April 17, 2024

Chitradurga hoysala

Kannada news portal

ಅಂಕಗಳಿಕೆಗಿಂತ ವ್ಯಕ್ತಿತ್ವ ಗಳಿಕೆ ಮುಖ್ಯವಾದುದ್ದು – ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಕಿವಿಮಾತು

1 min read

 

 

ಅಂಕಗಳಿಕೆಗಿಂತ ವ್ಯಕ್ತಿತ್ವ ಗಳಿಕೆ ಮುಖ್ಯವಾದುದ್ದು – ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಕಿವಿಮಾತು

 

ವರದಿ : ಕಾವೇರಿ ಮಂಜಮ್ಮನವರ್

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಸದುರ್ಗ :

ನೂರಕ್ಕೆ ನೂರರಷ್ಟು ಅಂಕಗಳಿಕೆಯೇ ಮುಖ್ಯವಲ್ಲ, ಅಂಕಗಳಿಕೆಗಿಂತ ವ್ಯಕ್ತಿತ್ವಗಳಿಕೆ ಮುಖ್ಯವಾದುದ್ದು ವಿದ್ಯಾರ್ಥಿಗಳಿಗೆ ವಿದ್ಯಾವಂತಿಕೆಗಿಂತ ನೀತಿವಂತಿಕೆ ಬಹಳ ಮುಖ್ಯ ಎಂದು ಸಾಣೇಹಳ್ಳಿ ಶಿವಾಚಾರ್ಯ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿ ಗ್ರಾಮದ ಎಸ್. ಡಿ.ಸಿದ್ಧರಾಮಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಸಾಂಸ್ಕೃತಿಕ ರೋವರ್ಸ್ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು, ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಪರಸ್ಪರ ಪ್ರೀತಿ,ವಿಶ್ವಾಸದಿಂದ ವಿದ್ಯಾಭ್ಯಾಸ ಮಾಡಬೇಕು, ನಡಾವಳಿಕೆ ಸರಿಯಿಲ್ಲದ ಶಿಕ್ಷಣ ವ್ಯರ್ಥವಾಗುವುದು, ನಮ್ಮ ನಾಡಿನಲ್ಲಿ ಹಣಕ್ಕೆ ಕೊರತೆ ಇಲ್ಲ ಇಚ್ಚಾ ಶಕ್ತಿಯ ಕೊರತೆ ಹೆಚ್ಚಿದೆ ಇಚ್ಛಾಶಕ್ತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದರು.

ನಮ್ಮ ನಾಡಿನಲ್ಲಿ ಎಲ್ಲಾ ಸೌಲಭ್ಯಗಳು ಇದೆ ನೈತಿಕತೆಯ ಕೊರತೆಯಿಂದ ಬದುಕು ನರಕ ಆಗ್ತಾ ಇದೆ. ಬದುಕು ನರಕ ಆಗದಂತೆ ನೈತಿಕ ನೆಲೆಗಟ್ಟು ಕುಸಿಯದ ಹಾಗೆಯೇ ನೋಡಿಕೊಳ್ಳಬೇಕು ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಧೀಶರಾದ ಹೆಚ್ ಬಿಲ್ಲಪ್ಪ ಮಾತನಾಡಿ ಶಿಕ್ಷಣ ಎಂದರೆ ನಾಲ್ಕು ಅಕ್ಷರ ಕಲಿತು ಬರೆಯುವುದೇ ಶಿಕ್ಷಣವಲ್ಲ ನಿಜವಾದ ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ಆಗುವುದು ಯಾವ ಸಮಾಜದಲ್ಲಿ ಸರಿಯಾದ ಶಿಕ್ಷಣ ಕೊಡುವುದಿಲ್ಲವೋ ಆ ಸಮಾಜ ಮುಂದುವರಿಯಲು ಸಾಧ್ಯವಿಲ್ಲ, ಯಾವ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಕಲಿಸುವುದಿಲ್ಲವೋ ಆ ಸಮಾಜ ಅಭಿವೃದ್ದಿ ಹೊಂದಲಾರದು ಎಂದು ಹೇಳಿದರು.

ಮನೋರಂಜನೆ ಜೀವನದ ಒಂದು ಭಾಗ ಇಂದಿನ ಶಿಕ್ಷಣ ನಮ್ಮನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತಿದೆ ನೈತಿಕ ಮೌಲ್ಯಗಳ ಕೊರತೆ ಎಲ್ಲ ಕ್ಷೇತ್ರದಲ್ಲೂ ಎದ್ದು ಕಾಣುತ್ತದೆ. ಕಳ್ಳನು ಕದಿಯಲಾಗದೇ ಇರುವುದು ಶಿಕ್ಷಣ ವಿದ್ಯೆ, ಶಿಕ್ಷಣದಿಂದ ಒಳ್ಳೆಯವರಾಗಬೇಕು, ಒಳ್ಳೆಯದನ್ನು ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಈಶ್ವರಪ್ಪ ಮುಂದಿನ ವರ್ಷದಿಂದ ವಾಣಿಜ್ಯಶಾಸ್ತ್ರ ಕೋರ್ಸ್ ಪ್ರಾರಂಭವಾಗುವುದು ಜಲ ಸಂಪತ್ತು,ನೆಲ ಸಂಪತ್ತು, ಭೂ ಸಂಪತ್ತು ಮತ್ತು ಶಿಕ್ಷಣ ಸಂಪತ್ತು ತುಂಬಾ ಮುಖ್ಯವಾದುದ್ದು. ಇದನ್ನು ಪ್ರತಿಯೊಬ್ಬರು ಜಾಗೃತಿಯಿಂದ ಸದ್ಭಳಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಹರಿಪ್ರಸಾದ್, ಎಸ್ ಸಿದ್ಧಪ್ಪ, ವಕೀಲರಾದ ಮಂಜುನಾಥ್,ಅಂಬಿಕಾ ಸ್ವಾಮಿ, ಗುಡ್ಡಪ್ಪ, ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನಪ್ಪ ಮಾತನಾಡಿದರು. ಪ್ರೇಮ, ಡಾ.ಲಕ್ಷ್ಮೀಕಾಂತ್, ಸೋಮಶೇಖರ್, ನಿಂಗಪ್ಪ, ರಮೇಶ್ ಪೂಜಾರ್,‌ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದರು.
ಅಧ್ಯಾಪಕ ಕಾಂತರಾಜ್, ಶಿವಣ್ಣ, ಮೇಘನಾ ಭಾಗವಹಿಸಿದರು.

About The Author

Leave a Reply

Your email address will not be published. Required fields are marked *