October 16, 2024

Chitradurga hoysala

Kannada news portal

 

ಮುಖ್ಯಮಂತ್ರಿಗಳ ಕಾರ್ಯಕ್ರಮದ ಇವತ್ತಿನ ಹೈಲೈಟ್ಸ್…

ಸತತ8ಗಂಟೆಗಳ ಕಾಲ ಶಾಸಕರು ಮತ್ತು ಸಚಿವರಜತೆ ನಿರಂತರ ಚರ್ಚೆ

ಚಿತ್ರದುರ್ಗ ಹೊಯ್ಸಳ ನ್ಯೂಸ್:

ಬೆಂಗಳೂರು:

*ಆರು ಜಿಲ್ಲೆಗಳ 50 ಶಾಸಕರ ಬೇಡಿಕೆ ಮತ್ತು ಸಲಹೆಗಳನ್ನು ಅತ್ಯಂತ ಸಹನೆಯಿಂದ ಕೇಳಿ ಭರವಸೆ ನೀಡಿದರು*

*ಮಧ್ಯಾಹ್ನ ಊಟದ ಬಿಡುವೂ ಇಲ್ಲದಂತೆ, ಸಭೆ ನಡೆಸುತ್ತಲೇ ಊಟ ಮಾಡಿದ ಸಿಎಂ*

*ರಾಯಚೂರು, ವಿಜಯಪುರ,ಕೊಪ್ಪಳ, ಹಾವೇರಿ, ಬೆಳಗಾವಿ, ಕಲಬುರಗಿ ಜಿಲ್ಲೆಗಳ ಶಾಸಕರು ಮತ್ತು ಜಿಲ್ಲಾ ಸಚಿವರುಗಳು ಹಾಗೂ ಕಾರ್ಯದರ್ಶಿಗಳ ಜತೆ ಸರಣಿ ಸಭೆಗಳು*

*ಕ್ಷೇತ್ರದ ಕೆಲಸಗಳು, ಅಗತ್ಯ ಅನುದಾನ, ಪರಸ್ಪರ ಸಮನ್ವಯತೆ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ*

*ಆಗಸ್ಟ್ 20 ರಂದು ರಾಜ್ಯದಲ್ಲಿ ಉದ್ಘಾಟನೆಗೊಳ್ಳಲಿರುವ ದೇಶದ ಚರಿತ್ರೆಯಲ್ಲೇ ಅತ್ಯಂತ ದೊಡ್ಡ ಜನೋಪಯೋಗಿ ಯೋಜನೆ “ಗೃಹ ಲಕ್ಷ್ಮಿ” ಕಾರ್ಯಕ್ರಮದ ಯಶಸ್ವಿಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಜತೆ ವಿಡಿಯೊ ಸಂವಾದ ನಡೆಸಿದರು*

*ಬೆಳಗ್ಗೆ 10 ಗಂಟೆಗೆ ತಮ್ಮ ನಿವಾಸದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ಮೂಲಕ ದಿನಚರಿ ಆರಂಭಿಸಿದ ಮುಖ್ಯಮಂತ್ರಿಗಳು ರಾತ್ರಿ 9 ಗಂಟೆವರೆಗೂ (11 ಗಂಟೆಗಳ ಕಾಲ) ಸರಣಿ ಸಭೆಗಳನ್ನು ಬಿಡುವಿಲ್ಲದಂತೆ ನಡೆಸಿದರು*

About The Author

Leave a Reply

Your email address will not be published. Required fields are marked *