ಹೊಸದುರ್ಗ ಸಾರ್ವಜನಿಕ ಆಸ್ಪತ್ರೆ ಶಾಸಕ ಬಿ.ಜಿ.ಗೋವಿನಪ್ಪ ಭೇಟಿ
1 min read
ಹೊಸದುರ್ಗ ಸಾರ್ವಜನಿಕ ಆಸ್ಪತ್ರೆ ಶಾಸಕ ಬಿ.ಜಿ.ಗೋವಿನಪ್ಪ ಭೇಟಿ
ವರದಿ:ಕಾವೇರಿಮಂಜಮ್ಮನವರ್,
CHITRADURGAHOYSALA NEWS/
ಹೊಸದುರ್ಗ ಸುದ್ದಿ:
ಹೊಸದುರ್ಗ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಬಿ.ಜಿ. ಗೋವಿನಪ್ಪ ಭೇಟಿ ನೀಡಿ ವೀಕ್ಷಣೆಯನ್ನು ನಡೆಸಿ ರೋಗಿಗಳು,ಸಿಬ್ಬಂದಿಗಳು ಹಾಗೂ ವೈದ್ಯರ ಕುಂದುಕೊರತೆಗಳನ್ನು ಆಲಿಸಿ ಆಸ್ಪತ್ರೆಯ ಅಭಿವೃದ್ದಿಗೆ ಸಂಬಂದಿಸಿದಂತೆ ಸಲಹೆ ಪಡೆದರು ನಂತರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡವಿದೆ.ಉತ್ತಮ ಶಸ್ತ್ರ ಚಿಕಿತ್ಸಕರಿದ್ದಾರೆ,ಕೀಲು ಮೂಳೆ, ಮಕ್ಕಳು ಹಾಗೂ ಸ್ತ್ರೀ ರೋಗ ತಜ್ಞರಿದ್ದಾರೆ. ಕಿವಿ-ಮೂಗು-ಗಂಟಲು ತಜ್ಞರ ಎಲ್ಲರ ತಂಡ ಸದಾ ಕಾರ್ಯಪ್ರವೃತ್ತರಾಗಬೇಕು. ಉತ್ತಮ ಪ್ರಯೋಗಾಲಯ, ಔಷಧ ವಿತರಣಾ ಕೇಂದ್ರ, ಜನೌಷಧ ಕೇಂದ್ರವಿದೆ. ಆದರೆ ಆಸ್ಪತ್ರೆಗೆ ಬರುವ ರೋಗಿಗಳು ತಾಸುಗಟ್ಟಲೇ ಕಾಯಬೇಕಾದ ಅನಿವಾರ್ಯ ಎದುರಾಗಿದೆ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಎಲ್ಲ ವ್ಯವಸ್ಥೆಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಶಾಸಕರು ಮಾತನಾಡಿ ಹೊಸದುರ್ಗ ತಾಲ್ಲೋಕಿಗೆ ಬಹುಮುಖ್ಯವಾಗಿ ಅವಶ್ಯಕವಿರುವಂತಹ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿಯೇ ಮಂಜೂರಾಗಲಿದೆ ಎಂದು ತಿಳಿಸಿದರು.
ರೋಗಿಗಳಿಗೆ ಸರಕಾರದ ವತಿಯಿಂದ ಉಚಿತವಾಗಿ ದೊರೆಯಬೇಕಾದ ಹಾಲು,ಬ್ರೆಡ್ ಮಧ್ಯಾಹ್ನದ ಊಟ ಸೇರಿದಂತೆ ಎಲ್ಲಾ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ಸದ್ಬಳಕೆ ಆಗಬೇಕು. ಆಡಳಿತ ವೈದ್ಯಾಧಿಕಾರಿಗಳು ನಮ್ಮನ್ನು ಭೇಟಿಮಾಡಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು.
ಆಸ್ಪತ್ರೆಯಲ್ಲಿನ ಸೇವೆಗಳ ಸುಧಾರಣೆಗಾಗಿ ನಮ್ಮ ಸಹಕಾರ ಸದಾ ಇರುತ್ತದೆ..ಕಳೆದ ಬಾರಿ ನಮ್ಮ ಅವಧಿಯಲ್ಲಿ ಅಗತ್ಯ ಪರಿಕರಗಳನ್ನು ಆಸ್ಪತ್ರೆಗೆ ತರಿಸಿಕೊಡಲಾಗಿದೆ.ಸುಸಜ್ಜಿತ ಕಟ್ಟಡವಿದೆ.ಆದರೆ ಸಿಬ್ಬಂದಿ ನಿಲ೯ಕ್ಷ್ಯ ತೋರುತ್ತಿರುವುದು ಜನಸಾಮಾನ್ಯರಿಂದ ಕೇಳಿಬರುತ್ತಿದೆ.ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮ ವಹಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದ ಅನೇಕರು ಪ್ರತಿನಿತ್ಯ ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಪಡೆಯುವಂತಾಗಬೇಕು ಎಂದರು.
ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾII ಸಂಜಯ್ ಮಾತನಾಡಿ
ಇರುವ ವ್ಯವಸ್ಥೆಯಲ್ಲಿಯೇ ರೋಗಿಗಳಿಗೆ ಉತ್ತಮ ಸೇವೆ ನೀಡಲು ನುರಿತ ವೈದ್ಯರ ತಂಡ ಶ್ರಮಿಸುತ್ತಿದೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ. ಈ ಕುರಿತು ಮಾನ್ಯ ಶಾಸಕರ ಗಮನಕ್ಕೆ ತರಲಾಗಿದೆ.ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ನೀಡುವ ಮೂಲಕ ಆಸ್ಪತ್ರೆ ವಾತಾವರಣವನ್ನು ಉತ್ತಮವಾಗಿಟ್ಟುಕೊಳ್ಳಲು ಶ್ರಮಿಸಲಾಗುವುದು ಎಂದರು.