April 28, 2024

Chitradurga hoysala

Kannada news portal

ಸ್ನೇಹದ ಮಹತ್ವ ಕುಸಿಯುತ್ತಿದೆಯಾ?

1 min read

ಎಲ್ಲಾ ಓದುಗರಿಗೆ ಸ್ನೇಹಿತರ ದಿನದ ಶುಭಾಷಯಗಳು

ವಿಶೇಷ ವರದಿ: ಎಲ್ಲಾರೂ ಇಂದು ಸ್ನೇಹಿತರ ದಿನಾಚರಣೆಯನ್ನು ಎಲ್ಲಾ ಮೊಬೈಲ್ ಸ್ಟೇಟಸ್, ಫೇಸ್‍ಬುಕ್, ಟ್ವಿಟರ್ ಗಳಲ್ಲಿ ಫೋಟೋ  ಹಾಕಿಕೊಂಡು ಮಿಂಚುತ್ತಿದ್ದಾರೆ. ಸ್ನೇಹ ಎರಡು ಅಕ್ಷರದ ಪದ ಏಕೆ ದಿನ ಕಳೆದಂತೆ ಮಹತ್ವ  ಕಳೆದುಕೊಳ್ಳತ್ತಿದೆ ಎಂಬ ಭಾವ ಎಲ್ಲಾರಲ್ಲಿ ಮೂಡುತ್ತಿದೆ.  

ಹೌದ ಎಲ್ಲಾರೂ ಸಹ ಸಂಬಂಧಗಳನ್ನು ಮರೆತು ವರ್ತಿಸುತ್ತಿದ್ದಾರೆ. ಆಸೆ , ಆಕಾಂಕ್ಷೆಗಳಿಗೆ ಬಲಿಯಾಗುತ್ತಿದ್ದಾರೆ. ಚಿಕ್ಕ ಪುಟ್ಟ ಭಿನ್ನಾಭಿಪ್ರಾಯದಿಂದ ಸ್ನೇಹವನ್ನು ಬಲಿ ಕೊಡುತ್ತಿದ್ದಾರೆ. ಇನ್ನು ಕೇಲವರು ತಮ್ಮ ಬೆಳೆಕಾಳು ಬೇಯಿಸಿಕೊಳ್ಳಲು ಸ್ನೇಹ ಮಾಡುತ್ತಾರೆ. ಆದರು ಸಹ ಒಂದಿಷ್ಟು ವರ್ಗದ ಜನರು ಮಾತ್ರ  ಕಲ್ಮಶವಿಲ್ಲದ ಸ್ನೇಹದಿಂದ ಬದುಕಿನ ಬಂಡಿ ಎಳೆಯುತ್ತಿದ್ದಾರೆ. 

ಸ್ನೇಹವು ಎಂದು ಸಹ ವ್ಯವಹಾರಕ್ಕೆ ತಿರುಗಬಾರದು. ಸ್ನೇಹ ಬೆಳೆದಂತೆ ಸಲುಗೆ ಹೆಚ್ಚಾದಂತೆ ಎಲ್ಲಾವನ್ನು ಅವರ ಬಳಿ ಹೇಳಿಕೊಳ್ಳುತ್ತಾ ಸಾಗುತ್ತಿರುತ್ತೇನೆ.ಆದರೆ ಯಾವುದೋ ಒಬ್ಬ ವ್ಯಕ್ತಿಯ ಜೊತೆಯಲ್ಲಿ ನಂಬಿಕೆಯಿಂದ ಎಲ್ಲಾ ಹೇಳಿರುತ್ತಾರೆ. ಆದರೆ ಯಾವುದೇ ಒಂದು ವಿಚಾರಕ್ಕೆ ವೈಮನಸ್ಸುಗಳು ಬಂದಾಗ ಎಲ್ಲಾರ ಬಳಿ ತಮ್ಮ ಸ್ನೇಹಿತನ ಎಲ್ಲಾ ಗುಟ್ಟುಗಳನ್ನು ಹೊರಹಾಕಿ ತಾನು ಒಳ್ಳೆಯ ಸಂಸ್ಕಾರವಂತ ಎಂಬ ಕೀಳು  ಮನಸ್ಥಿತಿಗೆ ಸ್ನೇಹಿತರು ಬಂದಿದ್ದಾರೆ. 

ಸಹಾಯ ಮಾಡದಿದ್ದರು ಪರವಾಗಿಲ್ಲ.ಯಾರು ಅವರ ಜೊತೆ ನಿಜವಾದ ಸ್ನೇಹ ಮಾಡಿರುತ್ತಾರೆ ಅವರು ಯಾವಗಲೂ ದೂರದಿಂದಲೇ ನನ್ನ  ಸ್ನೇಹಿತರು ಸಂತೋಷವಾಗಿರಲಿ ಎಂದು   ಬಯಸುತ್ತಾರೆ ಅವರು   ನಿಜವಾದ ಸ್ನೇಹ ಎಂದು ಹೇಳಬಹುದು. 

  ಅಸೂಯೆ ಪೂರ್ಣವಿರಾಮ ಹಾಕಿ: ಎಲ್ಲಾರೂ ಸಹ ತಮ್ಮ ಸ್ನೇಹಿತನು ಸಮಾಜದಲ್ಲಿ ತುಂಬಾ ಮೇಲ್ಮಟ್ಟಕ್ಕೆ ಬೆಳೆಯುತ್ತಿದ್ದಾರೆ ಅಥವಾ ಗೌರವ ಸಂಪಾದನೆ ಮಾಡುತ್ತಿದ್ದಾರ ಎಂದರೆ ನೀವು ಸಂತೋಷದಲ್ಲಿ ಮೊದಲಿಗರಾಗಿರಿ ಗೆಳೆಯರೆ.ಏಕೆ ಗೊತ್ತ ತಮ್ಮ ಜೊತೆಯಲ್ಲಿ ಕಷ್ಟ ಸುಖಗಳನ್ನು ಹಂಚಿಕೊಂಡು ಸಾಧನೆ ಮಾಡಿರುತ್ತಾನೆ ಕಾರಣಾಂತರಗಳಿಂದ ವೈಮನಸ್ಸು ಬಂದಿರಬಹುದು ಆದರೆ ನಿಜವಾದ ಸ್ನೇಹಿತರಾದ ನಿಮಗೆ ಅವನ ಬೆಳವಣಿಗೆ ಬಗ್ಗೆ ತಿಳಿದಿದ್ದು ನೀವು ಹೆಮ್ಮೆ ಪಡಬೇಕು.ಅದನ್ನು ಬಿಟ್ಟು ಅವರನ್ನು ರಕ್ಷಿಸುವ ನೀವೆ ಅವರ ಮೇಲಿನ ಸಿಟ್ಟಿನಿಂದ ತನ್ನ ಕುಚುಕು ಸ್ನೇಹಿತನನ್ನು ತುಳಿಯುವ ಕೆಲಸ ದ್ವೇಷಿಸುವ ಕೆಲಸ ಸದ್ದಿಲ್ಲದೆ ನಡೆಯುವುದಕ್ಕೆ ದಯಮಾಡಿ ನೀವು ಬುನಾದಿ ಹಾಕಬೇಡಿ. ಅದಕ್ಕೆ ತಮ್ಮ  ಸ್ನೇಹಿತರು ಮಾತನಾಡಿಸಲಿ , ಮಾತನಾಡಿಸದೆ ಇರಲಿ ಆದರೆ  ನಿಜವಾದ ಗೆಳೆಯರು ಎಂದರೆ  ಸ್ವಾರ್ಥ, ದ್ವೇಷ, ಅಸೂಯೆ, ಕೀಳು ಭಾವನೆ, ತೊಂದರೆ, ಪರರಿಗೆ ನಿಮ್ಮ‌ ಸ್ನೇಹಿತನ ದೌರ್ಬಲ್ಯಗಳನ್ನು ಹೊರ ಹಾಕದೆ ದೂರದಿಂದ ಹರಸಿ ಹಾರೈಸುತ್ತ ಸಂತೋಷದಿಂದ ಸಾಗುವ ಮನಸ್ಸಿನ ಗೆಳೆಯರೆ ನಂಬಿಕಸ್ಥ  ಗೆಳೆಯ ಗೆಳತಿಯರು. 

About The Author

Leave a Reply

Your email address will not be published. Required fields are marked *