ಚಿಕ್ಕುಂತಿ ಗ್ರಾಮದ ಪವಿತ್ರ ತ್ರೋ ಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
1 min read
ಚಿಕ್ಕುಂತಿ ಗ್ರಾಮದ ಪವಿತ್ರ ತ್ರೋ ಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಚಿತ್ರದುರ್ಗ ಹೊಯ್ಸಳ:
ಮೊಳಕಾಲ್ಮುರು :
ಚಿಕ್ಕುಂತಿ ಗ್ರಾಮದ ವಿದ್ಯಾರ್ಥಿನಿ ಪವಿತ್ರ ತ್ರೋ ಬಾಲ್ ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜಯನಗರ ಗಡಿಭಾಗದ ಮೊಳಕಾಲ್ಮುರು ತಾಲ್ಲೂಕು ಚಿಕ್ಕುಂತಿ ಗ್ರಾಮ ಕ್ರೀಡೆ ಮತ್ತು ವಿಧ್ಯಾಭ್ಯಾಸ ದಿಂದ ರಾಜ್ಯದ ಗಮನಸೆಳೆಯಿತು. ಇತ್ತೀಚಿಗೆ ಜ್ಞಾನದೇಗುಲ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಂತರ್ ಜಿಲ್ಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಭೇಟಿ ನೀಡಿ ವೀಕ್ಷಣೆ ಮಾಡಿದ್ದರು.
ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಬಹುತೇಕ ನವೋದಯ ಶಾಲೆ, ಮೂರಾರ್ಜಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ ಗಳಿಗೆ ಆಯ್ಕೆಯಾಗತ್ತಿದ್ದಾರೆ, ಎನ್ನುವುದು ಹೆಮ್ಮೆಯ ಸಂಗತಿ.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತರುವ ಪವಿತ್ರ ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾ ಕೂಟದಲ್ಲಿ ಸೆಂಟ್ ಪೌಲ್ ಕಾಲೇಜು ವತಿಯಿಂದ ಸ್ವರ್ದಿಸಿ ಯಮರ್ ತ್ರೋ ನಲ್ಲಿ ತಂಡ ದೊಂದಿಗೆ ಸೆಣಸಿ ಅಂತಿಮವಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿರುವ ಪವಿತ್ರ ತಂದೆ ವೆಂಕಟೇಶ್ ಚಿಕ್ಕುತಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಗಿದ್ದಾರೆ, ಅಲ್ಲದೆ ಇವರ ಮಗಳು ಯಮರ್ ತ್ರೋ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇನ್ನೂ ಪವಿತ್ರ ರವರು ರಾಜ್ಯ ದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಗ್ರಾಮಸ್ಥರು ಶುಭ ಹಾರೈಸಿದ್ದಾರೆ.