ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ ನೀಡಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ : ತಹಶೀಲ್ದಾರ್
1 min readಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ ನೀಡಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ : ತಹಶೀಲ್ದಾರ್
ಚಿತ್ರದುಗ೯ಹೊಯ್ಸಳ ನ್ಯೂಸ್/
ಚಳ್ಳಕೆರೆ:
ಸಂವಿಧಾನದ ಪಿತಾಮಹ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ, ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಿದ ಮಹಾನ್ ವ್ಯಕ್ತಿ ಎಂದು ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೆಹಾನ್ ಪಾಷಾ ಹೇಳಿದರು.
ಅವರು ನಗರದ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಸಹಯೋಗದಲ್ಲಿ ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರ ರಥಯಾತ್ರೆಯನ್ನು ಅದ್ದೂರಿಯಾಗಿ ಬಳ್ಳಾರಿ ರಸ್ತೆಯಿಂದ ಚಳ್ಳಕೆರೆ ನಗರಕ್ಕೆ ಬರಮಾಡಿಕೊಂಡರು. ನಗರದ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ, ಮೂಲಕ ಜಗಜೀವನ್ ರಾಮ್ ವೃತ್ತದಿಂದ ಸಭಾ ಕಾರ್ಯಕ್ರಮಕ್ಕೆ ಭಾಗವಹಿಸಿ ಮಾತನಾಡಿದರು.
ಸಂವಿಧಾನ ಸ್ತಬ್ಧ ಚಿತ್ರ ರಥ ಜಾತ್ರೆಯು ಪ್ರತಿಯೊಂದು ಗ್ರಾಮ ಹಾಗೂ ಹೋಬಳಿ ಪಟ್ಟಣಗಳಿಗೆ ಸಂಚರಿಸುತ್ತಿದ್ದು. ಅದನ್ನು ಎಲ್ಲರೂ ಅದ್ದೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡು ಗೌರವ ಸೂಚಿಸುತ್ತಿದ್ದಾರೆ. ಇದರಿಂದ ಸಂವಿಧಾನದ ಮಹತ್ವವನ್ನು ಎಲ್ಲರೂ ತಿಳಿಯಬೇಕು. ಹಾಗೂ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ ನೀಡಿದ್ದು ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು. ಸಮಾಜದಲ್ಲಿ ಸದೃಢವಾಗಿ ಬೆಳೆಯಬೇಕು. ಹಾಗೂ ಸರ್ವ ಜನಾಂಗಕ್ಕೂ ನೀಡಿರುವ ಮತದಾನದ ಹಕ್ಕನ್ನು ಪಡೆದುಕೊಂಡು ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡುವುದು ನಿಮ್ಮ ಮತದಾನ ಹಕ್ಕಾಗಿರುತ್ತದೆ ಎಂದು ತಹಶೀಲ್ದಾರ್ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ ದೇಶದ ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕುಗಳನ್ನು ಯಾವುದೇ ಒಂದು ಜಾತಿ ಧರ್ಮಕ್ಕೆ ಮೀಸಲಾಗಿರದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೋಸ್ಕರ ಎಲ್ಲರಿಗೂ ಸಮಾನವಾಗಿ ಉತ್ತಮವಾದ ನ್ಯಾಯ ದೊರಕಿಸಿಸಲು ಸಂವಿಧಾನವನ್ನು ರಚಿಸಿದ್ದು. ಅದನ್ನು ಎಲ್ಲರೂ ಗೌರವಿಸಿ ಅದರ ಅಡಿಯಲ್ಲಿ ಜೀವನ ನಡೆಸು ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜಿ ರಾಘವೇಂದ್ರ, ಪೌರಾಯುಕ್ತ ಚಂದ್ರಪ್ಪ, ತಹಶೀಲ್ದಾರ್ ರೆಹಾನ್ ಪಾಷಾ, ಶಿಕ್ಷಣ ಅಧಿಕಾರಿ ಸುರೇಶ್, ವಕೀಲರಾದ ಪಾಲಯ್ಯ, ಸಿದ್ದರಾಜ್, ದಲಿತ ಸಂಘಟನೆಯ ವಿಜಯಕುಮಾರ್, ಚಂದ್ರು, ಮಂಜುಳಮ್ಮ, ಉಮೇಶ್ ಬ್ಯಾನೆರ್ಜಿ, ರವಿಕುಮಾರ್, ವೆಂಕಟೇಶ್, ವಿವಿಧ ದಲಿತ ಸಂಘಟನೆಗಳ ಮುಖಂಡರು, ಸಾರ್ವಜನಿಕರು, ಅಧಿಕಾರಿಗಳು, ಶಾಲಾ ಮಕ್ಕಳು, ಇದ್ದರು