April 20, 2024

Chitradurga hoysala

Kannada news portal

ಹಿರಿಯ ಪತ್ರಕರ್ತ,ಕನ್ನಡ ಚಳುವಳಿ-ಸಲಹೆಗಾರ ಹಳೇಬೀಡು ರಾಮಪ್ರಸಾದ್ ಇವರಿಗೆ ಸನ್ಮಾನ

1 min read

ದಾವಣಗೆರೆ ನಗರ ಪಾಲಿಕೆ ರಾಜ್ಯೋತ್ಸವ:

ಹಿರಿಯ ಪತ್ರಕರ್ತ,ಕನ್ನಡ ಚಳುವಳಿ-ಸಲಹೆಗಾರ

ಹಳೇಬೀಡು ರಾಮಪ್ರಸಾದ್ ಸನ್ಮಾನ

ಚಿತ್ರದುರ್ಗ ಹೂಯ್ಸಳ ನ್ಯೂಸ್/

ದಾವಣಗೆರೆ ನ 23 :

ಇದೇ 25 ರಿಂದ ದಾವಣಗೆರೆ ನಗರ ಪಾಲಿಕೆ ಹಾಗೂ ಕನ್ನಡ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಮೂರು ದಿನಗಳ ಕರ್ನಾಟಕ ರಾಜ್ಯೋತ್ಸವದ ಮೊದಲ ದಿನವಾದ 25 ರ ಶನಿವಾರ ದಾವಣಗೆರೆ ಜಿಲ್ಲೆಯ ಹಿರಿಯ ಪತ್ರಕರ್ತರೂ , ಕನ್ನಡ ಚಳುವಳಿಯ ಗೌರವ ಸಲಹೆಗಾರರೂ ಆಗಿರುವ ಹಳೇಬೀಡು ರಾಮ ಪ್ರಸಾದ್ ರವರನ್ನು ಸನ್ಮಾನಿಸಲಾಗುತ್ತಿದೆ.

ಕಳೆದ ಸುಮಾರು ಐವತ್ತು ವರ್ಷಗಳಿಂದ ಪತ್ರಕರ್ತರಾಗಿ , ಕನ್ನಡ ಚಳುವಳಿಯ ಗೌರವ ಸಲಹೆಗಾರರಾಗಿ , ಬಾಪೂಜಿ ಯುವಕ ಸಂಘ ಸೇರಿದಂತೆ ಹಲವು ಹತ್ತು ಸಾಮಾಜಿಕ ಸಂಘ ಸಂಸ್ಥೆಗಳ ಒಡನಾಟ ಹೊಂದಿರುವ ರಾಮಪ್ರಸಾದ್ , ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿರುವ ಯುವ ಜನರಿಗೆ ಪ್ರೋತ್ಸಾಹ ನೀಡಿದ್ದಲ್ಲದೆ ತಾವು ಕಾರ್ಯನಿರ್ವಹಿಸಿದ ಪತ್ರಿಕೆಗಳ ಮೂಲಕ ಬಹಳಷ್ಟು ಉದಯೋನ್ಮುಖ ಬರಹಗಾರರನ್ನು ಬೆಳಕಿಗೆ ತಂದ ಕೀರ್ತಿಗೂ ಭಾಜನರಾಗಿದ್ದಾರೆ.

ಹಳೇಬೀಡು ರಾಮಪ್ರಸಾದ್ ರವರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಸನ್ಮಾನ ನೀಡಲಾಗುತ್ತಿದ್ದು , ರಾಜ್ಯದ ಮಾಜೀ ಸಚಿವರೂ ಹಾಲೀ ಶಾಸಕರೂ ಆದ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ , ರಾಜ್ಯದ ಗಣಿ , ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ , ಮೇಯರ್ ವಿನಾಯಕ ಪೈಲ್ವಾನ್ ಮತ್ತಿತರ ಗಣ್ಯರು ಉಪಸ್ಥಿತರಿರುತ್ತಾರೆ.

ರಾಮಪ್ರಸಾದ್ ರ ಸೇವೆಯನ್ನು ಗುರುತಿಸಿ ಇದೇ ನವೆಂಬರ್ ಒಂದರ ರಾಜ್ಯೋತ್ಸವದಂದು ದಾವಣಗೆರೆ ಜಿಲ್ಲಾಡಳಿತವೂ ಸಹಾ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರಿಂದ ಸನ್ಮಾನಿಸಿ ಗೌರವಾರ್ಪಣೆ ಮಾಡಿದ್ದನ್ನಿಲ್ಲಿ ಸ್ಮರಿಸಬಹುದು.

About The Author

Leave a Reply

Your email address will not be published. Required fields are marked *