
ಗಂಗಸಮುದ್ರಕ್ಕೆ ಆಂಜನೇಯ ಇಂದು ಭೇಟಿಹೂಳ
ಸಂಪಾದಕರು: ಸಿ.ಎನ್.ಕುಮಾರ್,
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹೊಳಲ್ಕೆರೆ:
ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟು ಹೋಗಿದ್ದ ಹೊಳಲ್ಕೆರೆ ತಾಲ್ಲೂಕನ್ನು ಯೋಜನೆ ವ್ಯಾಪ್ತಿಗೆ ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭ ಸೇರಿಸಿದ್ದು ಬಹುದೊಡ್ಡ ಸಾಧನೆ.
ಈ ಮೂಲಕ ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾಮಗಾರಿ ಆರಂಭಿಸಲಾಗಿತ್ತು.
ಆದರೆ, ವಿವಿಧ ಕಾರಣಕ್ಕೆ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಅದರಲ್ಲೂ ಕಾಲುವೆ, ಪೈಪ್ ಲೈನ್ ಸೇರಿ ವಿವಿಧ ಕಾಮಗಾರಿಗೆ ಭೂಮಿ ನೀಡುವಲ್ಲಿ ಕೆಲ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು ಅಡ್ಡಿಯಾಗಿದೆ.
ಈ ಸಮಸ್ಯೆ ಪರಿಹರಿಸಿ ತಾಲ್ಲೂಕಿಗೆ ಭದ್ರೆ ನೀರು ಹರಿಸಿ, ರೈತರ ಬದುಕು ಹಸನುಗೊಳಿಸುವ ಸಂಕಲ್ಪ ತೊಟ್ಟಿರುವ ಹೆಚ್.ಆಂಜನೇಯ ಅವರು ಸೆಪ್ಟೆಂಬರ್ 6ರಂದು ಶನಿವಾರ ಮಧ್ಯಾಹ್ನ 1 ಗಂಟೆಗೆ ಗಂಗಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಬಳಿಕ ರೈತರೊಂದಿಗೆ ಚರ್ಚಿಸಲಿದ್ದಾರೆ.
ಆದ್ದರಿಂದ ಗಂಗಸಮುದ್ರ ಸುತ್ತಮುತ್ತಲಿನ ರೈತರು, ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಗಮಿಸುವಂತೆ ಕೋರಿಕೆ.
ಎಚ್.ಟಿ.ಹನುಮಂತಪ್ಪ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹೊಳಲ್ಕೆರೆ