May 20, 2024

Chitradurga hoysala

Kannada news portal

ಹಾಸ್ಟೆಲ್ ಗಳ ಬಳಿ ಬರುತ್ತಿರುವ ಕರಡಿಗಳನ್ನ ಸೆರೆ ಹಿಡಿಯುವಂತೆ ಆಗ್ರಸಿ ಪ್ರತಿಭಟನೆ

1 min read



ಹಾಸ್ಟೆಲ್ ಗಳ ಬಳಿ ಬರುತ್ತಿರುವ ಕರಡಿಗಳನ್ನ ಸೆರೆ ಹಿಡಿಯುವಂತೆ ಆಗ್ರಸಿ ಪ್ರತಿಭಟನೆ

ವರದಿ:ಕಾವೇರಿಮಂಜಮ್ಮನವರ್,

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಸದುರ್ಗ:

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗವಿರುವ ಎಸ್ಸಿ ಎಸ್ಟಿ ಮತ್ತು ಬಿಸಿಎಂ ಹಾಸ್ಟೆಲ್ ಗಳ ಸಮೀಪ ಹಗಲು ರಾತ್ರಿ ಎನ್ನದೇ, ಕರಡಿಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಶಾಲಾ ಕಾಲೇಜುಗಳಿಗೆ ತೆರಳಲು ಹಾಗೂ ಹಾಸ್ಟೆಲ್ ನಿಂದ ಹೊರಬರಲು ಆತಂಕ ಎದುರಾಗಿದೆ. ಕೂಡಲೇ ಕರಡಿಗಳನ್ನು ಸೆರೆ ಹಿಡಿಯಿರಿ ಎಂದು ಇಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿಗೆ ಶುಕ್ರವಾರ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ತೆರಳಿ, ಪ್ರತಿಭಟಿಸುವ ಮೂಲಕ ಮನವಿ ಪತ್ರ ನೀಡಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ತಾಲೂಕು ಉಪಾಧ್ಯಕ್ಷ ಲೋಹಿತ್ ಕುಮಾರ್ ಮಾತನಾಡಿ, ಕಳೆದ ಒಂದು ವಾರಗಳಿಂದ ಹಾಸ್ಟೆಲ್ ಸಮೀಪ ಕರಡಿಗಳು ಬರುತ್ತಿದ್ದು, ಕರಡಿಗಳನ್ನು ನೋಡಿದ ವಿದ್ಯಾರ್ಥಿಗಳು ಹಾಸ್ಟೆಲಿನಿಂದ ಹೊರಬರಲು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು 15 ದಿನಗಳ ಹಿಂದೆ ಬೆಂಗಳೂರಿನ ವಿಶೇಷ ತಂಡದ ಸಹಾಯದಿಂದ ಎರಡು ಕರಡಿಗಳನ್ನು ಹೇಗೆ ಬಲೆ ಮತ್ತು ಬೋನ್ ಅಳವಡಿಸಿ ಸೆರೆ ಹಿಡಿದಿದ್ದೀರಿ. ಅದರಂತೆಯೇ ಹಾಸ್ಟೆಲ್ ಸಮೀಪದ ಬೆಟ್ಟದಲ್ಲಿರುವ ಕರಡಿಗಳನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡಿ ಎಂದರು.

ಒಂದೇ ಹತ್ತಿರ 4 ಹಾಸ್ಟೆಲ್ ಗಳಿದ್ದು, ಇಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕರಡಿಗಳಿಂದ ಯಾವುದೇ ಅನಾಹುತ ಆಗುವುದಕ್ಕಿಂತ ಮುಂಚಿತವಾಗಿ ಜಾಗೃತಿ ವಹಿಸಿ, ಕರಡಿಗಳನ್ನು ಸೆರೆ ಹಿಡಿಯಿರಿ. ಹೀಗೆಯೇ ನಿರ್ಲಕ್ಷ ವಹಿಸಿ ಕರಡಿಗಳಿಂದ ಯಾವುದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೂ, ಅದಕ್ಕೆ ಅರಣ್ಯ ಇಲಾಖೆಯವರೇ ಕಾರಣರಾಗುತ್ತೀರಿ. ನಿರ್ಲಕ್ಷ್ಯ ಮಾಡದೆ ಕರಡಿಗಳನ್ನು ಸೆರೆಹಿಡಿದು, ವಿದ್ಯಾರ್ಥಿಗಳು ನೆಮ್ಮದಿಯಾಗಿರುವಂತಹ ವಾತಾವರಣ ನಿರ್ಮಾಣ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಶ್ರೀ ಜಗದ್ಗುರು ಮುರುಘಾ ರಾಜೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

About The Author

Leave a Reply

Your email address will not be published. Required fields are marked *