಲಕ್ಷ್ಮಿ ಯೋಜನೆಯ ನೊಂದಣಿ ಕಾರ್ಯ ನಡೆಯುತ್ತಿದೆ. ಆಗಸ್ಟ್ 18 ರಂದು ಬೆಳಗಾವಿಯಲ್ಲಿ ಮಾನ್ಯ ಮಹಿಳಾ ಮತ್ತು ಮಕ್ಕಳ ಸಮಾಜ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಚಾಲನೆ ಕೊಡಲಿದ್ದಾರೆ.ಅಲ್ಲದೆ ಈ ಯೋಜನೆಯ ನೋಂದಣಿಗೆ ಕೊನೆ ದಿನಾಂಕ ನಿಗದಿ ಮಾಡಿಲ್ಲ ಎಲ್ಲ ಯೋಜನೆಗಳು ಪ್ರತಿ ಮನೆ ಮನೆಗೂ ತಲುಪಿಸಲು ಸರ್ಕಾರ ಪ್ರಜಾಪ್ರತಿನಿಧಿ ನೇಮಿಸಲಾಗುತ್ತಿದೆ.ಆ ಮೂಲಕ ಪ್ರತಿ ಮನೆಗೆ ಕಾಂಗ್ರೆಸ್ ಪಕ್ಷದ ಭರವಸೆಯಂತೆ ಗ್ಯಾರಂಟಿ ತಲುಪಿಸಲಾಗುತ್ತದೆ.
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಜೊತೆ ಪ್ರತಿ ವ್ಯಕ್ತಿಗೆ ತಲಾ 170 ರೂಪಾಯಿ ಹಣ ಖಾತೆಗೆ ನೀಡಲಾಗುವುದು.ಶಕ್ತಿ ಯೋಜನೆಯಡಿ ಶೈಕ್ಷಣಿಕ ಪ್ರವಾಸ,ವೃತ್ತಿ ಕೌಶಲ್ಯವೃದ್ಧಿಯಂತಹ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಮಹಿಳೆಯರು ಎಲ್ಲ ರೀತಿಯಿಂದಲೂ ಸಬಲರಾಗಬೇಕು.ಈ ಯೋಜನೆಯಿಂದ ಮಹಿಳಾ ಸಮುದಾಯದ ಗ್ಯಾರಂಟಿ ಅನುಷ್ಠಾನದಿಂದ ಸರಕಾರಕ್ಕೆ ವಾರ್ಷಿಕ 60 ಸಾವಿರ ಕೋಟಿ ಹೊರೆಯಾದರು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಬಗರ್ ಹುಕುಂ ಸಮಿತಿ ಶೀಘ್ರದಲ್ಲೇ ಬರಲಿದೆ ಎಂದು ರೈತರಿಗೆ ತಿಳಿಸಿದ್ದು ತಾಲೂಕಿನ ಎಲ್ಲ ಮತಬಾಂಧವರ ಆಶೀರ್ವಾದಿಂದ ಶಾಸಕರಾಗಿದ್ದು ಜನ ಸಂಪರ್ಕ ಕಚೇರಿಯಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂದರು.
ಈ ವೇಳೆ ಪ್ರೇಮ ಗೋವಿಂದಪ್ಪ, ಕೆಪಿಸಿಸಿ ಸದಸ್ಯ ಅಲ್ತಾಫ್ ಪಾಷಾ, ಎಂ.ಪಿ. ಶಂಕರಪ್ಪ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೇ ದೀಪಿಕಾ ಸತೀಶ್. ಲೋಕೇಶ್ವರಪ್ಪ,ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್,ಕಾಂಗ್ರೆಸ್ ಮುಖಂಡ ಎಂ ಹೆಚ್ ಕೃಷ್ಣಮೂರ್ತಿ, ಅಗ್ರೋ ಶಿವಣ್ಣ, , ಪುರಸಭೆ ಸದಸ್ಯ ಜಾಫರ್, ಶಂಕರಪ್ಪ, ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.