May 19, 2024

Chitradurga hoysala

Kannada news portal

ಗಣೇಶೋತ್ಸವ ಅಂಗವಾಗಿ ನಡೆದ ಸಂಗೀತೋತ್ಸವದಲ್ಲಿ ಮಾದ್ಯಮ ಬಳಗದಿಂದ ವೇದ ಚಿತ್ರದ ಗಾಯಕ ಮೋಹನ್ ಗೆ ಅಭಿನಂದನೆ

1 min read


ಜಾನಪದ‌ಕಲೆಗಳು ಇತ್ತೀಚಿನ ಆಧುನಿಕ ಭರಾಟೆಯಲ್ಲಿ ನಶಿಸಿಹೋಗ್ತಿವೆ :ಗಾಯಕ ಮೋಹನ್

ಗಣೇಶೋತ್ಸವ ಅಂಗವಾಗಿ ನಡೆದ ಸಂಗೀತೋತ್ಸವದಲ್ಲಿ ಮಾದ್ಯಮ ಬಳಗದಿಂದ ವೇದ ಚಿತ್ರದ ಗಾಯಕ ಮೋಹನ್ ಗೆ ಅಭಿನಂದನೆ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ಗಣೇಶೋತ್ಸವ ಅಂಗವಾಗಿ ನಡೆದ ಸಂಗೀತೋತ್ಸವದಲ್ಲಿ ಜಾನಪದ‌ಗಾರುಡಿಗ,ವೇದ ಚಿತ್ರದ ಜುಂಜಪ್ಪ ಗೀತೆ ಗಾಯಕ ಮೋಹನ್ ಅವರನ್ನು ಚಿತ್ರದುರ್ಗದ ಮಾದ್ಯಮ‌ ಗೆಳೆಯರು ಅಭಿನಂದಿಸಿದರು.

ಈ ಸಂಗೀತೋತ್ಸವದಲ್ಲಿ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮೋಹನ್‌ಅವರು,ಜಾನಪದ‌ಕಲೆಗಳು ಇತ್ತೀಚಿನ ಆಧುನಿಕ ಭರಾಟೆಯಲ್ಲಿ ನಶಿಸಿಹೋಗ್ತಿವೆ.ನಮ್ಮ ಪೂರ್ವಜರ ಜೀವನ ಶೈಲಿ ಅಡಕವಾಗಿರುವ ಜನಪದಗೀತೆಗಳನ್ನು ಉಳಿಸುವ ಕಾರ್ಯ ಆಗಬೇಕಿದೆ.ಆನಿಟ್ಟಿನಲ್ಲಿ
ನಮ್ಮೆಲ್ಲರ‌ಚಿಂತನೆ ಆಗಬೇಕು.ಸದಾ ನಮ್ಮ‌ನಡುವೇ ನಡೆಯುವ ಮದುವೆ,ಶುಭಸಮಾರಂಭಗಳಲ್ಲೇ‌ಸಾಕಷ್ಟು ಸಂಪ್ರದಾಯಗಳು ತೆರೆಮರೆಗೆ ಸರಿದಿವೆ.ಆಗಿನ‌ ಸೋಬಾನೆ ಪದಗಳು,ಗಿಗಿಪದಗಳು ಹಾಗು ಮನೆಯಲ್ಲೇ‌ನಮ್ಮ‌ಮನಗಳಲ್ಲಿ ಹುಟ್ಟಿದ ಪದಗಳು ಮರಿಚಿಕೆಯಾಗಿವೆ.

ಸಾಮಾನ್ಯವಾಗಿ ರೈತರು ಬಿತ್ತುವಾಗ,ಮಹಿಳೆಯರು ಬೀಸುವ ಕಲ್ಲು ಬೀಸುವಾಗ ಹಾಗುಮನೆಯಲ್ಲಿ ತಾಯಂದಿರು ಮಕ್ಕಳಿಗೆ ಊಟ ಮಾಡಿಸುವಾಗ ಮತ್ತು ತವರಿಂದ‌ ಮಗಳನ್ನು ಗಂಡನ ಮನೆಗೆ ಬೀಳ್ಕೊಡುವಾಗ ನಮ್ಮ‌ಹಿರಿಯುರು ಹಾಡುತಿದ್ದ ಜನಪದ ಹೇಳುವವರು ಇಲ್ಲದಂತಾಗಿದೆ.ಆದ್ದರಿಂದ ಅಂತಹ ಅಪರೂಪದ‌ಗೀತೆಗಳನ್ನು ಒಂದೆಡೆ ಧಾಖಲಿಸಿ,ಉಳಿಸುವ ಕೆಲಸವಾಗಬೇಕಿದೆ ಎಂದರು.

ಇನ್ನು ಜಾನಪದ‌ಕಲೆಯನ್ನು ಉಳಿಸಕೇಬೇಕೆಂದು ಪಣತೊಟ್ಟಿದ್ದು,ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್. (ರಿ ) ಎಂಬ ಟ್ರಸ್ಟ್ ಅಡಿಯಲ್ಲಿ ವಿದ್ಯಾರ್ಥಿಗಳಲ್ಲಿ ಜನಪದ ಅಭ್ಯಾಸ ಆರಂಭಿಸಿದ್ದು,ರಾಜ್ಯಾದ್ಯಂತ ಇದರ ಬಗ್ಗೆ ಜಾಗೃತಿ ಮೂಡಿಸಲಾಗ್ತಿದೆ.ಹೀಗಾಗಿ ಜನಪದ ಕ್ಷೇತ್ರದಲ್ಲಿ ಆಸಕ್ತ ವಿದ್ಯಾರ್ಥಿಗಳು ನಮ್ಮ ಪ್ರತಿಷ್ಟಾನದ ಮೂಲಕ‌ಜಾನಪದ‌ಕಲೆ ಉಳುವಿಗಾಗಿ ಸಾಥ್ ನೀಡಬೇಕೆಂದರು ಹಾಗೆಯೇ ಮಾತಿನೊಂದಿಗೆ ಹಾಡನ್ನು ಹಾಡ್ತಾ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಮೋಹನ್ ಪತ್ರಕರ್ತರ ಕುಟುಂಬಗಳನ್ನು ರಂಜಿಸಿದರು.ಈ ಕಾರ್ಯಕ್ರಮದಲ್ಲಿ ಪತ್ರಕರ್ತರು,ಪೊಲೀಸ್ ಅಧಿಕಾರಿಗಳು,ವಿವಿಧ ಇಲಾಖೆಗಳು‌ಅಧಿಕಾರಿಗಳು ಹಾಜರಿದ್ದು ಕಾರ್ಯಕ್ರಮದಲ್ಲಿ ಮೋಹನ ಅವರ ಸುಶ್ರಾವ್ಯ ಕಂಠದಿಂದ ಹೊರಹೊಮ್ಮಿದ ಪದಗಳನ್ನು ಆಹ್ಲಾದಿಸಿ ಆನಂದಿಸಿದರು.

ಈ ವೇಳೆ‌ಮೋಹನ್ ಹಾಡಿದ ಸೋಬಾನೆ ಪದ ಜನಮನ ಸೆಳೆಯಿತು.ನೆರೆದಿದ್ದ ಮಹಿಳೆಯರು ಭಾವುಕರಾದರು.ಜುಂಜಪ್ಪ ಹಾಡಿಗೆ‌ಪುಟಾಣಿಗಳು‌ ಹೆಜ್ಜೆಹಾಕಿದರು.

ಸಂಗೀತೋತ್ಸವದ ಅಥಿತಿಗಳಾಗಿ ಆಗಮಿಸಿದ್ದ ಚಿತ್ರದುರ್ಗದ ಎಡಿಸಿ‌ ಕುಮಾರಸ್ವಾಮಿ‌ ಸಂಗೀತೋತ್ಸವಕ್ಕೆ‌ಚಾಲನೆ ನೀಡಿದರು.ಕೆಲ‌ಕಾಲ‌ ವೇದಿಕೆ ಮುಂಬಾಗದಲ್ಲಿ ಪತ್ರಕರ್ತರೊಂದಿಗೆ‌ ಕುಳಿತು ಸಂಗೀತೋತ್ವವನ್ನು ಸವಿದರು.ಅವರೊಂದಿಗೆ ಬಸವೇಶ್ವರ ಆಸ್ಪತ್ರೆಯ ವ್ಯವಸ್ಥಾಪಕರಾದ‌ ಸತ್ಯನಾರಾಯಣ್ ವೇದಿಕೆಯಲ್ಲಿದ್ದು,ಮೋಹನ್ ಬಳಿಕ‌ ಸತ್ಯನಾರಾಯಣ್ ಅವರ ಕಂಠದಿಂದಲು ಹಲವು ಮಧುರ‌ಕನ್ನಡ ಗೀತೆಗಳು‌ ಹೊರಹೊಮ್ಮಿದವು.

ಈ ವೇಳೆ ಪತ್ರಕರ್ತರಾದ ಕಿರಣ್,ರವಿಕುಮಾರ್,ಛಾಯಗ್ರಾಹಕ‌ ದ್ವರಕಾನಾಥ್, ಎಎಸ್ ಐ ಪ್ರಾಣೇಶ್,ಕರೋಕೆ‌‌ಕನ್ನಡ ಗೀತೆಗಳನ್ನು ಹಾಡಿ ತಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ‌ಅವರ ಕಲೆಯನ್ನು ಪ್ರದರ್ಶಿಸಿದರು.ಈ ಕಾರ್ಯಕ್ರಮವನ್ನು ಕಲಾವಿದ ಮೊರಾರ್ಜಿ‌
ನಿರೂಪಿಸಿದರು.ಪತ್ರಕರ್ತರಾದ ಸಿದ್ದರಾಜು ಸ್ವಾಗತಿಸಿದರು.ಗೋವಿಂದಪ್ಪ‌ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ಪತ್ರಕರ್ತರಾದ‌ಬಸವರಾಜ್ ಮುದನೂರು ನೇತೃತ್ವ ವಹಿಸಿದ್ದರು.ಛಾಯಗ್ರಾಹಕ ಚಂದ್ರಣ್ಣ ವಂದಿಸಿದರು.

About The Author

Leave a Reply

Your email address will not be published. Required fields are marked *