ಶ್ರೀ ಕಂಪಳ ರಂಗ ಸ್ವಾಮಿ ಹಾಗೂ ಜಗಳೂರು ಪಾಪನಾಯಕ ಸ್ವಾಮಿ ಜಾತ್ರೆ ಮಹೋತ್ಸವ
1 min read
ಶ್ರೀ ಕಂಪಳ ರಂಗ ಸ್ವಾಮಿ ಹಾಗೂ ಜಗಳೂರು ಪಾಪನಾಯಕ ಸ್ವಾಮಿ ಜಾತ್ರೆ ಮಹೋತ್ಸವ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಮೊಳಕಾಲ್ಮುರು :-
ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಚಿಕ್ಕುಂತಿ ಕಂಪಳ ದೇವರಹಟ್ಟಿ ಊರು ದೇವರ ಜಾತ್ರೆ ಎಂದರೆ ಅಲ್ಲೊಂದು ವಿಶೇಷ ಇದ್ದ ಇರುತ್ತದೆ ಆ ವಿಶೇಷತೆಯ ಹಿಂದೆ ಶತಮಾನ ಕಾಲದಿಂದಲೂ ನಡೆದು ಬಂದಿರುವ ಸಂಸ್ಕಾರ ಹಾಗೂ ಸಂಸ್ಕೃತಿಗಳು ಅಲ್ಲಿ ನಡೆಯುವ ಆಚರಣೆಗಳ ಮೂಲಕ ಈ ಜಾತ್ರೆಗೆ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬರುತ್ತದೆ ಮೂರು ದಿನಗಳ ಕಾಲ ನಡೆಯುವ ದೂಲಿ ಹಬ್ಬಕ್ಕೆ (ಮರು ದೀಪಾವಳಿ )ಶುಕ್ರವಾರ ರಂದು ಚಾಲನೆ ನೀಡಲಾಯಿತು ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಮ್ಯಾಸನಾಯಕರು ಶತಮಾನದಿಂದಲೂ ದೀಪಾವಳಿ ನಂತರ ಈ ದೂಲಿ ಹಬ್ಬವನ್ನು ನಾನಾ ಧಾರ್ಮಿಕ ಆಚರಣೆಗಳೊಂದಿಗೆ ನಡೆಸುತ್ತ ಬಂದಿದ್ದಾರೆ ವರ್ಷದ ಆರಂಭದಲ್ಲೇ ತಿಂಗಳಲ್ಲಿ ನಡೆಯುವ ದೊಡ್ಡ ಜಾತ್ರೆಗೂ ಮುಂಚೆ ನಡೆವ ಈ ಹಬ್ಬಕ್ಕೆ ಮರು ದೀಪಾವಳಿ ಎಂದು ಆಚರಣೆ ಮಾಡತ್ತಿದ್ದಾರೆ ಮ್ಯಾಸನಾಯಕರ ಸಮುದಾಯದವರಿಗೆ ಈ ಆಚರಣೆಯು ಪ್ರಮುಖವಾಗಿದೆ ಹಬ್ಬದ ಆರಂಭದ ದಿನ ಶ್ರೀ ಕಂಪಳ ರಂಗ ಸ್ವಾಮಿ ಜಗಲೂರು ಪಾಪನಾಯಕ ಗಾದ್ರಿ ಪಾಲನಾಯಕ ಸ್ವಾಮಿಗಳ ಉತ್ಸವ ಮೂರ್ತಿಗಳನ್ನು ಪದಿಗಳಲ್ಲಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಯಿತು ಶನಿವಾರ ಬೆಳಿಗ್ಗೆ ದೇವರುಗಳಿಗೆ ಬೆಣ್ಣೆ ಮೀಸಲು ಅರ್ಪಿಸಲಾಯಿತು ಭಾನುವಾರ ಮಹಾ ಮಂಗಳಾರತಿ ನಡೆಸಿ ಮದ್ಯಾಹ್ನ ಪದಿಗಳ ಮುಂದೆ ದೇವರ ಎತ್ತುಗಳನ್ನು ಓಡಿಸಲಾಗುತ್ತದೆ ಸಂಜೆ ದೇವರುಗಳನ್ನು ಗುಡಿ ತುಂಬಿಸುವುದು