May 2, 2024

Chitradurga hoysala

Kannada news portal

ಬಂಜಾರ ಸಮಾಜ ಸಿಂಧು ಹರಪ್ಪ ನಾಗರೀಕತೆಯ ಇತಿಹಾಸ ಹೊಂದಿದೆ: ಗ್ರಾ.ಪ.ಅಭಿವೃದ್ಧಿ ಅಧಿಕಾರಿ ಇನಾಯತ್ ಬಾಷಾ

1 min read

 

ಬಂಜಾರ ಸಮಾಜ ಸಿಂಧು ಹರಪ್ಪ ನಾಗರೀಕತೆಯ ಇತಿಹಾಸ ಹೊಂದಿದೆ: ಗ್ರಾ.ಪ.ಅಭಿವೃದ್ಧಿ ಅಧಿಕಾರಿ ಇನಾಯತ್ ಬಾಷಾ

 

ಚಿತ್ರದುರ್ಗ ಹೊಯ್ಸಳ:

ಚಳ್ಳಕೆರೆ :

ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 285ನೇ ಸಂತ ಶ್ರೀ ಸೇವಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾ.ಪ.ಅಭಿವೃದ್ಧಿ ಅಧಿಕಾರಿ ಇನಾಯತ್ ಬಾಷಾ ಮಾತನಾಡಿ ಬಂಜಾರ ಸಮಾಜ ಸಿಂಧು ಹರಪ್ಪ ನಾಗರೀಕತೆಯ ಇತಿಹಾಸ ಹೊಂದಿರುವ ಇವರು ಬಂಜಾರ ಸಮಾಜವನ್ನು ಸೇವಾಲಾಲರು ಹೋರಾಟದ ಮೂಲಕ ಕಟ್ಟಿ.

ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದು ಆರಾಧಕರಾಗಿ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿದೆ ಉಳಿದರು.ಈ ಸಂತ ಶ್ರೀ ಸೇವಲಾಲರು ಬಂಜಾರ ಸಮಾಜದಲ್ಲಿನ ಮೌಡ್ಯತೆ ತೊಡೆದು ಹಾಕಿದರು ಹಾಗೂ ಸಂತ ಸೇವಲಾಲರು ಪವಾಡ ಪುರುಷರಾಗಿ, ಮಾರ್ಗದರ್ಶಕರಾಗಿ, ಚಿಂತಕರಾಗಿ, ಗುರುವಾಗಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. ಎಂದು ಅವರು ತಿಳಿಸಿದರು.

ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯರಾದ ಕಾಟಯ್ಯ ಮಾತನಾಡಿ ಸಮಾನತೆಯ ಬದುಕಿಗೆ ಹೆಚ್ಚು ಮಹಾತ್ವ ಕೊಟ್ಟು ಬಂಜಾರ ಸಮುದಾಯದವರಿಗೆ ಹೋರಾಡಿದ ಮಹಾನ್ ಸಂತ ಶ್ರೀ ಸೇವಲಾಲ್ ರವರು

ಇಂದಿನ ಯುವ ಪೀಳಿಗೆ ಸಂತ ಶ್ರೀ ಸೇವಲಾಲ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅವರಿಗೆ ಜನ್ಮ ದಿನಾಚರಣೆ ನಿಜವಾದ ಅರ್ಥ ಸಿಗುತ್ತದೆ ಎಂದರು. ಶ್ರೀ ಸಂತ ಸೇವಲಾಲರು ಆದರ್ಶ ವ್ಯಕ್ತಿಗಳಾಗಿದ್ದರು.ಮಹಾನ್ ಸಂತರು ಅವರು ನಾಡಿಗೆ ನೀಡಿದ ಕೊಡುಗೆ ಅಪಾರ ಮತ್ತು ಬಂಜಾರ ಸಮುದಾಯದ ಯುವಕರು ದಶ್ಚಟಕ್ಕೆ ಬಲಿಯಾಗದೇ ನಿಮ್ಮನ್ನು ಸಾಕಿ ಬೆಳಸಿದ ನಿಮ್ಮ ತಂದೆ-ತಾಯಿಯನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡರು.

ಗ್ರಾ.ಪಂ ಸದಸ್ಯ ರಾಜನಾಯ್ಕ, ರಾಮಚಂದ್ರನಾಯ್ಕ, ಸಂತ ಶ್ರೀ ಸೇವಲಾಲ್‌ರವರ ಜಯಂತಿಗೆ ಜವಬ್ದಾರಿ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ದಳವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮಂಜುಳ ಕೆ.ಟಿ ಬಸವರಾಜ್ ಉಪಾಧ್ಯಕ್ಷರು, ಸದಸ್ಯರುಗಳಾದ ಕಮಲಮ್ಮ ಗುರುವಪ್ಪ, ವಿಶಲಾಕ್ಷಿ ಸಣ್ಣಮಲ್ಲಯ್ಯ, ಚಂದ್ರಣ್ಣ, ಮಂಜಮ್ಮ ತಿಪ್ಪೇಸ್ವಾಮಿ, ಕಾಟಯ್ಯ ಬಿ. ನಲಜರುವಮ್ಮ, ಬಿ.ಬೊಮ್ಮಯ್ಯ, ಪಾಲಯ್ಯ, ಲಕ್ಷಮ್ಮ ಸಣ್ಣಪಾಲಯ್ಯ, ಕಾಮವ್ವ ಮಲ್ಲಿಕಾರ್ಜುನ, ರಾಜನಾಯ್ಕ, ಸಣ್ಣಪ್ಪಯ್ಯ, ಗೀತಮ್ಮ ನಾಗರಾಜ್, ರಾಜಪ್ಪ, ಬೋರಮ್ಮ, ಸಣ್ಣಓಬಯ್ಯ, ಬಸಮ್ಮ ಹೊನ್ನೂರಪ್ಪ, ಬಿ.ವಿರೇಶ್, ರಾಮಚಂದ್ರನಾಯ್ಕ, ಚಿನ್ನಮ್ಮ ಮ್ಯಕ್ಲಯ್ಯ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಗಂಗಾಧರ, ಕೊಲ್ಲಾರಪ್ಪ, ಗೀತಮ್ಮ, ಪರ್ವತಮಲ್ಲಯ್ಯ, ನಾಗರಾಜ್, ಹೊಟ್ಟೆಓಬಯ್ಯ, ತಿರುಚಿ ಮಹಾಸ್ವಾಮಿ, ಗ್ರಾಮಾಂತರ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಗಿರಿನಾಯ್ಕ, ನರಣಿನಾಯ್ಕ ಇನ್ನಿತರರು ಇದ್ದರು.

About The Author

Leave a Reply

Your email address will not be published. Required fields are marked *