May 9, 2024

Chitradurga hoysala

Kannada news portal

ರಾಜಕಾರಣ ಮಾಡಬೇಕೇ..!? ಮಾಡಿದರೆ ಎಂಥ ರಾಜಕಾರಣ ಮಾಡಬೇಕು..!? : ಐದು ನಿಮಿಷ ಬಿಡುವು ಮಾಡಿಕೊಂಡು ಓದಿ. ಚಿಂತಿಸಿ

1 min read

 

ಬಾಬಾಸಾಹೇಬರ ಋಣದಲ್ಲಿ ಶಿಕ್ಷಣ ಉದ್ಯೋಗ ಪಡೆದು ನಿವೃತ್ತರಾದ ನಮ್ಮ ಉನ್ನತ ಅಧಿಕಾರಿಗಳು‌ ರಾಜಕೀಯಕ್ಕೆ ಬರಬೇಕೇ..!?

ರಾಜಕಾರಣ ಮಾಡಬೇಕೇ..!?

ಮಾಡಿದರೆ ಎಂಥ ರಾಜಕಾರಣ ಮಾಡಬೇಕು..!?

ಐದು ನಿಮಿಷ ಬಿಡುವು ಮಾಡಿಕೊಂಡು ಓದಿ. ಚಿಂತಿಸಿ

ಇವರು ಡಾ. ಪ್ರವೀಣ್ ಕುಮಾರ್. IPS ಅಧಿಕಾರಿಗಳು ಸ್ವಯಂನಿವೃತ್ತಿ ಪಡೆದು ಈಗ ತೆಲಂಗಾಣದಲ್ಲಿ ಫುಲೆ ಅಂಬೇಡ್ಕರೈಟ್ ಬಹುಜನ ಚಳವಳಿಯ ಮುಂದಾಳತ್ವ ವಹಿಸಿದ್ದಾರೆ.!

ಇವರಿಗಿದ್ದ ಆ ದೊಡ್ಡ ಹುದ್ದೆಯ ಹಿರಿಮೆ ಗರಿಮೆಗೆ, ಅಲ್ಲಿ ಇವರಿಗಿರುವ ಕೀರ್ತಿಗೆ, ಇವರಿಗಿರುವ ಜನಮನ್ನಣೆಗೆ, ಇವರಿಗಿದ್ದ ಅವಕಾಶಕ್ಕೆ ಇವರು ಈಗಾಗಲೇ ಬೆಳೆದು ನಿಂತಿರುವ ಯಾವುದಾದರೂ ಪಕ್ಷಕ್ಕೆ ಸೇರಿ ಸ್ವಾರ್ಥದ ಗುಲಾಮಗಿರಿಯ ಸುಲಭದ ದಾರಿ ಹಿಡಿದಿದ್ದರೆ ಇಷ್ಟೊತ್ತಿಗೆ ಇವರು ಬೇಷರತ್ ಮಂತ್ರಿಯಾಗಬಹುದಿತ್ತು.!
ಆದರೆ ಇವರಿಗಿರುವ ಅಂಬೇಡ್ಕರ್ವಾದದ ಸ್ಪಷ್ಟತೆಗೆ ಇವರಿಗಿರುವ ಅಗಾಧ ಜ್ಞಾನಕ್ಕೆ ಬದ್ಧತೆಗೆ ಇವರಿಗಿರುವ ಸಮುದಾಯದ ನೈಜ ಕಾಳಜಿಗೆ ಇವರು ಆಯ್ಕೆ ಮಾಡಿಕೊಂಡದ್ದು ಮಾತ್ರ ದಾದಾಸಾಹೇಬ್ ಕಾನ್ಷಿರಾಂಜಿಯವರು ಸರ್ವತ್ಯಾಗಮಾಡಿ ರಕ್ತಬೆವರು ಬಸಿದು ಸ್ಥಾಪಿಸಿರುವ ಬಹುಜನ ಸಮಾಜ ಪಕ್ಷವನ್ನು ಕಟ್ಟುವ ಅತ್ಯಂತ ಕಠಿಣ ಆದರೆ ಸರಿಯಾದ ಹಾದಿಯನ್ನು..!

ನಮ್ಮ ಹಲವು ವಿದ್ಯಾವಂತ ಅಧಿಕಾರಿಗಳು/ಉನ್ನತ ಅಧಿಕಾರಿಗಳು ಈಗಾಗಲೇ ಒಂದಷ್ಟು ಹಣ ಆಸ್ತಿ ಅಧಿಕಾರ ಕೀರ್ತಿ ಪಡೆದವರು ಅಂಬೇಡ್ಕರ್ ಬಗ್ಗೆ ಬರೆಯುತ್ತಾರೆ ಭಾಷಣ ಬಿಗಿಯುತ್ತಾರೆ ಸಮಾಜ ಸಮುದಾಯ ಹಾಗಿರಬೇಕು ಹೀಗಿರಬೇಕು ಎಂದು ಬಡಬಡಿಸುತ್ತಾರೆ, ನಿವೃತ್ತಿಯಾದ ಮೇಲೆ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ರಕ್ಷಿಸಿಕೊಳ್ಳಲೋ ಅಥವಾ ಇನ್ನಷ್ಟು ಆಸ್ತಿ ಕೀರ್ತಿ ಅಧಿಕಾರ ಹಣ ಸಂಪಾದಿಸಲೋ ಅಥವಾ ಅಜ್ಞಾನದಿಂದಲೋ, ಯಾವ ಪಕ್ಷಗಳು ಅಂಬೇಡ್ಕರವರ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿವೆಯೋ ಅವೇ ಕಾಂಗ್ರೆಸ್ ಬಿಜೆಪಿ ದಳ ಪಕ್ಷಗಳ ಪಾದಕ್ಕೆ ಬಿದ್ದು ಅದನ್ನೇ ಅಪ್ಪುತ್ತಾರೆ.‌.! ಅದು ‘ಅವರಿಗೆ’ ಸೇಫ್ ಎನಿಸುತ್ತದೆ.! ಅಂಥವರು ಬಾಬಾಸಾಹೇಬರ ತತ್ವ ಸಿದ್ಧಾಂತದ ಬಹುಜನ ಪಕ್ಷವನ್ನು ಮರೆಯುತ್ತಾರೆ ಜಾಣಕುರುಡಾಗುತ್ತಾರೆ ಅಥವಾ ಅದು‌ ಸಾಧ್ಯವಿಲ್ಲ ಇವರು ಸರಿಯಿಲ್ಲ ಅದು‌ಹಾಗೆ ಅದುಹೀಗೆ ಎಂದು ಫಿಲಾಸಫಿ ಹೊಡೆಯುತ್ತಾರೆ.! ಅದರ ವಿರುದ್ಧವಾಗಿಯೇ ಅಪಪ್ರಚಾರ ಮಾತಾಡುತ್ತಾರೆ. ಇದು ಅವರುಗಳು ಬಾಬಾಸಾಹೇಬರ ಬೆನ್ನಿಗಲ್ಲ ಎದೆಗಿರಿಯುವಂಥಾ ದ್ರೋಹ.! ಅಂಥ ಸ್ವಾರ್ಥಿಗಳ ನಡುವೆ ಡಾ‌.ಪ್ರವೀಣ್ ಕುಮಾರ್ IPS ಬಹಳ ಭಿನ್ನವಾಗಿ ಕಾಣುತ್ತಾರೆ. ಮತ್ತು ಮಾದರಿಯಾಗಿದ್ದಾರೆ.!

ಪ್ರವೀಣ್ ಕುಮಾರ್ ರವರು ಪಕ್ಷ ಸೇರುವ ಮುನ್ನವೇ ಅಧಿಕಾರಿಯಾಗಿದ್ದಾಗಲೇ ತಮಗೆ ಒದಗಿದ ವಿಶೇಷ ಅವಕಾಶವನ್ನು ಬಳಸಿಕೊಂಡು ಅಧಿಕಾರ ಗಿಟ್ಟಿಸಿಕೊಂಡು ತೆಲಂಗಾಣ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸ್ಪೆಷಲ್ ಕಮಿಷನರ್ ಆಗಿ (IAS Grade) ಕಾರ್ಯ ನಿರ್ವಹಿಸುತ್ತಾ, ರಾಜ್ಯದ ಎಲ್ಲಾ OBC,SC,ST,RM ವಿದ್ಯಾರ್ಥಿಗಳ ವಸತಿಶಾಲೆಯ ಇನ್ಚಾರ್ಜ್ ಪಡೆದು ಹಗಲು ರಾತ್ರಿ ಎನ್ನದೆ ಅಲ್ಲೇ ಉಳಿದು ವಿದ್ಯಾರ್ಥಿಗಳೊಂದಿಗೆ ಬೆರೆತು ಅವರಿಗೆ ಸರಿಯಾದ ಮತ್ತು ಅಡ್ವಾನ್ಸ್ ಅಕಾಡೆಮಿಕ್ ಟೆಕ್ನಾಲಜಿಗಳ ಮಾರ್ಗದರ್ಶನ ಹಾಗು ತರಬೇತಿ ನೀಡಿ ಜೊತೆಜೊತೆಗೆ ಸಮಾಜ ಪರಿವರ್ತನೆಗೆ ಅವರ ಮನಸ್ಸನ್ನು ಅಣಿಮಾಡಿ ‘ಸ್ವೆರೋಸ್’ ಅನ್ನುವ ಹೊಸ ಪರಿಕಲ್ಪನೆಯೊಂದಿಗೆ ಲಕ್ಷಾಂತರ ಯುವಜನತೆಯನ್ನು ಅವರ ಪೋಷಕರನ್ನು ಸಿದ್ಧಗೊಳಿಸಿ, ಇಡೀ ದೇಶದ ರಾಜಕೀಯ ಪರಿಸ್ಥಿತಿಯನ್ನು ಅರೆದು ಕುಡಿದು ಅಳೆದು ತೂಗಿ ತಾನೇನು ಮಾಡಬೇಕು ಹೇಗೆ ಮಾಡಬೇಕು ಯಾವ ಪಕ್ಷವನ್ನು ಯಾಕೆ ಸೇರಬೇಕು ಏನುಮಾಡಬೇಕು ಎಲ್ಲವನ್ನೂ ಲೆಕ್ಕಹಾಕುತ್ತಾ ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿ ಮಾಡುವ ಬಾಬಾಸಾಹೇಬರ ಕನಸು ಮತ್ತು ದಾದಾಸಾಹೇಬರ ಗುರಿ ಮಾರ್ಗಗಳ ಸ್ಪಷ್ಟತೆಯನ್ನು ಕಂಡುಕೊಂಡರು. ನಂತರ ತಾವೇ ಸ್ವಯಂ ನಿವೃತ್ತಿ ಘೋಷಿಸಿ ತಮ್ಮ ರಾಜೀನಾಮೆ ಪತ್ರದಲ್ಲಿ ” ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ದಾದಾಸಾಹೇಬ್ ಕಾನ್ಷಿರಾಂರವರ ವಿಷನ್ ಅಂಡ್ ಮಿಷನ್ ಅನ್ನು ಮುಂದುವರಿಸಲು ಇನ್ನು ನನ್ನ ಜೀವನವನ್ನು ಮುಡುಪಾಗಿಡಲು ನಿರ್ಧರಿಸಿದ್ದೇನೆ ಹಾಗಾಗಿ‌ ಈ ಸ್ವಯಂನಿವೃತ್ತಿ” ಎಂದು ಮುಕ್ತವಾಗಿಯೇ ಪತ್ರದಲ್ಲಿ‌ ಬರೆದು ಸರ್ಕಾರಕ್ಕೆ ಸಲ್ಲಿಸಿ, ನೇರವಾಗಿ ಬಂದು ಬಹುಜನ ಸಮಾಜ ಪಕ್ಷ ಸೇರಿದರು.!

ಅಂದಿನಿಂದ ಇಂದಿನವರೆಗೂ ಕಾಲಿಗೆ ಚಕ್ರಕಟ್ಟಿಕೊಂಡು ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ ತೆಲಂಗಾಣದ ಮೂಲೆಮೂಲೆ ಸುತ್ತುತ್ತಿದ್ದಾರೆ. ಎಲ್ಲಾ ಬಹುಜನ ಸಮುದಾಯದವರ ವಿಶ್ವಾಸ ಗಳಿಸುತ್ತಿದ್ದಾರೆ. ಇವರಿಂದ ಪ್ರೇರಣೆ ಜ್ಞಾನ ಮಾರ್ಗದರ್ಶನ ಸಹಾಯ ಸ್ಫೂರ್ತಿ ಪಡೆದು ವಿವಿಧ ರಂಗದಲ್ಲಿ ಬೆಳೆದ ಎಷ್ಟೋ ಬಹುಜನ ಸಮುದಾಯದ ವಿದ್ಯಾವಂತ ಯುವಕರು ಯುವತಿಯರು ಇಂದು ಜಗತ್ತಿನ ಮೂಲೆಮೂಲೆಗಳಲ್ಲಿ ನೆಲೆಸಿದ್ದಾರೆ. ಎಲ್ಲರ ಪ್ರೀತಿ ಬೆಂಬಲದ ಅಲೆ ಹಾಗು ಸೋದರ ಪ್ರವೀಣ್ ಕುಮಾರ್ ರವರ ತ್ಯಾಗ ಬದ್ಧತೆ ಮತ್ತು ಧೈರ್ಯ ಇಂದು ತೆಲಂಗಾಣದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ.!

ಈಗ ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿದೆ ಡಾ. ಪ್ರವೀಣ್ ಕುಮಾರ್ ರವರ ನೇತೃತ್ವದಲ್ಲಿ ಬಿಎಸ್ಪಿಯು ಅಬ್ಬರದ ಪ್ರಚಾರ ನಡೆಸುತ್ತಿದೆ‌. ಶಿರ್ಪೂರು ಎಂಬ ‘ಸಾಮಾನ್ಯ’ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ..! ಇಡೀ ಕ್ಷೇತ್ರದ ಎಲ್ಲಾ ಸಮುದಾಯದವರು ಅವರ ಬೆನ್ನಿಗಿದ್ದಾರೆ. ಅಲ್ಲಿನ ಆಡಳಿತ ಪಕ್ಷದ ಸಿಟಿಂಗ್ ಎಮ್ಮೆಲ್ಲೆಯ ಬುಡಕ್ಕೆ ಬೆಂಕಿಬಿದ್ದಿದೆ. ಪ್ರವೀಣ್ ರವರ ಗೆಲುವನ್ನು ಇನ್ನು ತಡೆಯಲಾಗದು ಎಂಬ ಹತಾಷೆಯಿಂದ ಕೆರಳಿ ಗೂಂಡಾಗಳನ್ನು ಬಿಟ್ಟು ಬಿಎಸ್ಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಲಾಗುತ್ತಿದೆ. ಪೋಲೀಸರಿಂದ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ. ಮೊನ್ನೆ ಮೊನ್ನೆ ಮನುವಾದಿ ಪಕ್ಷಗಳ ಕೊನೆಯ ಅಸ್ತ್ರವಾಗಿ ಪ್ರವೀಣ್ ಕುಮಾರ್ ರವರನ್ನೇ ಕೊಂದುಬಿಡಲು ಅವರು ಪ್ರಚಾರ ಮುಗಿಸಿ ಹಿಂತಿರುಗುತ್ತಿದ್ದ ಮಾರ್ಗದಲ್ಲಿ ತೆಲುಗು ಸಿನಿಮಾ ಮಾದರಿಯಲ್ಲಿ ಅವರ ಕಾರಿನ ಮೇಲೆ ಲಾರಿ ಹತ್ತಿಸಲು ಪ್ರಯತ್ನಿಸಲಾಗಿದೆ. ಪ್ರಾಣಾಪಾಯದಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.! ಕೇಸು ದಾಖಲಾಗಿದೆ.! ಪ್ರವೀಣ್ ಕುಮಾರ್ ರವರು ಈ ಬಾರಿ ಅಲ್ಲಿ ಗೆದ್ದೇಗೆಲ್ಲುವುದು ನಿಚ್ಚಳವಾಗಿದೆ. ಇದನ್ನು ತಪ್ಪಿಸಲು, ತೆಲಂಗಾಣದಲ್ಲಿ ಪ್ರವೀಣ್ ಕುಮಾರ್ ರವರ ಅಂಬೇಡ್ಕರ್ ವಾದಿ ಸ್ವತಂತ್ರ ಬಹುಜನ ರಾಜಕಾರಣದ ಹವಾವನ್ನು ತಗ್ಗಿಸಲು ಮೊನ್ನೆ ಮೋದಿಯವರು ಒಳಮೀಸಲಾತಿ ನೆಪದಲ್ಲಿ ತೆಲಂಗಾಣಕ್ಕೆ ಬಂದು ಹೋಗಿದ್ದಾರೆ.! ಕರ್ನಾಟಕದ ಕಾಂಗ್ರೆಸ್ಸಿನ ಸಿದ್ಧರಾಮಯ್ಯನವರೂ ಕಾಂಗ್ರೆಸ್ ಪ್ರಚಾರಕ್ಕೆ ಹೋಗಿಬಂದಿದ್ದಾರೆ ದೇಶದ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಎಲ್ಲಾ ದಲಿತ ಶಾಸಕರನ್ನು (including ಜಿಗ್ನೇಷ್ ಮೇವಾನಿ ) ತೆಲಂಗಾಣಕ್ಕೆ ಕಳಿಸಿ ಅಲ್ಲಿ ಪ್ರವೀಣ್ ಕುಮಾರ್ ರವರನ್ನು ಕುಗ್ಗಿಸಲು ಎಲ್ಲಾ ಮನುವಾದಿ ಪಕ್ಷಗಳು ಹುನ್ನಾರ ಹೂಡಿವೆ.!

ಬಂಧುಗಳೇ, ಫುಲೆ ಅಂಬೇಡ್ಕರೈಟ್ ಚಳವಳಿಯನ್ನು ಪಕ್ಷವನ್ನು ಅತ್ಯಂತ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕಟ್ಟುವುದು ಎಂದರೆ ಅದು ಅತ್ಯಂತ ಕಡುಕಷ್ಟದ ಅಪಾಯದ ಮತ್ತು ಸವಾಲಿನ ಕೆಲಸ‌. ಇದು‌ ಯಾರೋ ಒಬ್ಬರು ಯಾವುದೋ ಒಂದು ಜಾತಿಯ ಯಾರೋ ಒಂದಷ್ಟು ಜನ ಮಾಡುವ ಕೆಲಸವಲ್ಲ. ಇದು ಎಲ್ಲರ ಕೆಲಸ. ಹೀಗಾಗಿ ಸುಮ್ಮನೆ ಸಮಯ ವ್ಯರ್ಥಮಾಡದೆ ಕೇವಲ ಸ್ವಾರ್ಥಕ್ಕಾಗಿ ಬದುಕದೆ ಕೇವಲ ಟೀಕೆ ಮಾಡಲೆಂದೇ “ಇದು ಅಸಾಧ್ಯ ಅವರು ಸರಿಯಿಲ್ಲ ಇದು ಸರಿಯಿಲ್ಲ ಆಗ ಸರಿಯಿತ್ತು ಹೀಗಿದ್ದರೆ ಚೆನ್ನಾಗಿತ್ತು” ಎಂಬ ಸೋಮಾರಿತನದ ನೆಗೆಟಿವ್ ಮೈಂಡ್ ಸೆಟ್ ನಿಂದ ಹೊರಬಂದು ಬೇಜವಾಬ್ದಾರಿತನ ಬಿಟ್ಟು ಫುಲೆ ಅಂಬೇಡ್ಕರೈಟ್ ಬಹುಜನ ಚಳವಳಿ ಬಹುಜನ ಪಕ್ಷವನ್ನು ನಮಗಾಗಿ ನಮ್ಮ ಮುಂದಿನ ಪೀಳಿಗೆಗಾಗಿ ಕಟ್ಟೋಣ… ಹೀಗೇ ಚಳವಳಿಯನ್ನು ಕಟ್ಟಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ನಮ್ಮ ಕಣ್ಮುಂದೆಯೇ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿ ಗಾದಿಗೇರುವ ಸಾಮರ್ಥ್ಯ ಗಳಿಸಿಕೊಂಡಿರುವ ಮಹಾತ್ಯಾಗಮಯಿ ಉಕ್ಕಿನಮಹಿಳೆ ಅಕ್ಕಾ ಮಾಯಾವತಿಯವರನ್ನು ಹಾಗು ನಮ್ಮ ಹತ್ತಿರದಲ್ಲೇ ಇರುವ ಡಾ.ಪ್ರವೀಣ್ ಕುಮಾರ್ IPS ರವರನ್ನು ಸ್ಫೂರ್ತಿ ಪ್ರೇರಣೆಯಾಗಿ ಪಡೆದು ಭರವಸೆಯಿಂದ ಮುನ್ನುಗ್ಗೋಣ ಬನ್ನಿ..!

ಇಂದು ಡಾ.ಪ್ರವೀಣ್ ಕುಮಾರ್ ರವರ ಹುಟ್ಟುಹಬ್ಬ ಅವರ ಆರೋಗ್ಯ ಆಯುಷ್ಯ ಹೆಚ್ಚಾಗುವುದರ ಜೊತೆಗೆ ಅವರು ಮಾಡುತ್ತಿರುವ ನಮ್ಮ ಬಹುಜನ ಚಳವಳಿ ಯಶಸ್ಸಾಗಬೇಕಿದೆ. ಅವರು ಗೆಲ್ಲಲಿ‌ ಗೆಲ್ಲಿಸಲಿ ಭರವಸೆ ಮೂಡಲಿ ಎಂದು‌ ಆಶಿಸುತ್ತಾ ಹಾರೈಸೋಣ

Once again Many more Happy returns of the day Dear Praveen sir.. All the best Jai Bheem. Buddha Bless you.

-ಹ.ರಾ.ಮಹಿಶ
Ha Ra Mahisha Bouddha

About The Author

Leave a Reply

Your email address will not be published. Required fields are marked *