ಎಡಿಎಲ್ಆರ್ ಅಧಿಕಾರಿಯ ಚಾಲಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಪರಾರಿಯಾದ ಅಧಿಕಾರಿ
1 min readಎಡಿಎಲ್ಆರ್ ಅಧಿಕಾರಿಯ ಚಾಲಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಪರಾರಿಯಾದ ಅಧಿಕಾರಿ
ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ :
ನಗರದಲ್ಲಿ ಇರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿ ಮೇಲೆ ಲೋಕಾಯುಕ್ತರ ದಾಳಿ ನಡೆಸಿದ್ದಾರೆ.
ತಾಲೂಕಿನ ಓಬಳಾಪುರ ಗ್ರಾಮದ ರೈತ ಕೆ. ಜಿ.ಜಯಣ್ಣ ತಮ್ಮ ಜಮೀನಿನ ಪಾಣಿಯನ್ನು ಪ್ರತ್ಯೇಕವಾಗಿ ಮಾಡಿಸಿಕೊಳ್ಳಲು, ಒಂದು ವರ್ಷದಿಂದ ತಾಲೂಕು ಕಚೇರಿಗೆ ಅಲೆದಾಡಿದ್ದು ಕೊನೆಗೆ ಸರ್ವೆ ಇಲಾಖೆಗೆ ಬರುತ್ತದೆ ಎಂದು ಹೇಳಿದ್ದಾರೆ. ಭೂಮಪನ ಇಲಾಖೆಯ ಎಡಿಎಲ್ಆರ್ ಗಂಗಣ್ಣ ರೈತನಿಗೆ 15 ಸಾವಿರ ಬೇಡಿಕೆ ಇಟ್ಟಿದ್ದು. ಕೊನೆಗೆ 10,000 ಕ್ಕೆ ಒಪ್ಪಿಕೊಂಡಿದ ರೈತ ಲೋಕಾಯುಕ್ತರಿಗೆ ದೂರು ನೋಡಿದ್ದಾನೆ.
ಎಡಿಎಲ್ಆರ್ ಗಂಗಣ್ಣನಿಗೆ ರೈತ ಕೆ.ಜಿ.ಜಯಣ್ಣ ಹಣ ನೀಡಲು ಬಂದಾಗ, ಕಾರಿನ ಚಾಲಕ ಕಿರಣ್ ಗೆ 10ಸಾವಿರ ನೀಡು ಎಂದಾಗ, ಹಣವನ್ನು ರೈತ ಚಾಲಕನಿಗೆ ನೀಡುತ್ತಿದ್ದಾಗ. ಲೋಕಾಯುಕ್ತರು ಹಣ ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದು ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಎಡಿಎಲ್ಆರ್ ಗಂಗಣ್ಣ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.ವಾಹನ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಎಸ್ ಪಿ ವಾಸುದೇವರಾಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೃತ್ಯುಂಜಯ, ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಶಿಲ್ಪ ವಸಂತ್ ಕುಮಾರ್, ಮಂಜುನಾಥ್ ದಾಳಿಯಲ್ಲಿ ಭಾಗವಹಿಸಿದ್ದರು.