May 9, 2024

Chitradurga hoysala

Kannada news portal

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಎಲ್ಲಾ ಸಮಾಜ ಜನರು ಭಾಗವಹಿಸಿ:

1 min read

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಎಲ್ಲಾ ಸಮಾಜ ಜನರು ಭಾಗವಹಿಸಿ: ಬಿ.ಕಾಂತರಾಜ್

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಎಲ್ಲಾ ಸಮಾಜ ಜನರು ಭಾಗವಹಿಸಿ: ಬಿ.ಕಾಂತರಾಜ್

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ :

ನಗರದಲ್ಲಿ ನಾಳೆ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ನಾಯಕ ಜನಾಂಗ ಹಾಗೂ ಇತರೆಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ 10 ಗಂಟಗೆ ಕೋಟೆ ಮುಂಭಾಗದಿಂದ ಹೊರಡುವ ಮೆರವಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸರ್ವರೂ ಪಾಲ್ಗೊಳ್ಳಿ ಎಂದು ವಿನಂತಿಸಿ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ಇವರು ಚಿತ್ರದುರ್ಗಕ್ಕೆ ಆಗಮಿಸಿದಾಗ ವಾಲ್ಮೀಕಿ ಭವನವನ್ನು ವೀಕ್ಷಿಸಿದ್ದಾರೆ. ಆದಷ್ಠು ಬೇಗ ಪೂರ್ಣಗೊಂಡು ಉದ್ಘಾಟನೆಯಾಗಲಿ ಎಂದರು.

ವಾಲ್ಮೀಕಿ ಭವನದಲ್ಲಿ ಕೇಲವು ಅನಾನುಕೂಲದಿಂದ ಭವನ ಉದ್ಘಾಟನೆ ಆಗಿಲ್ಲ. ಚೇರ್, ಶೌಚಾಲಯ ಸಮಸ್ಯೆ ಇದೆ. ಭವನದ ಕಾಮಗಾರಿ ಪೂರ್ಣವಾದ ನಂತರ ಅದ್ದೂರಿಯಾಗಿ ಉದ್ಘಾಟನೆ ಮಾಡಲಾಗುತ್ತದೆ.ಸಚಿವರು ಸಹ ಭವನದ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ಮತ್ತು ಅನುದಾನ ಕೂಡಲೇ ಬಿಡುಗಡೆಗೊಳಿಸುತ್ತೇನೆ ಎಂಬ ಭರವಸೆ ನೀಡಿದ್ದು ವಾಲ್ಮೀಕಿ ಜಯಂತಿ ನಂತರ ಬೆಂಗಳೂರು ತಂಡ ಆಗಮಿಸಿ ಅಗತ್ಯ ಅನುದಾನಕ್ಕೆ ನೀಲನಕ್ಷೆ ತಯಾರು ಮಾಡಲಾಗುತ್ತದೆ ಎಂದು ತಿಳಿಸಿದರು.

ಜೆಸಿಆರ್ ನಲ್ಲಿ ಪರಿಶಿಷ್ಟ ವರ್ಗಗಳ ಕಚೇರಿ ನಡೆಯುತ್ತಿದ್ದು ಸಮಾಜದ ಸಾರ್ವಜನಿಕರಿಗೆ , ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ.ಅದನ್ನು ವಾಲ್ಮೀಕಿ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೂಡಲೇ ಲಿಡ್ಕರ್ ಭವನದಲ್ಲಿ ಜಾಗ ಇದ್ದ ಸ್ಥಳಾಂತರಿಸಲು ಒತ್ತಾಯಲು ಮಾಡಲು ಸೂಚಿಸಿದ್ದರು. ಇನ್ನು ಆಗಿಲ್ಲ ಈ ಕೂಡಲೇ ಇಲಾಖೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ:

ಪ್ರತಿ ವರ್ಷದಂತೆ ಈ ವರ್ಷ ಸಹ ಜಿಲ್ಲಾ ನಾಯಕ ಸಮಾಜದಿಂದ ಜಿಲ್ಲಾ ವಾಲ್ಮೀಕಿ ಪ್ರಶಸ್ತಿಗೆ ಐದು ಆಯ್ಕೆ ಮಾಡಲಾಗಿದೆ. ಇತಿಹಾಸ ವಿಭಾಗದಿಂದ ಡಾ.ಎನ್.ಎಸ್.ಮಹಂತೇಶ್, ಚಿತ್ರಕಲೆ ಹಾಗೂ ಫೆÇೀಟೋಗ್ರಫಿಯಿಂದ ಕ್ರಿಯೇಟಿವ್ ವೀರೇಶ್, ಉದ್ಯಮ ಕ್ಷೇತ್ರದಲ್ಲಿ ಶ್ರೀ ಅಹೋಬಲ ಟಿವಿಎಸ್ ಶೋರೂಂ ನ ಅರುಣ್‍ಕುಮಾರ್, ಪತ್ರಿಕೋದ್ಯಮ ವಿಭಾಗದಿಂದ ಹಿರಿಯ ಪತ್ರಕರ್ತ ಎಂ.ಎನ್. ಅಹೋಬಲಪತಿ, ಸಮಾಜ ಸೇವೆಗಾಗಿ ನಿವೃತ್ತ ಚೀಫ್ ಇಂಜಿನಿಯರ್ ಟಿ.ಆರ್.ರುದ್ರಪ್ಪ ಇವರುಗಳಿಗೆ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ , ಮುಖಂಡರಾದ ಡಿ.ಗೋಪಾಲಸ್ವಾಮಿ ನಾಯಕ, ಸೋಮೇಂದ್ರ, ಅಹೋಬಲ ಶೋರೂಂ ಮಾಲೀಕ ಅರುಣ್‍ಕುಮಾರ್, ಕಾಟೀಹಳ್ಳಿ ಕರಿಯಪ್ಪ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *