ದಾಸೋಹವೇ ದೇವದಾಮ ಎಂಬ ನಾಣ್ಣುಡಿಯನ್ನು ಪಾಲಿಸುತ್ತಿರುವ ಶ್ರೀಮಠದ ಭಕ್ತರ ಸೇವೆ ಅನನ್ಯ : ಶಾಂತವೀರ ಮಹಾಸ್ವಾಮೀಜಿ
1 min read
ದಾಸೋಹವೇ ದೇವದಾಮ ಎಂಬ ನಾಣ್ಣುಡಿಯನ್ನು ಪಾಲಿಸುತ್ತಿರುವ ಶ್ರೀಮಠದ ಭಕ್ತರ ಸೇವೆ ಅನನ್ಯ : ಶಾಂತವೀರ ಮಹಾಸ್ವಾಮೀಜಿ
ಚಿತ್ರದುರ್ಗಹೊಯ್ಸಳ ನ್ಯೂಸ್ /
ನೆಲಮಂಗಲ:
ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದ ಬ್ರಹ್ಮ ಚೈತನ್ಯ ಸದ್ಗುರು ಶ್ರೀ ಶೇಷಾವದೂತ ಆಶ್ರಮದಲ್ಲಿ ನಡೆದ 131ನೇ ಆರಾಧನಾ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದರು.
ನಂತರ ಮಾತನಾಡಿದ ಶೇಷಾವಧೂತ ಆಶ್ರಮದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಮಾನವನ ಬದುಕಿಗೆ ಗುರುವಿನ ಮಾರ್ಗದರ್ಶನ ದೇವರ ಅನುಗ್ರಹ ಅತ್ಯಂತ ಮುಖ್ಯ ಧಾರ್ಮಿಕ ಸಾಮಾಜಿಕ ನೈತಿಕ ತಳಹದಿಯ ಮೇಲೆ ಸಮಾಜ ಮುನ್ನಡೆದಾಗ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿಗಲಿಕ್ಕೆ ಸಾಧ್ಯ ಎಂದರು.
ಸರ್ವರಲ್ಲೂ ಒಳ್ಳೆಯದನ್ನು ಕಾಣುವ ಮತ್ತು ಬಯಸುವ ಭಾವ ಬರುವುದು ಆಧ್ಯಾತ್ಮದ ದಾರಿಯಲ್ಲಿ ನಡೆಯುವವರಿಗೆ ಮಾತ್ರ ಸಾಧ್ಯ, ಆಧ್ಯಾತ್ಮ ಎಂದರೆ ಎಲ್ಲವೂ ನನ್ನವರು ಎಲ್ಲರಿಗೂ ನಾನು ಬದುಕಬೇಕು ಸಮಾಜವೇ ಸರ್ವಸ್ವ ಎಂದು ಬದುಕುವುದೇ ಆಧ್ಯಾತ್ಮ ಅಂತರಂಗದ ಹಸಿವನ್ನು ನೀಗಿಸಿ ಬಹಿರಂಗದ ಸಮಸ್ಯೆಗಳನ್ನು ಪರಿಹರಿಸಿ ಸರ್ವಲ್ಲೋದ್ರಲ್ಲೂ ದೇವರನ್ನು ಕಾಣುವ ಮತ್ತು ದೇವರನ್ನು ಅನುಗ್ರಹಿಸುವ ಕೆಲಸವನ್ನು ಶ್ರೀ ಶೇಷಾವಧೂತರು ಮಾಡಿಕೊಂಡು ಬಂದಿದ್ದಾರೆ ಎಂದು ಸ್ಮರಿಸಿದರು.
ಕಳೆದ 131 ವರ್ಷಗಳಿಂದ ನಿರಂತರವಾಗಿ ಶ್ರೀಮಠದಲ್ಲಿ ಆರಾಧನೆ ಅಭಿಷೇಕ ಕೀರ್ತನೆ ಭಜನೆ ಸತ್ಸಂಗ ಸಾಮೂಹಿಕ ದಾಸೋಹವನ್ನು ಸಾವಿರಾರು ಜನಕ್ಕೆ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಸಂತೋಷದಾಯಕ ಎಂದು ಶಾಂತವೀರ ಸ್ವಾಮೀಜಿಯವರು ಮೆಚ್ಚುಗೆಯ ಮಾತನಾಡಿದರು. ದಾಸೋಹವೇ ದೇವದಾಮ ಎಂಬ ನಾಣ್ಣುಡಿಯನ್ನು ಪಾಲಿಸುತ್ತಿರುವ ಶ್ರೀಮಠದ ಭಕ್ತರ ಸೇವೆ ಅನನ್ಯ ಎಂದು ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.
ವನಕಲ್ಲು ಮಠದ ಶ್ರೀ ರಮಾನಂದ ಸ್ವಾಮೀಜಿ ಅವರು ಧ್ವಜಪೂಜೆ ನೇರವೇರಿಸಿ ದಾಸೋಹಕ್ಕೆ ಚಾಲನೆ ನೀಡಿದರು ಶ್ರೀಮಠದ ಸಮಿತಿಯ ಅಧ್ಯಕ್ಷರಾದ ಗುರುಪ್ರಕಾಶ್ ಅವರು ಕಾರ್ಯದರ್ಶಿಗಳಾದ ಹುಚ್ಚಪ್ಪನವರು ಹಾಗೂ ಆಶ್ರಮದ ಟ್ರಸ್ಟಿನ ಪದಾಧಿಕಾರಿಗಳು ಭಕ್ತರೊಂದ ಭಾಗವಹಿಸಿದ್ದರು ಸುಮಾರು 5000 ಜನಕ್ಕೆ ದಾಸೋ ವ್ಯವಸ್ಥೆಯನ್ನು ಅತ್ಯಂತ ಹೆಚ್ಚುಕಟ್ಟಾಗಿ ನೆರವೇರಿಸಿದರು