ನೀರಾವರಿಗೆ ಮೊದಲ ಆದ್ಯತೆ ನೀಡಬೇಕು ಶಾಸಕ ಎನ್ ವೈ ಗೋಪಾಲಕೃಷ್ಣ ಜನತೆಗೆ ಕಿವಿಮಾತು
1 min read
ನೀರಾವರಿಗೆ ಮೊದಲ ಆದ್ಯತೆ ನೀಡಬೇಕು ಶಾಸಕ ಎನ್ ವೈ ಗೋಪಾಲಕೃಷ್ಣ ಜನತೆಗೆ ಕಿವಿಮಾತು
ಚಿತ್ರದುರ್ಗ ಹೊಯ್ಸಳ ನ್ಯೂಸ್ /
ಚಳ್ಳಕೆರೆ :
ತಾಲೂಕಿನ ನಾಯಕನಹಟ್ಟಿ ಹೋಬಳಿಯ ಸಮೀಪದ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ 2022- 23ನೇ ಸಾಲಿನ ಎಸ್ ಸಿ ಎ ಹಾಗೂ ಎಸ್ ಸಿ ಎಸ್ ಪಿ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯಗಳಿಗಾಗಿ 60 ದಿನಗಳ ಚರ್ಮ ವಸ್ತುಗಳ ತರಬೇತಿ ಶಿಬಿರದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಎಲ್ಲಾ ಅರ್ಹ ಫಲಾನುಭವಿಗಳನ್ನು ತಲುಪಿವೆ ಈ ದಿನ ತೊರೆಕೋಲಮ್ಮಹಳ್ಳಿ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಇಲಾಖೆಯಿಂದ ಹೊಲಿಗೆ ಯಂತ್ರ ಪಡೆದ 30 ಜನ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಮಹಿಳೆಯರು ಜೀವನಮಟ್ಟವನ್ನ ಸುಧಾರಿಸಲು ಸಾಧ್ಯ.
ಗ್ರಾಮದ ಗ್ರಾಮಸ್ಥರು ಬೇಡಿಕೆಗಳಾದ ಸ್ಮಶಾನ ಭೂಮಿ, ಬಸ್ಸಿನಸಂಪರ್ಕ,ರಂಗುಮಂದಿರ,ತೊರೆಕೊಲಮ್ಮನಹಳ್ಳಿಯಿಂದ ನಾಯಕನಹಟ್ಟಿಯವರಿಗೆ ರಸ್ತೆಯ ಅಗಲೀಕರಣ ಇವುಗಳನ್ನು ಕಾಲಕ್ರಮೇಣ ಹಂತ ಹಂತವಾಗಿ ಕಾಮಗಾರಿಗಳನ್ನು ನಡೆಸಲಾಗುವುದು,
ಮುಖ್ಯವಾಗಿ ನಮ್ಮ ನಾಯಕನಹಟ್ಟಿ ಹೋಬಳಿಯಲ್ಲಿ ರೈತರು ಅತಿ ಹೆಚ್ಚು ಇರುವುದರಿಂದ ಕೃಷಿಗೆ ಮೊದಲ ಆದ್ಯತೆ ನೀಡಬೇಕು ಕೃಷಿಯಿಂದ ಮಾತ್ರ ಈ ಪ್ರದೇಶದ ಜಲಜೀವನ ಸುಧಾರಿಸಲು ಸಾಧ್ಯ ಎಂದರು.
ಯುವಕರು ಬುದ್ದಿವಂತರಾಗಬೇಕು ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಡಬೇಕು ಶಿಕ್ಷಣದಿಂದ ಮುಂದುವರಿಯಲು ಸಾಧ್ಯ ಎಂದು ಯುವಕರಿಗೆ ತಿಳಿಸಿದರು.
ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರುಗಳು ಜೊತೆ ಈಗಾಗಲೇ ಚರ್ಚೆಯನ್ನು ಮಾಡಿದ್ದೇವೆ ಹಿರೇಮಲ್ಲನಹೊಳೆಯಿಂದ ರೇಖಲಗೆರೆ ವರಗೆ ಚಾನೆಲ್ ನಲ್ಲಿ ನೀರು ತರುವಂತ ಕೆಲಸವಾಗಬೇಕು. ಸುಮಾರು 7 -8 ಕೆರೆಗಳಿಗೆ ನೀರಿನ ಸೌಲಭ್ಯ ಒದಗಿಸಿದಂತಾಗುತ್ತದೆ ಆ ಕೆರೆಗಳಿಂದ ನೀರು ಬಂದರೆ ಇಲ್ಲಿಯ ಜನ ಜೀವನ ಸುಧಾರಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಾಲರಾಜ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ,ಬಂಡೆ ಕಪಿಲೆ ಓಬಣ್ಣ, ಅಬ್ಬೇನಹಳ್ಳಿ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ,ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಬಿ ಅನಿತಮ್ಮ ಜಿ ಎಂ ಜಯಣ್ಣ ಸದಸ್ಯರಾದ ಕೆ. ಜಿ .ತಿಪ್ಪೇಸ್ವಾಮಿ, ಬಿ .ಗುಂಡಪ್ಪ, ಅಬ್ಬೇನಹಳ್ಳಿ,ತೊರೆ ಕೊಲಮ್ಮನಹಳ್ಳಿ ವೆಂಕಟೇಶ್,ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ರೇವಣ್ಣ, ಗಾದ್ರಪ್ಪ ,ಸುಮಿತ್ರಮ್ಮ,ಮಂಜಳ , ಸಿದ್ದಲಿಂಗಮ್ಮ, ಮಾರಕ್ಕ, ಇದ್ದರು.