April 17, 2024

Chitradurga hoysala

Kannada news portal

ಭದ್ರಾ ನೀರಿಗಾಗಿ ಚಿತ್ರದುರ್ಗ ಬಂದ್ ಸಂಪೂರ್ಣ ಯಶಸ್ಸು : ಚಿತ್ರದುರ್ಗ ಬಂದ್ ಮಾಡಿದ ವಿವಿಧ ಪರ ಸಂಘಟನೆಗಳು

1 min read

ಚಿತ್ರದುರ್ಗ ಬಂದ್ ಮಾಡಿದ ವಿವಿಧ ಪರ ಸಂಘಟನೆಗಳು

ಚಿತ್ರದುರ್ಗ ಬಂದ್ ಗೆ ಬೆಂಬಲ ನೀಡಿದ ಅಂಗಡಿ ಮುಗ್ಗಟ್ಟು ಮಾಲೀಕರು

ಭದ್ರಾ ನೀರಿಗಾಗಿ ಚಿತ್ರದುರ್ಗ ಬಂದ್ ಸಂಪೂರ್ಣ ಯಶಸ್ಸು

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ಭದ್ರಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಚಿತ್ರದುರ್ಗ ಬಂದ್ ಗೆ ಕರೆ ನೀಡಿರುವ ಹಿನ್ನಲೆ ಚಿತ್ರದುರ್ಗ ಬಂದ್ಗೆ ವ್ಯಾಪಕ ಬೆಂಬಲ ಸಿಕಿದೆ.

ನಗರದ ಗಾಂಧಿ ವೃತ್ತದ ಬಳಿ ಬೆಳ್ಳಂ ಬೆಳಗಿಂದಲೇ ಅನೇಕ ಸಂಘಟನೆಗಳು ಭಾಗಿಯಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

ನಗರದ ಬಿಡಿ ರಸ್ತೆಯಲ್ಲಿರುವಂತಹ ಅಂಗಡಿ ಮುಂಗಟ್ಟುಗಳ ಮಾಲೀಕರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಖಾಸಗಿ ಬಸ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘ,ಬೀದಿಬದಿ ವ್ಯಾಪಾರಿಗಳ ಸಂಘ, ವಿದ್ಯಾರ್ಥಿಗಳ ಸಂಘಟನೆ, ಮಹಿಳಾ ಸಂಘಟನೆ, ವಕೀಲರು ಸಂಘ, ದಲಿತ ಸಂಘಟನೆಗಳು, ಹೂ ಬೆಳೆಗಾರರು ಸಂಘ, ತರಕಾರಿ ಮತ್ತು ಹಣ್ಣು ಮಾರಾಟಗಾರರ ಸಂಘ, ವಿಜಯ ಸೇನೆ ಸಂಘಟನೆ,ಕರ್ನಾಟಕ ರಕ್ಷಣಾ ವೇದಿಕೆ, ಕಟ್ಟಡ ಹಾಗೂ ಇತರೆ ನಿರ್ಮಾಣ ಸಂಘಟನೆ, ಕಾರ್ಮಿಕರ ಸಂಘಟನೆ,ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಘಟನೆ ಇತರೆ ಸಂಘಟನೆಗಳು ಸೇರಿಕೊಂಡು ಎಂದು ಚಿತ್ರದುರ್ಗ ನಗರವನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಚಿತ್ರದುರ್ಗ ಬಂದ್ ಗೆ ಬೆಂಬಲಿಸಿದ್ದಾರೆ.

ರೈತ ಮುಖಂಡರು ಸರ್ಕಾರದ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಿರ್ಲಕ್ಷದಿಂದಾಗಿ ಕುಂಠಿತವಾಗಿದೆ 25 ವರ್ಷಗಳಾಗುತ್ತಾ ಬಂದಿದ್ದರು ಸಹ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ,
ಕಳೆದ ಎಂಟು ವರ್ಷಗಳಿಂದ ಒಂದೂವರೆ ಕಿಲೋಮೀಟರ್ ಭೂ ಸ್ವಧೀನಾ ಮಾಡಿಕೊಳ್ಳಲು ಸಾಧ್ಯವೇ ಆಗದಂತಹ ಪರಿಸ್ಥಿತಿ ಸರ್ಕಾರಕ್ಕೆ ಬಂದೊಡ್ಡಿದೆ.

ಎತ್ತಿನಹೊಳೆ ಯೋಜನೆಗೆ ದುಡ್ಡು ಸುರಿಯುತ್ತಿರುವ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನ ತೋರುತ್ತಿದೆ. ನೀರು ಹರಿಸುವ ಯೋಜನೆಗಳನ್ನು ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತರು ಗುಡುಗಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿಗಳ ಅನುದಾನ ಒದಗಿಸುವುದಾಗಿ ಪ್ರಮಾಣ ಮಾಡಿದ್ದರು. ಇದುವರೆಗೂ ಅದು ಈಡೇರಿಲ್ಲ ದೇಶದ ಪ್ರಜಾಪ್ರಭುತ್ವ ವಾರಸುದಾರಿಕೆ ಹೊಂದಿರುವ ಪ್ರಧಾನಿಯವರೇ ಮಾತು ತಪ್ಪಿದರೆ ಹೇಗೆ ಎಂಬುದು ಪ್ರಶ್ನೆಯಾಗಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಮೀಸಲಿಡಿರುವ ಅನುದಾನದಲ್ಲಿ ಮೇಲ್ದಂಡೆಗೆ ವಿನಿಯೋಗ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬೆಳಗಿಂದಲೇ ನಡೆದಂತಹ ಚಿತ್ರದುರ್ಗ ಬಂದ್ ಬೆಂಬಲಕ್ಕೆ ವಿವಿಧ ಸಂಘಟನೆಗಳು ಕೂಡ ಬೆಂಬಲ ನೀಡಿದ್ದರು, ಈ ಒಂದು ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಿತ್ರದುರ್ಗದ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದೆ.

ಕೆಪಿಸಿಸಿ ಕಾರ್ಯಧ್ಯಕ್ಷ ಬಿ.ಎನ್ ಚಂದ್ರಪ್ಪ ಗೆ ರೈತರಿಂದ ತರಾಟೆ

ಕೆಪಿಸಿಸಿ ಕಾರ್ಯಧ್ಯಕ್ಷ ಬಿ.ಎನ್ ಚಂದ್ರಪ್ಪರನ್ನು ರೈತರು ತರಾಟಗೆ ತೆಗೆದುಕೊಂಡಿದ್ದಾರೆ.

ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಟಾನಕ್ಕೆ ಆಗ್ರಹಿಸಿ ಬಂದ್ ಗೆ ಕರೆ ನೀಡಿದ್ದು ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದರು, ಪ್ರತಿಭಟನ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಚಿತ್ರದುರ್ಗ ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಅವರು ಆಗಮಿಸಿ ಬಾಷಣ ಮಾಡಿತ್ತಿದ್ದು ಈ ವೇಳೆ ರೈತರು ಬಿ.ಎನ್ ಚಂದ್ರಪ್ಪ ಅವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ನೀವು ಸಂಸದರಾಗಿದ್ದಾಗ ಯಾಕೆ? ಭದ್ರಾ ಮೇಲ್ದಂಡೆ ಯೋಜನೆಗೆ ಕಾಮಗಾರಿ ವೇಗ ಮಾಡಿಲ್ಲ. ಹಾಗೂ ಯೋಜನೆ ಬಗ್ಗೆ ಗಮನ ಹರಿಸದ ನೀವು ಈಗ ಚುನಾವಣೆ ಹತ್ತಿರ ಬಂದಿದ್ದರಿಂದ ಗಿಮಿಕ್ ಗಾಗಿ ಇಲ್ಲಿ ಬಂದಿದ್ದೀರಿ ಎಂದು ರೈತರು ಬಿ.ಎನ್ ಚಂದ್ರಪ್ಪ ಅವರಿಗೆ ಕೇಳಿದರು.

ನಿಮ್ಮ ರಾಜಕೀಯವನ್ನು ವಿಧಾನ ಸೌಧ, ಪಾರ್ಲಿಮೆಂಟ್ ನಲ್ಲಿ ಮಾತನಾಡಿ, ಇಲ್ಲಿ ಯಾಕೆ? ಬಂದಿದ್ದೀರಿ, ಹಿಂದೆ ಸಂಸದರಾಗಿದ್ದಾಗಲೂ ಇದೇ ರೀತಿ ಹೇಳಿ ರೈತರನ್ನು ಗಡೆಗಣಿಸಿದ್ದು ಎರಡು ಪಕ್ಷಗಳು ರೈತರಿಗೆ ಮೋಸ ಮಾಡುತ್ತಿದ್ದಾಗಿ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆಯಲ್ಲಿ ಮುಜುಗರಕ್ಕೆ ಒಳಗಾದ ಬಿ.ಎನ್ ಚಂದ್ರಪ್ಪ ಅವರು ನಗು ನಗುತ್ತಲೆ ಬಾಷಣ ಮುಕ್ತಾಯಗೊಳಿಸಿ ಸ್ಥಳದಿಂದ ತೆರಳಿದರು.

ಚಿತ್ರದುರ್ಗ ಬಂದ್ ಗೆ ವಿಶೇಷ ಚೇತನ ಸಾಥ್

ಚಿತ್ರದುರ್ಗದಲ್ಲಿ ವಿಶೇಷ ಚೇತನನೊಬ್ಬ ಭದ್ರಾ ನೀರಿಗಾಗಿ ರಸ್ತೆಗಿಳಿದು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಗಾಂಧಿ ವೃತ್ತದ ಬಳಿಜಿಲ್ಲಾ ನೀರಾವರಿ ಹೋರಾಟ ಸಮಿತಿಯ ವತಿಯಿಂದ ಭದ್ರಾ ಮೇಲ್ದಂಡೆ ಶೀಘ್ರ ಕಾರ್ಯಾನುಷ್ಟಾನಕ್ಕೆ ಆಗ್ರಹಿಸಿ ಸ್ವಯಂ ಪ್ರೇರಿತ ಚಿತ್ರದುರ್ಗ ಬಂದ್ ಗೆ ಕರೆ ನೀಡಿದ್ದು , ಈ ಒಂದು ಪ್ರತಿಭಟನೆಯಲ್ಲಿ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ಎಂ.ಶಿವಣ್ಣ ಎಂಬ ವಿಶೇಷ ಚೇತನ ಪ್ರತಿಭಟನೆಗೆ ಬಂದು ಸಾಥ್ ಕೊಟ್ಟಿದ್ದು ಭದ್ರಾ ನೀರಿಗಾಗಿ ತನ್ನ ಬೆಂಬಲ ಸೂಚಿಸಿದ್ದಾರೆ.

ಬೆಳಗ್ಗೆಯಿಂದಲೇ ಬಿಸಿಲಿನಲ್ಲಿ ಕೂತ ಎಂ. ಶಿವಣ್ಣ ಖುದ್ದು ರೈತ ಕೂಡ ಆಗಿದ್ದು ಬಿಸಿಲನ್ನು ಸಹ ಲೆಕ್ಕಿಸದೆ ಕಾಲಿಲ್ಲದಿದ್ದರು ಸಹಾ ರಸ್ತೆಯಲ್ಲಿ ಕೂತು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.

ಭದ್ರಾ ನೀರಿಗಾಗಿ ನಡೆಸುತ್ತಿರುವ ಪ್ರತಿಭಟನೆಗೆ ದಾರಿಯಲ್ಲಿ ಹೋಗುತ್ತಿರುವಂತಹ ಸಾರ್ವಜನಿಕರಿಗೆ ಬೆಂಬಲ ಕೊಡುವಂತೆ ಮನವಿ ಸಹ ಮಾಡುತ್ತಿದ್ದು, ಕಾಲುಲ್ಲಿದಿರುವ ಎಂ ಶಿವಣ್ಣ ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿದ್ದು ಈ ಒಂದು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

About The Author

Leave a Reply

Your email address will not be published. Required fields are marked *