May 8, 2024

Chitradurga hoysala

Kannada news portal

ಸಚಿವರು ಬಂದರು ಶಾಸಕರು ಬರಲಿಲ್ಲ..?

1 min read

ಸಚಿವರು ಬಂದರು ಶಾಸಕರು ಬರಲಿಲ್ಲ..?

CHITRADURGAHOYSSLA NEWS/

ಸಂಪಾದಕ: ಸಿಎನ್ಕೆ,

ಚಿತ್ರದುರ್ಗ :
ನಗರ ವ್ಯಾಪ್ತಿಯ ಕವಾಡಿಗರಟ್ಟಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸುಮಾರು 98 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ರಾಜ್ಯವೇ ತಿರುಗಿ ನೋಡುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಹಾಗು ಹರಳಯ್ಯ ಸ್ವಾಮಿಜಿ ಅವರು ಆಸ್ಪತ್ರೆಯಲ್ಲಿನ ಅಸ್ವಸ್ಥರನ್ನು, ಹಾಗೂ ಘಟನೆ ನಡೆದ ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಪರಿಹಾರ ನೀಡುವ ಬರವಸೆ ನೀಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಈ ಸುದ್ದಿ ಹರಿದಾಡುತ್ತಿದ್ದರು ಸಹ ಕ್ಷೇತ್ರದ ಶಾಸಕರು ಮಾತ್ರ ಗ್ರಾಮಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡದಿರುವುದು ಗ್ರಾಮಸ್ಥರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಹಾಗೂ ಸಂಸದರಾದ ಎ.ನಾರಾಯಣಸ್ವಾಮಿ ಯವರು ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಡಿ ಹೆಚ್ ಓ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದಿದ್ದು,ಸೂಕ್ತ ನೆರವು ನೀಡಲು ಹೇಳಿದ್ದಾರೆ ಎನ್ನಲಾಗಿದೆ.ಆದರೆ ಖುದ್ದಾಗಿ ಹಾಜರಾಗಿ ವ್ಯವಸ್ಥೆ ಕಲ್ಪಿಸಲಿ ಎಂಬುದು ಸಾರ್ವಜನಿಕರ ಅನಿಸಿಕೆ. ಹಾಗೇಯೆ ಈ ತಾಲೂಕಿನ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಗ್ರಾಮಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಎರಡು ದಿನಗಳಿಂದ ಸೂತಕದ ವಾತಾವರಣ ನಿರ್ಮಾಣಗೊಂಡಿದೆ.
ಕಲುಷಿತ ನೀರು ಕುಡಿದು 98ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು ಅದರಲ್ಲಿ ಐವರ ಸ್ಥಿತಿ ಚಿಂತಾಜನಕ ವಾಗಿದೆ. ಮಂಜಮ್ಮ,ರಘು ಎಂಬುವರು ಮೃತಪಟ್ಟಿದ್ದಾರೆ. 9 ಜನ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಸಾವಿನ ಸರಣಿ ಮತ್ತಷ್ಟು ಏರಿಕೆಯಾದೀತು ಎಂಬಾ ಆತಂಕ ಸ್ಥಳೀಯರಲ್ಲಿದೆ.

25 ವರ್ಷದ ಪ್ರವೀಣ್ ಎಂಬ ಯುವಕ ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ಪ್ರವೀಣ್ ಕಾವಡಿಗಾರಟ್ಟಿ ಗ್ರಾಮಕ್ಕೆ ಬಂದು ತಮ್ಮ ಅಜ್ಜನ ಮನೆಯಲ್ಲಿ ಊಟ ಮಾಡಿ ಮೂರ್ನಾಲ್ಕು ದಿನಗಳ ಕಾಲ ಗ್ರಾಮದಲ್ಲಿ ವಾಸವಾಗಿ ನಂತರ ವಡ್ಡರಸಿದ್ದನಹಳ್ಳಿ ಗ್ರಾಮಕ್ಕೆ ತೆರಳಿದ ಸೋಮವಾರ ಹೊಟ್ಟೆ ನೋವು, ಭೇದಿ, ವಾಂತಿ ಕಾಣಿಸಿಕೊಂಡಿದ್ದರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದುಕೊಂಡು ಹೋಗಲಾಗಿತ್ತು ಆದರೆ ಚಿಕಿತ್ಸೆ ಪಾಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಈ ಘಟನೆಯಲ್ಲಿ ಪ್ರವೀಣ್ ಮೂರನೇ ಬಲಿಯಾದಂತೆ ಆಗಿದೆ.

ಅಸ್ವಸ್ಥರ ಪೈಕಿ ಜಿಲ್ಲಾಸ್ಪತ್ರೆಯಲ್ಲಿ 43,ಬಸವೇಶ್ವರ ಆಸ್ಪತ್ರೆಯಲ್ಲಿ 55 ಚಿಕಿತ್ಸೆಯನ್ನು ಪಡೆಯಲಾಗುತ್ತಿದೆ.
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

About The Author

Leave a Reply

Your email address will not be published. Required fields are marked *