May 9, 2024

Chitradurga hoysala

Kannada news portal

ತೊರೆ ಕೊಲ್ಲಮ್ಮನಹಳ್ಳಿಯ ಬಿ.ನಾಗೇಶ್ ಗೆ ಪಿ ಹೆಚ್ ಡಿ ಪದವಿ

1 min read

ತೊರೆ ಕೊಲ್ಲಮ್ಮನಹಳ್ಳಿಯ ಬಿ.ನಾಗೇಶ್ ಗೆ ಪಿ ಹೆಚ್ ಡಿ ಪದವಿ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಮೊಳಕಾಲ್ಮುರು:

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬರುವ ತೊರೆ ಕೊಲ್ಲಮ್ಮನಹಳ್ಳಿಯ ದಲಿತ ಕಾಲೋನಿ ಯಲ್ಲಿ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನದೆಂದು ಅಂಗವಾಗಿ ಕಡುಬಡತನ ದಲ್ಲಿ ಹುಟ್ಟಿ ಪಿಹೆಚ್ ಡಿ ಪದವಿ ಪಡೆದ ನಾಗೇಶ್ ರವರಿಗೆ ದಲಿತ ಕಾಲೋನಿ ಯ ಹಿರಿಯ ಮುಖಂಡರು ಹಾಗೂ ಮಹಿಳೆಯರು ಸನ್ಮಾನಸಿದ್ದರು.

ಈ ವೇಳೆ ಮಧು ಮಾತನಾಡಿ ಅಂಬೇಡ್ಕರ್ ರವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗಬೇಕು ಅವರು ಜ್ಞಾನತೋರಿದ ಆಸಕ್ತಿ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಾಜದ ಬೆಳವಣಿಗೆ ಶಿಕ್ಷಣವನ್ನು ಉಪಯೋಗಿಸಿಕೊಂಡ ರೀತಿ ದೇಶಕ್ಕೆ ತೋರಿದ ಗೌರವ ಮತ್ತು ದೇಶಪ್ರೇಮ ಹಾಗೂ ಇಡೀ ಭಾರತವನ್ನು ಸಮಗ್ರವಾಗಿ ನೋಡಿದ ಪರಿ ಎಲ್ಲವು ಅನುಕರಣೆಯ ಮತ್ತು ಆದರ್ಶ ಅಂತಹ ಮಹಾನ್ ಸ್ಫೂರ್ತಿಯ ಮಾನವತಾವಾದಿಯ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಪ್ರಕಾರ ಸಮಾಜಕ್ಕೆ ಅನನ್ಯ ಸಾಮರ್ಥ್ಯವನ್ನು ಸಾದಿಸಲು ನೇರವಾಗುವುದೇ ಶಿಕ್ಷಣದ ಗುರಿಯಗಬೇಕು ಉದಾರಣೆ ನಮ್ಮ ಸಹೋದರ ಕಡುಬಡತನದಲ್ಲಿ ಪಿಹೆಚ್ಡಿ ಪದವಿ ಸಾಧನೆ ಮಾಡಿದ್ದಾರೆ. ಇನ್ನು ಎಚ್ಚು ಅಲವು ಪದವಿಗಳು ಬರಲಿ ಹಾಗೆ ಅಂಬೇಡ್ಕರ್ ರವರ ಕನಸು ನನಸಾಗಲಿ ಹಾಗೆ ತಾಯಿ ತಿಪ್ಪಮ್ಮ ತಂದೆ ಬಸವರಾಜ್ ಆರ್ ಇವರ ಪುತ್ರ ಕನ್ನಡ ವಿಶ್ವವಿದ್ಯಾಲಯ ಹಂಪಿ ಮಾರ್ಗದರ್ಶಕರು ಡಾ. ಅಶೋಕ ಕುಮಾರ್ ರಂಜೆರ ಪಿಹೆಚ್ಡಿ ಅಧ್ಯಯನದ ವಿಷಯ ಕನ್ನಡ ಭಾಷೆ ಅಭ್ಯಾಸ ಪುಸ್ತಕಗಳ ಭಾಷಿಕ ಮತ್ತು ಶೈಕ್ಷಣಿಕ ಅಧ್ಯಯನ ಕುಲಪತಿಗಳಾದ ಡಾ. ಡಿ ವಿ ಪರಮಾಶಿವಮೂರ್ತಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್ ರವರು ಪಿಹೆಚ್ಡಿ ಪದವಿಯನ್ನು ಪ್ರಧಾನ ಮಾಡಿದ್ದರು.

ಈ ಸಂಧರ್ಭದಲ್ಲಿ ಮಾಜಿ ಗ್ರಾಮ ಪಂ ಉಪಾಧ್ಯಕ್ಷರಾದ ಆರ್ ಬಸವರಾಜ್ ತಿಮ್ಮಶೆಟ್ಟಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಸುಮಿತ್ರಾಮ್ಮ ಮಾರಕ್ಕ ಹಾಗೂ ಮಧು ನಾಗೇಶ್ ವೆಂಕಟೇಶ್ ಪೆನ್ನಾಶಿ ದುರುಗೇಶ್ ಮಂಜುನಾಥ್ ಎಚ್ ಕುಮಾರ್ ಬಸವರಾಜ್ ಹಾಗೂ ದಲಿತ ಕಾಲೋನಿಯ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *