ವಿದ್ಯಾರ್ಥಿಗಳು ಭಯ ಪಡದೆ ಅನೀಮಿಯ ರಕ್ತ ಪರೀಕ್ಷೆ ಮಾಡಿಸಿ : ಡಾ. ಅನಿತಾ
1 min readವಿದ್ಯಾರ್ಥಿಗಳು ಭಯ ಪಡದೆ ಅನೀಮಿಯ ರಕ್ತ ಪರೀಕ್ಷೆ ಮಾಡಿಸಿ : ಡಾ. ಅನಿತಾ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಮೊಳಕಾಲ್ಮುರು :-
ತಾಲ್ಲೂಕು ಚಿಕ್ಕೋಬನಹಳ್ಳಿ ಇತಿಚ್ಚಿಗೆ ನಡೆದ ಸರ್ಕಾರಿ ಪಿಯುಸಿ ಕಾಲೇಜು ಆವರಣದಲ್ಲಿ ಆರೋಗ್ಯ ತಪಾಸಣೆ ಮತ್ತು ರಕ್ತ ಪರೀಕ್ಷೆ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ವೈದ್ಯರಾದ ಡಾ.ಅನಿತಾ ಮಾತನಾಡಿ ವಿದ್ಯಾರ್ಥಿಗಳು ಭಯವಿಲ್ಲದೆ ಅನೀಮಿಯ ಚಿಕಿತ್ಸೆ ಪಡೆಯಲು ಸದೃಢ ದೇಹ ಮತ್ತು ಚುರುಕು ಬುದ್ಧಿ ಹೊಂದಬೇಕು ಪೌಷಿಕ ಆಹಾರ ಸೇವನೆ ಜೊತೆಗೆ ಅನೀಮಿಯ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಸದಾ ಸುಸ್ತು ಆಯಾಸ ಉಸಿರಾಟ ತೊಂದರೆ ಅನುಭವಿಸಿ ಸುತ್ತಿರುವರು ಹಾಗಾದರೆ ಅದು ಅನೀಮಿಯ ರಕ್ತ ಹೀನತೆ ಇರಬಹುದು ಇದಕ್ಕೆ ಯಾರು ಹೇದರದೆ ಕೂಡಲೇ ರಕ್ತ ಪರೀಕ್ಷಿಸಿ ಕೊಳ್ಳಿ ಹಾಗೂ ರೋಗ ಲಕ್ಷಣಗಳಿಗೆ ಕಾರಣವಾಗಿರ ಬಹುದು,ದೈಹಿಕ ಅಗತ್ಯಗಳನ್ನು ಪೂರೈಸಲು ರಕ್ತ ಹೀನತೆಯ ಸಾಮಾನ್ಯ ಪೌಷಿಕಾಂಶ ಕಾರಣ ಎಂದರು.
ರಕ್ತ ಹೀನತೆಯ ಗಂಭೀರವಾದ ಜಾಗತಿಕ ಸಾರ್ವಜನಿಕ ಅರೋಗ್ಯ ಸಮಸ್ಯೆಯಾಗಿದು ಮತ್ತು ಇದು ವಿಶೇಷವಾಗಿ ಚಿಕ್ಕ ಮಕ್ಕಳು ಮಹಿಳೆಯರು ಮತ್ತು ಗರ್ಭಿಣಿ ಮತ್ತು ಪ್ರಸವಾನಂತರ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.
ಇದೇ ಸಂಧರ್ಭದಲ್ಲಿ ಅರಿವಿನ ಜೊತೆಗೆ ತಪಾಸಣೆ ರಕ್ತ ಪರೀಕ್ಷೆ ಚಿಕಿತ್ಸೆ ಈ ಕಾರ್ಯಗಳಿಗೂ ಅವಕಾಶ ಕಲ್ಪಿಸಿದು ರಕ್ತ ಹೀನತೆಗೆ ಅಗತ್ಯವಾದ ಮಾತ್ರೆ ಔಷದಿ ನೀಡುವಿಕೆ ಜೊತೆಗೆ ಕಡಿಮೆ ರಕ್ತ ಇದ್ದಲ್ಲಿ ಅಂತಹವರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವ ಕೆಲಸವನ್ನು ಮಾಡತ್ತಿದ್ದೂ ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದ್ದರು.
ಈ ಸಂಧರ್ಭದಲ್ಲಿ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಆರ್ ಬಿ ಎಸ್ ಯೋಜನೆಯ ಸಿಬ್ಬಂದಿಯಾದ ಕೆ ಜಿ ಮನೋಜ್ ನಾಗರತ್ನ ಹಾಗೂ ವಿದ್ಯಾರ್ಥಿಗಳು ಇದ್ದರು.