May 17, 2024

Chitradurga hoysala

Kannada news portal

ನಾವು ಬದುಕಿರುವುದು ಅನ್ನ ತಿಂದೆ ಹೊರತು ಮಣ್ಣು ತಿಂದಲ್ಲ ಸರ್ಕಾರ ರೈತರಿಗೆ ಎಷ್ಟು ಸವಲತ್ತು ಒದಗಿಸಬೇಕಿತ್ತೊ ಅಷ್ಟನ್ನು ಒದಗಿಸದೆ ವಿಫಲವಾಗಿದೆ: ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ

1 min read

ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ನಾವು ಬದುಕಿರುವುದು ಅನ್ನ ತಿಂದೆ ಹೊರತು ಮಣ್ಣು ತಿಂದಲ್ಲ ಸರ್ಕಾರ ರೈತರಿಗೆ ಎಷ್ಟು ಸವಲತ್ತು ಒದಗಿಸಬೇಕಿತ್ತೊ ಅಷ್ಟನ್ನು ಒದಗಿಸದೆ ವಿಫಲವಾಗಿದೆ:
ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ

ವರದಿ : ಕಾವೇರಿ ಮಂಜಮ್ಮನವರ್,

ಚಿತ್ರದುರ್ಗ ಹೊಯ್ಸಳ.

ಹೊಸದುರ್ಗ/ ಸಾಣೆ ಹಳ್ಳಿ :

ಸಮ್ಮೇಳನದ ಸರ್ವಾಧ್ಯಕ್ಷರದ ಪಂಡಿತರಾಧ್ಯ ಶ್ರೀಗಳು ನಿಜವಾದ ಧರ್ಮ ಗುರುಗಳು ಎಂದು ನಾನು ಹೇಳಲು ಬಯಸುತ್ತೇನೆ.ಪೂಜ್ಯರು ಒಂದು ಮಠದ ಮುಖ್ಯಸ್ಥರು ಕೂಡ ಹೌದು ಪ್ರಬುದ್ಧ ಲೇಖಕರು ವಿದ್ವಾಂಸರಾಗಿದ್ದಾರೆ.ವೈಚಾರಿಕ ಚಿಂತಕರಾಗಿದ್ದಾರೆ ಎಂದು ಕಾಸಾಪ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಗೋ.ರು.ಚನ್ನಬಸಪ್ಪ ಹೇಳಿದರು.

ಹೊಸದುರ್ಗ ತಾಲೂಕು ಸಾಣೆ ಹಳ್ಳಿಯಲ್ಲಿ ಶುಕ್ರವಾರ ಆರಂಭವಾದ ಎರಡು ದಿನದ ಚಿತ್ರದುರ್ಗ ಮತ್ತು ಚಿಕ್ಕಮಂಗಳೂರಿನ ಪ್ರಥಮ ಅಂತರ್ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.12ನೇ ಶತಮಾನದ ಶರಣರ ವಿಚಾರಗಳಿಗೆ ತಮ್ಮನ್ನ ಸಂಪೂರ್ಣವಾಗಿ ಸಮರ್ಪಿಸಿಕೊಂಡಂತಹ ಪೂಜ್ಯರು 120 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.ಅವರ ಸಾಹಿತ್ಯ ಸೇವೆ ಮನಿಸಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾ. ನೀಡಿ ಗೌರವಿಸಿದೆ ಎಂದರು.

ಪೂಜ್ಯರು ಶ್ರೀಮಠದ ಅಧಿಕರವಹಿಸಿಕೊಂಡು 48 ವರ್ಷಗಳಾಗಿವೆ.ಇಷ್ಟು ವರ್ಷಗಳ ಅವಧಿಯಲ್ಲಿ ಈ ಭಾಗದಲ್ಲಿ ನಡೆದಂತಹ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಆರ್ಥಿಕ ಬದಲಾವಣೆ ನೋಡಿದರೆ ಯಾರಿಗಾದರೂ ಸಹ ಸೋಜಿಗ ಅನಿಸುತ್ತದೆ ಎಂದರು.

ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಈ ಎರಡು ಜಿಲ್ಲೆಗಳು ಕೂಡ ಕನ್ನಡಿಗರಿಗೆ ಅಪಾರ ಕೊಡುಗೆ ಕೊಟ್ಟಂತಹ ಜಿಲ್ಲೆಗಳಾಗಿವೆ.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಕ್ಕಮಗಳೂರಿನಲ್ಲಿ ನಡೆಸುವಂತೆ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷರು ವಿಚಾರ ಮಾಡಬೇಕು ಎಂದರು.

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾಕ್ಟರ್ ಮಹೇಶ್ ಜೋಶಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತ್ನಡಿದ ಅವರು ಕನ್ನಡವನ್ನ ನಿತ್ಯ ನಮ್ಮ ಬದುಕಿನಲ್ಲಿ ಹೆಚ್ಚು ಹೆಚ್ಚು ಬಳಸುವುದರಿಂದ ಉಳಿಯುತ್ತೆ ವಿನಹ ಮತ್ತೆ ಯಾವ ಕಾರಣದಿಂದ ಅಲ್ಲ ಇತ್ತೀಚಿನ ತಾಯಂದಿರು ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣದ ವ್ಯಮೋಹವನ್ನ ಹೆಚ್ಚುಸುತ್ತಿದ್ದಾರೆ ಇದು ದುರಂತ ಮನೆಯೇ ಮೊದಲ ಪಾಠ ಶಾಲೆಯಾಗಬೇಕು ತಾಯಿಯೇ ಮೊದಲ ಗುರುವಾಗಿ ನಮ್ಮ ಸಂಸ್ಕೃತಿ ಸಂಸ್ಕಾರ ಎಲ್ಲವನ್ನ ಕಾಪಾಡುವ ಜವಾಬ್ದಾರಿ ಅವರಿಗೆ ಇರಬೇಕು ಎಂದರು.

ನಮ್ಮ ನಾಡು ಕೃಷಿಕರ ನಾಡು ಕೃಷಿಕರು ಈ ದೇಶದ ಬೆನ್ನೆಲುಬು ಕೃಷಿಕರು ಹೋರಾಟ ಮಾಡಿದರೆ ನಾಡಿನ ಪುಂಗಿ ನಡೆಯುವುದಿಲ್ಲ ನಾವು ಬದುಕಿರುವುದು ಅನ್ನ ತಿಂದೆ ಹೊರತು ಮಣ್ಣು ತಿಂದಲ್ಲ ಸರ್ಕಾರ ರೈತರಿಗೆ ಎಷ್ಟು ಸವಲತ್ತು ಒದಗಿಸಬೇಕಿತ್ತೊ ಅಷ್ಟನ್ನು ಒದಗಿಸದೆ ವಿಫಲವಾಗಿದೆ.ರೈತರಿಗೆ ನೀಡುವ ಸವಲತ್ತುಗಳಲ್ಲಿ ತಾರತಮ್ಯ ಮಾಡದೆ ನೀಡುವ ಸೌಲಭ್ಯಗಳನ ನೀಡಲು ಮುಂದಾಗಬೇಕು ಎಂದರು.

ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಗಳು.
ಸಾಣೇಹಳ್ಳಿ ಶ್ರೀ ಮಠ

ತಾಲೂಕಿನ ಬಾಗೂರು ಗ್ರಾಮದ ಶ್ರೀ ಚನ್ನಕೇಶ್ವರ ಸ್ವಾಮಿ ದೇವಾಲಯದಲ್ಲಿ ಇತ್ತೀಚಿಗೆ ನಡೆದ ವೈಕುಂಠ ಏಕಾದಶಿ ಸಂದರ್ಭದಲ್ಲಿ ದೇವರ ದರ್ಶನಕ್ಕಾಗಿ ಹೋಗಿದ್ದಾಗ ನಮಗೆ ಅಲ್ಲಿನ ಗರ್ಭಗುಡಿ ಒಳಗೆ ಪ್ರವೇಶಕ್ಕೆ ಅವಕಾಶವೇ ನೀಡಲಿಲ್ಲಿ.ಅರ್ಚಕರ ಕುಟುಂಬದ ಹೆಣ್ಣು ಮಕ್ಕಳು ಹೋಗುಲು ಅವಕಾಶವಿದೆ ಅದೇ ಸ್ವಾಮೀಜಿಗಳಿಗೆ ಪ್ರವೇಶ ನೀಡಲಿಲ್ಲ ಬಹುಶಹ ಕುರುಬ ಸಮುದಾಯದ ಮಠಾಧೀಶರು ಎನ್ನುವ ಕಾರಣಕ್ಕೆ ಏನೋ ಬಿಡಲಿಲ್ಲ.ದೇವಸ್ಥಾನದಿಂದ ನಿರ್ಗಮಿಸಿದ ಬಳಿಕ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು ಎಂಬ ಮಾತನ್ನು ಕೇಳಿದ ನನಗೆ ಮತ್ತೆ ಯಾವತ್ತೂ ಆ ದೇವಸ್ಥಾನಕ್ಕೆ ಹೋಗಬಾರದು ಅನಿಸಿದೆ ಎಂಬ ಮಾತನಾ ವೇದಿಕೆ ಮೇಲೆ ಗದಗದಿತರಾಗಿ ಹೇಳಿದರು.

ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಗಳು
ಕನಕ ಗುರು ಪೀಠ ಕೆಲ್ಲೋಡು

ಮೀಸಲಾತಿ ಕೇಳಬೇಕಾದವರೇ ಸುಮ್ಮನಿದ್ದಾರೆ ಆದರೆ ಇಂದು ಉಳ್ಳವರೆ ಮತ್ತು ಬಲಿಷ್ಠರೇ ಮೀಸಲಾತಿ ಕೇಳುತ್ತಿರುವುದು ಬೇಸರದ ವಿಷಯ. ಸಮುದಾಯಗಳು ಮುನ್ನಲಗೇ ಬರಬೇಕಾದರೆ ಶಿಕ್ಷಣ ಮತ್ತು ದಾಸೋಹ ಮುಖ್ಯವಾಗಿ ಬೇಕಾಗಿದೆ ಮೀಸಲಾತಿಗಾಗಿ ಉಳ್ಳವರು ಮತ್ತು ಬಡವರ ನಡುವೆ ದೊಡ್ಡ ಕಂದಕವಿದೆ ಉಳ್ಳವರ ಮುಂದೆ ಇಲ್ಲದವರು ಮೀಸಲಾತಿಯಿಂದ ವಂಚಿತರಾಗಿ ಮೂಲೆಗುಂಪಾಗುತ್ತಿದ್ದಾರೆ.

ಬಸವ ಮೂರ್ತಿ ಮಾದರ ಚನ್ನಯ್ಯ.
ಮಾದರ ಚನ್ನಯ್ಯ ಗುರು ಪೀಠ.

ಕನ್ನಡ ಉಳಿಸುವ ಬೆಳೆಸುವ ಕೆಲಸವನ್ನ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ ಈ ನಿಟ್ಟಿನಲ್ಲಿ ನಾಮಫಲಕಗಳಲ್ಲಿ ಶೇಕಡ 60 ಕನ್ನಡವನ್ನ ಬಳಸುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ ಇಂದು ಚಿಕ್ಕ ಮಕ್ಕಳಿಗೆ ಇಂಗ್ಲಿಷ್ ಕಲಿಸಲಾಗುತ್ತಿದೆ ನಾನು ಇಂಗ್ಲಿಷ್ ವಿರೋಧಿಯಲ್ಲ ಆದರೆ ಊಟಕ್ಕೆ ಉಪ್ಪಿನಕಾಯಿಯಂತೆ ಇರಲಿ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಹೇಳಿದರು.

ಡಿ ಸುಧಾಕರ್.
ಜಿಲ್ಲಾ ಉಸ್ತುವಾರಿ ಸಚಿವ

ಕಾರ್ಯಕ್ರಮದಲ್ಲಿ ಭಗಿರಥ ಗುರುಪೀಠದ ಪುರುಷೋತ್ತಮ ನಂದಪುರಿ ಸ್ವಾಮೀಜಿಗಳು. ಚಿಕ್ಕಮಗಳೂರಿನ ಬಸವ ತತ್ವ ಪೀಠದ ಬಸವ ಮರಳು ಸಿದ್ಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬೆಳಕಿನೆಡೆಗೆ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಸಮ್ಮೇಳನದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ನಾಡೋಜ ಡಾ. ಮಹೇಶ್ ಜೋಶಿ ಪುಷ್ಪ ನಮನ ಸಲ್ಲಿಸಿದರು.ಶಾಸಕ ಬಿ ಜಿ ಗೋವಿಂದಪ್ಪ ಸಮ್ಮೇಳನದ ಅಧ್ಯಕ್ಷರ ಭಾಷಣದ ಪ್ರತಿಯನ್ನ ಬಿಡುಗಡೆಗೊಳಿಸಿದರು. ಮಾಜಿ ಸಂಸದ ಬಿಎನ್ ಚಂದ್ರಪ್ಪ ಪುಸ್ತಕಗಳನ್ನ ಲೋಕಾರ್ಪಣೆಗೊಳಿಸಿದರು. ತರೀಕೆರೆ ಶಾಸಕ ಶ್ರೀನಿವಾಸ್ ಪುಸ್ತಕ ಮಳಿಗೆಗಳನ್ನ ಉದ್ಘಾಟನೆ ಮಾಡಿದರು ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಶ್ರೀನಿವಾಸ್ ಪ್ರಾಸ್ತವಿಕವಾಗಿ ಮಾತನಾಡಿದರು.

About The Author

Leave a Reply

Your email address will not be published. Required fields are marked *